Surya Kanguva movie : ಸೂರರೈ ಪೊಟ್ರು, ಜೈ ಭೀಮ್, ಸಿಂಗಂ 3 ಸೇರಿದಂತೆ ಹಲವಾರು ಹಿಟ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ಟಾಲಿವುಡ್‌ ನಟ ಸೂರ್ಯ ನಟನೆಯ ಮುಂಬರುವ ಚಿತ್ರದ ಟೈಟಲ್‌ ಅನೌನ್ಸ್‌ ಮಾಡಲಾಗಿದೆ. ಇಷ್ಟು ದಿನ ʼಸೂರ್ಯ 42ʼ ಎಂದು ಹೆಸರಿಸಲಾಗಿದ್ದ, ಸಿನಿಮಾಗೆ ʼಕಂಗುವʼ ಎಂಬ ಟೈಟಲ್‌ ಫಿಕ್ಸ್‌ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಹೌದು.. ನಟ ಸೂರ್ಯ ತಮ್ಮ 42ನೇ ಚಿತ್ರದ ಟೈಟಲ್‌ ರಿವೀಲ್‌ ಟೀಸರ್‌ ಅನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಡೈರೆಕ್ಟರ್‌ ಶಿವ ಮತ್ತು ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷ ನೀಡಿದೆ. #Kanguva ಎಂದು ಬರೆದುಕೊಂಡು ಚಿತ್ರದ ಶೀರ್ಷಿಕೆಯ ನೋಟದ ವಿಡಿಯೋ ಲಿಂಕ್‌ ಶೇರ್‌ ಮಾಡಿದ್ದಾರೆ. ಟೈಟಲ್‌ ರಿವೀಲ್‌ ಟೀಸರ್‌ನಲ್ಲಿ ಸಿನಿಮಾದ ಬಿಡುಗಡೆ ದಿನಾಂಕ ಮತ್ತು ಕಥಾವಸ್ತುವನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ, ಟೀಸರ್ ಯುದ್ಧಭೂಮಿಯ ರಣ ರೋಚಕತೆ ತೋರಿಸುತ್ತದೆ. ಅಲ್ಲದೆ, ದೇವಿ ಶ್ರೀ ಪ್ರಸಾದ್ ನೀಡಿದ ಹಿನ್ನೆಲೆ ಸಂಗೀತ ಅದ್ಭುತವಾಗಿದೆ.


Hebah Patel : ʼಅಧ್ಯಕ್ಷ ನಟಿʼಯನ್ನು ಬುರ್ಕಾದಲ್ಲಿ ನೋಡಿ ಶಾಕ್‌ ಆದ ಪ್ಯಾನ್ಸ್‌..!


ಟೈಟಲ್ ರಿವೀಲ್ ಟೀಸರ್ ನೋಡಿದ ನಂತರ, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ʼಟೀಸರ್‌ ನೋಡಿ ಗೂಸ್ಬಂಪ್ಸ್ ಬಂತುʼ ಅಂತ ಕಾಮೆಂಟ್‌ ಮಾಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಕೆಲವರು ಅದ್ಭುತವಾಗಿದೆ ಅಂತ ಹೇಳುತ್ತಿದ್ದಾರೆ. ಅಲ್ಲದೆ, ಚಿತ್ರದ BGM ಅನ್ನು ಶ್ಲಾಘಿಸಿದ್ದಾರೆ. ಸೂರ್ಯ ಅಭಿಮಾನಿಗಳು ಕೂಡ ಚಿತ್ರಕ್ಕೆ ಶುಭ ಹಾರೈಸಿ, ಬಿಗ್‌ ಸ್ಕ್ರೀನ್‌ ಮೇಲೆ ಸಿನಿಮಾ ನೋಡಲು ಕಾಯಲು ಸಾಧ್ಯವಿಲ್ಲ ಅಂತ ಕುತೂಹಲ ವ್ಯಕ್ತಪಡಿಸಿದ್ದಾರೆ.


ಶಿವ ನಿರ್ದೇಶನದ ಕಂಗುವ ಚಿತ್ರ 10 ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸೂರ್ಯ ಅವರನ್ನು ಹೊರತುಪಡಿಸಿ ಯೋಗಿ ಬಾಬು, ದಿಶಾ ಪಟಾನಿ ಮತ್ತು ಕೋವೈ ಸರಳಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು 2D ಮತ್ತು 3D ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸೂರ್ಯ 5 ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಕೆ ಜ್ಞಾನವೇಲ್ ರಾಜಾ ನಿರ್ಮಿಸಿದ್ದಾರೆ. 2024 ರ ಆರಂಭದಲ್ಲಿ ಸಿನಿಮಾ ತೆರೆ ಮೇಲೆ ಅಪ್ಪಳಿಸಲಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.