ನವದೆಹಲಿ: ವಿಶ್ವ ಸಂಸ್ಥೆಯಲ್ಲಿ ತನ್ನ ಹವಾಮಾನ ಕುರಿತು ನಡೆದ ಸಭೆಯಲ್ಲಿ ತನ್ನ ಭಾಷಣದ ಮೂಲಕ ವಿಶ್ವದ ಗಮನ ಸೆಳೆದ 16 ವರ್ಷದ ಗ್ರೇಟಾ ಥನ್ಬರ್ಗ್ ಅವರಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಗ ಟ್ವೀಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. 


COMMERCIAL BREAK
SCROLL TO CONTINUE READING

ಆದರೆ ಈಗ ಗ್ರೇಟಾ ಅವರನ್ನು ಶ್ಲಾಘಿಸಿದ ಪ್ರಿಯಾಂಕಾ ಚೋಪ್ರಾ ನಡೆಗೆ ಮೆಚ್ಚುಗೆ ನಟಿ ಕಂಗನಾ ರಾವತ್  ಸಹೋದರಿ ರಂಗೋಲಿ ಚಾಂಡೆಲ್ ಟ್ವೀಟ್ ಮೂಲಕ ದೂಷಿಸಿದ್ದಾರೆ. 



ಪ್ರಿಯಾಂಕಾ ಗಾಂಧಿ ಗ್ರೇಟಾ ಭಾಷಣಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿ  ನಮ್ಮ ಮುಖಕ್ಕೆ ಹೊಡೆದಂತೆ ಹೇಳುವ ಮೂಲಕ ಈಗ ನೀವು ಹಲವಾರು ಪೀಳಿಗೆಯನ್ನು ಒಗ್ಗೂಡಿಸಿದ್ದಕ್ಕಾಗಿ ಧನ್ಯವಾದಗಳು' ಈ ವಿಚಾರವನ್ನು ನಮ್ಮ ತಿಳಿಸಿ ಇನ್ನು ಹೆಚ್ಚು ವಿಮರ್ಶಾತ್ಮಕವಾಗಿ ಕಾರ್ಯ ನಿರ್ವಹಿಸಲು ಮಾಡಿದ್ದಕ್ಕೆ' ಎಂದು ಟ್ವೀಟ್ ಮಾಡಿದ್ದಾರೆ.



ಇದಕ್ಕೆ ಈಗ ಆಕ್ಷೇಪ ವ್ಯಕ್ತಪಡಿಸಿರುವ ರಂಗೋಲಿ ಚಾಂದೇಲ್' ನೀವು ಮತ್ತೆ ಮರಳಿರುವುದು ಸಂತಸ ತಂದಿದೆ, ಹೌದು ಈ ಯುವ ಮಹಿಳೆ ಅದ್ಬುತವಾಗಿ ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ತನು ಮನ ಧನದಿಂದ ಪರಿಸರಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅವರ ಬಗ್ಗೆ ಸ್ವಲ್ಪ ಪ್ರೀತಿಯ ನುಡಿಗಳು ಬರಲಿ.. ಆಗ ಚೆನ್ನಾಗಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.


ಗ್ರೇಟಾ ಭಾಷಣಕ್ಕೆ ಪ್ರಿಯಾಂಕಾ ಚೋಪ್ರಾ ಅವರಲ್ಲದೆ, ಬಾಲಿವುಡ್ ಖ್ಯಾತನಾಮರಾದ ಕಾಜೋಲ್, ಅಜಯ್ ದೇವ್‌ಗನ್, ಆಲಿಯಾ ಭಟ್, ವರುಣ್ ಧವನ್ ಮತ್ತು ಇತರರು ಅವರನ್ನು ಶ್ಲಾಘಿಸಿದ್ದರು.