ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ರಿಲೀಫ್, ಜಾಮೀನು ನೀಡಿದ ಸುಪ್ರೀಂಕೋರ್ಟ್, 140 ದಿನಗಳ ಜೈಲುವಾಸ ಅಂತ್ಯ
ಡ್ರಗ್ಸ್ ಮಾರಾಟ ದಂಧೆ ಪ್ರಕರಣ (Drugs Case)ದಲ್ಲಿ ಜೈಲುಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿ (Ragini Dwivedi) ಗೆ ಸುಪ್ರೀಂ ಕೋರ್ಟ್ Today ಜಾಮೀನು ಮಂಜೂರು (Bail) ಮಾಡಿದೆ.
ನವದೆಹಲಿ : ಬಹುಕುತೂಹಲ ಕೆರಳಿಸಿದ್ದ ಡ್ರಗ್ಸ್ ಮಾರಾಟ ದಂಧೆ ಪ್ರಕರಣ (Drugs Case)ದಲ್ಲಿ ಜೈಲುಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿ (Ragini Dwivedi) ಗೆ ಸುಪ್ರೀಂ ಕೋರ್ಟ್ Today ಜಾಮೀನು ಮಂಜೂರು (Bail) ಮಾಡಿದೆ. ಈ ಮೂಲಕ ತುಪ್ಪದ ಬೆಡಗಿಯ 140 ದಿನಗಳ ಜೈಲುವಾಸವೂ ಅಂತ್ಯಗೊಳ್ಳಲಿದೆ.
ಈ ಹಿಂದೆ ಸೆಷನ್ಸ್ ಮತ್ತು ಹೈಕೋರ್ಟ್(High Court) ರಾಗಿಣಿಗೆ ಜಾಮೀನು ನಿರಾಕರಿಸಿತ್ತು. ಹಾಗಾಗಿ, ರಾಗಿಣಿ (Ragini Dwivedi) ಪರ ವಕೀಲರು ನವೆಂಬರ್ ಕೊನೆಯ ವೇಳೆಗೆ ಸುಪ್ರೀಂಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ಇವತ್ತಿಗೆ ಮುಂದೂಡಲಾಗಿತ್ತು. ಇನ್ನೂ ಪ್ರಕರಣ ತನಿಖೆಯ ಹಾದಿಯಲ್ಲಿರುವುದರಿಂದ ರಾಗಿಣಿಗೆ ಜಾಮೀನು ನೀಡಬಾರದು ಎಂದು ಸಿಸಿಬಿ (CCB) ಪೊಲೀಸರ ಪರ ವಕೀಲರು ಸುಪ್ರೀಂ ಕೋರ್ಟಿನಲ್ಲಿ(Supreme Court) ವಾದಿಸಿದ್ದರು. ಉಭಯ ವಕೀಲರ ವಾದ ಆಲಿಸಿದ ಸುಪ್ರೀಂ ಕೋರ್ಟ್, ರಾಗಿಣಿ ದ್ವಿವೇದಿಗೆ ಕೊನೆಗೂ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ :Sumalatha Ambareesh: ನುಡಿದಂತೆ ನಡೆದ ಸಂಸದೆ ಸುಮಲತಾ ಅಂಬರೀಶ್..!
2020ರ ಸೆ. 4ರಂದು ರಾಗಿಣಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬೆಂಗಳೂರಿನಲ್ಲಿರುವ ಅವರ ಅಪಾರ್ಟ್ಮೆಂಟ್ ನಲ್ಲಿ ರಾಗಿಣಿ ಅವರನ್ನು ಬಂಧಿಸಲಾಗಿತ್ತು. ಎನ್‌ಡಿಪಿಎಸ್ (Narcotics Drugs and Psychotropic Substances Act.) ಮತ್ತು ಐಪಿಸಿ ಕಾಯ್ದೆಗಳ ಅಡಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿದ್ದಾರೆ ರಾಗಿಣಿ.
ಇದೇ ಪ್ರಕರಣದಲ್ಲಿ ಬಂಧನದಲ್ಲಿದ್ದ ಮತ್ತೊಬ್ಬ ನಟಿ ಸಂಜನಾ ಗಲ್ರಾನಿಗೆ (Sanjana Garlani) ಕಳೆದ ಡಿಸೆಂಬರ್ 11ರಂದು ಜಾಮೀನು ಸಿಕ್ಕಿತ್ತು. ಬೆಂಗಳೂರಿನ ಸ್ಟಾರ್ ಹೊಟೇಲ್ಸ್, ಪಬ್, ಹೊರವಲಯದ ಫಾರ್ಮ್ ಹೌಸ್ ಗಳಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದ ಆರೋಪ ರಾಗಿಣಿ ಮತ್ತು ಸಂಜನಾ ಮೇಲಿತ್ತು. ಪಂಜಾಬ್, ಗೋವಾ, ಮಹಾರಾಷ್ಟ್ರ ಮತ್ತು ವಿದೇಶ (International drug cartel)ಗಳಿಂದ ಮಾದಕ ವಸ್ತುಗಳನ್ನು ತರಿಸಿ ಅದನ್ನು ಪಾರ್ಟಿಗೆ ಪೂರೈಸುವ ಆರೋಪವೂ ಅವರ ಮೇಲಿತ್ತು. ಇತ್ತೀಚೆಗಷ್ಟೇ ಈ ಪ್ರಕರಣದ ಮತ್ತೋರ್ವ ಆರೋಪಿ ಆದಿತ್ಯ ಆಳ್ವಾ (Aditya Alva) ಅವರನ್ನೂ ಸಿಸಿಬಿ (CCB) ಪೊಲೀಸರು ತಮಿಳುನಾಡಿನ ಚೆನ್ನೈನಲ್ಲಿ ಬಂಧಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.