ಮಕ್ಕಳನ್ನು ನೆನೆದು ಭಾವನಾತ್ಮಕ ಫೋಟೋ ಹಂಚಿಕೊಂಡ ಕನಿಕಾ ಕಪೂರ್
ಲಾಕ್ಡೌನ್ನಿಂದಾಗಿ ಮಕ್ಕಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಕನಿಕಾ ಕಪೂರ್ ತಮ್ಮ ಮಕ್ಕಳನ್ನು ನೆನೆದು ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.
ನವದೆಹಲಿ: ಬಾಲಿವುಡ್ ಗಾಯಕಿ ಕನಿಕಾ ಕಪೂರ್ (Kanika Kapoor) ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ ಲಕ್ನೋದ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕರೋನಾ ಪಾಸಿಟಿವ್ ಆದ ಕಾರಣ ಕ್ವಾರಂಟೈನ್ ನಲ್ಲಿ ಇದ್ದಾಗಿನಿಂದಲೂ ಆಕೆ ತನ್ನ ಮಕ್ಕಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕೊರೋನಾವೈರಸ್ ನಿಂದ ಚೇತರಿಸಿಕೊಂಡ ಬಳಿಕ ಆಕೆ ತನ್ನ ಮನೆಗೆ ಮರಳಿದರಾದರೂ ಲಾಕ್‌ಡೌನ್ ಇರುವ ಕಾರಣ ಲಕ್ನೋದಲ್ಲಿಯೇ ಉಳಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮೂವರೂ ಮಕ್ಕಳಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ನೆನಪಿನ ನೋವನ್ನು ತಿಳಿಸಿದ್ದಾರೆ.
ಸದ್ಯ ಕನಿಕಾ ಕಪೂರ್ ತನ್ನ ಹೆತ್ತವರೊಂದಿಗೆ ಲಕ್ನೋದಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಮೊದಲು ಅವರು ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಷಕರೊಂದಿಗೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆತ್ತವರೊಂದಿಗೆ ಸಮಯ ಕಳೆಯುತ್ತಿರುವುದು ಒಂದು ಒಳ್ಳೆಯ ಮುದ ನೀಡುತ್ತಿದೆ, ಆದರೆ ತನ್ನ ಮಕ್ಕಳಿಲ್ಲದೆ ಈ ಸಂತೋಷವು ಅಪೂರ್ಣವೆಂದು ತೋರುತ್ತಿದೆ ಎಂದವರು ಬರೆದಿದ್ದಾರೆ.
ನಾನೂ ನಿಮ್ಮನ್ನು ತುಂಬಾ ಮಿಸ್ ಮಾಡ್ಕೋತಾ ಇದೀನಿ ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ತನ್ನ ಮೂವರು ಮಕ್ಕಳಾದ ಅಯಾನಾ, ಸಮಾರಾ ಮತ್ತು ಯುವರಾಜ್ ಫೋಟೋವನ್ನು ಹಂಚಿಕೊಂಡಿರುವ ಕನಿಕಾ ನೀವು ಪ್ರೀತಿಸುವ ಎಲ್ಲವೂ ಅಥವೂ ನೀವು ಪ್ರೀತಿಸುವ ಯಾರಾದರೂ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ. ನಿಮಗೆ ಬೇಕಾದ ಎಲ್ಲವೂ ನಿಮ್ಮ ಬಳಿ ಇದೆ ಎಂದು ಬರೆದಿದ್ದಾರೆ.
ಕನಿಕಾ ಕಪೂರ್ ತನ್ನ ಮಕ್ಕಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವಿರಳವಾಗಿ ಹಂಚಿಕೊಳ್ಳುತ್ತಾರೆ. ಆದರೆ ಲಾಕ್‌ಡೌನ್‌ನಲ್ಲಿರುವ ಕಾರಣ ಮಕ್ಕಳನ್ನು ಭೇಟಿಯಾಗಲಾಗದೆ ಕನಿಕಾ ಕಪೂರ್ ಈಗ ತಮ್ಮ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅವರ ಭಾವನೆಗಳನ್ನು ಹೇಳಿದ್ದಾರೆ.