Kannada Actress Aarathi Life Story : ನಟಿ ಆರತಿ.. ಆ ಕಾಲದ ಟಾಪ್‌ ನಟಿಯರಲ್ಲಿ ಒಬ್ಬರು. ಆರತಿಯ ಅಂದ ಚಂದ, ನಟನೆ ನೋಡುಗರ ಮನಸೆಳೆದಿತ್ತು. ಸಾಕಷ್ಟು ಸ್ಟಾರ್‌ಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್‌. ಆರತಿ ಕನ್ನಡ ಚಿತ್ರಂಗಕ್ಕೆ ಕಾಲಿಡುವಾಗ ಮಿನುಗುತಾರೆ ಕಲ್ಪನಾ ಮತ್ತು ಪುಟ್ಟಣ್ಣ ಕಣಗಾಲ್‌ ನಡುವೆ ವೈಮನಸ್ಸು ಹುಟ್ಟಿತ್ತು. ಮತ್ತೋರ್ವ ನಟಿಯನ್ನು ತಂದು ಸ್ಟಾರ್​ ಮಾಡುತ್ತೇನೆ ಎಂದು ಪುಟ್ಟಣ್ಣ ಕಣಗಾಲ್​ ಅವರು ಕಲ್ಪನಾ ಅವರಿಗೆ ಚಾಲೆಂಜ್‌ ಮಾಡಿದ್ದರು. ಈ ಪಂದ್ಯದಲ್ಲಿ ಗೆದ್ದ ಪುಟ್ಟಣ್ಣ ಕಣಗಾಲ್‌, ಕಲ್ಪನಾ ಮುಂದೆ ಆರತಿಗೆ ಸ್ಟಾರ್ ಪಟ್ಟ ತಂದುಕೊಟ್ಟರು. ಈ ಸಮಯದಲ್ಲಿಯೇ ಆರತಿ ಮತ್ತು ಪುಟ್ಟಣ್ಣ ಕಣಗಾಲ್‌ ನಡುವೆ ಪ್ರೀತಿ ಹುಟ್ಟಿತು. 1975ರಲ್ಲಿ ಬಿಳಿ ಹೆಂಡ್ತಿ ಸಿನಿಮಾ ಶೂಟಿಂಗ್​ ವೇಳೆ ಪುಟ್ಟಣ್ಣ ಕಣಗಾಲ್‌ ಮತ್ತು ಆರತಿ ಮದುವೆಯಾದರು. 


COMMERCIAL BREAK
SCROLL TO CONTINUE READING

ಶೂಟಿಂಗ್​ ಸ್ಪಾಟ್​ಗೆ ಮದುವೆಯಾಗಿ ಎಂಟ್ರಿಕೊಟ್ಟಿದ್ದರು ಈ ಜೋಡಿ. ಕೇವಲ ಸೆಟ್‌ನಲ್ಲಿದ್ದವರಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ಶಾಕ್‌ ಆಗಿತ್ತು. ದಾಂಪತ್ಯ ಜೀವನವೂ ಸುಖವಾಗಿತ್ತು. ಯಶಸ್ವಿನಿ ಎಂಬ ಮಗಳು ಕೂಡ ಜನಿಸಿದಳು. ತಮ್ಮ ಸಿನಿಮಾಗಳಲ್ಲಿ ಇಬ್ಬರೂ ಬ್ಯುಸಿಯಾಗಿರುತ್ತಿದ್ದರು. ಆದರೆ ಅದೊಂದು ದಿನ ಮನಸ್ತಾಪದ ಕಿಡಿ ಹೊತ್ತೇ ಬಿಟ್ಟಿತು. ಪುಟ್ಟಣ್ಣ ಕಣಗಾಲ್​ ಅವರ ಕೋಪವೇ ಸಂಬಂಧದಲ್ಲಿ ಬಿರುಕು ಮೂಡಿಸಿತು. ಈ ಸಮಯದಲ್ಲಿ ಆರತಿಗೆ ಎಂ. ರಘುರಾಮ್​ ಅವರ ಪರಿಚಯವಾಯಿತು. ಎಂ.ರಘುಪತಿ ಅವರು ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪ್ರವಾಸೋದ್ಯಮ, ಕಾರ್ಮಿಕ, ಶಿಕ್ಷಣ ಸಚಿವರಾಗಿದ್ದರು. 


ಇದನ್ನೂ ಓದಿ : Madhuri Dixit : ಈ ಕ್ರಿಕೆಟಿಗನಿಗೆ ಮನಸೋತಿದ್ದರು ಮಾಧುರಿ ದೀಕ್ಷಿತ್, ಶುರುವಾಗುತ್ತಲೇ ಅಂತ್ಯವಾದ ಪ್ರೇಮಕಹಾನಿ!!


ಆರತಿ ಮತ್ತು ಎಂ.ರಘುಪತಿ ನಡುವೆ ದಿನಕಳೆದಂತೆ ಒಳ್ಳೆಯ ಭಾಂದವ್ಯ ಬೆಳೆಯಿತು. ಆರತಿಗೆ ಪುಟ್ಟಣ್ಣ ಕಣಗಾಲ್‌ ಮೇಲಿನ ಪ್ರೀತಿ ಕಡಿಮೆಯಾಗಲು ಆರಂಭಿಸಿತು. ಆರತಿ ಮತ್ತು ಎಂ.ರಘುಪತಿ ನಡುವಿನ ಅತಿಯಾದ ಸ್ನೇಹವನ್ನು ಪುಟ್ಟಣ್ಣ ಕಣಗಾಲ್​ ಅವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಇದರಿಂದಲೇ ಖಿನ್ನತೆಗೆ ಒಳಗಾದರು. ಸಿನಿಮಾಗಳಿಂದ ದೂರವಾದರು. ಕೊನೆಗೆ ಹಾರ್ಟ್ ಅಟ್ಯಾಕ್​ ನಿಂದ ಪುಟ್ಟಣ್ಣ ಕಣಗಾಲ್‌ ಸಾವನ್ನಪ್ಪಿದ್ದರು. 
 
ಆರತಿ ಅವರನ್ನು ಎಂಎಲ್‌ಸಿ ಮಾಡಲು ರಾಮಕೃಷ್ಣ ಹೆಗಡೆ ಅವರಿಗೆ ಒತ್ತಾಯ ಮಾಡಿದ್ದರಂತೆ. ವಿವಾದಕ್ಕೆ ಒಳಗಾದ ವ್ಯಕ್ತಿಗೆ ಆ ಸ್ಥಾನ ನೀಡುವುದು ಒಳ್ಳೆಯದಲ್ಲ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದರಂತೆ. ಆದರೆ ಕೊನೆಗೂ ಎಂ.ರಘುಪತಿ​ ಅವರು ಆರತಿ ಅವರನ್ನು ಎಂಎಲ್‌ಸಿ ಮಾಡಿದರು. ಜೆಪಿ ನಗರದಲ್ಲಿ ಬಿಡಿಎ ಕಡೆಯಿಂದ ದೊಡ್ಡ ಬಂಗಲೆಯನ್ನು ಸಿಗುವಂತೆ ಮಾಡಿದರು. ಈ ವೇಳೆ ಇವರಿಬ್ಬರ ಸಂಬಂಧದ ಬಗ್ಗೆ ಹಲವಾರು ವದಂತಿಗಳು ಹಬ್ಬಿದ್ದವು. 


ಒಂದು ದಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವೊಂದರಲ್ಲಿ ಆರತಿಯ ಕೈ ಹಿಡಿದು ಎಂ.ರಘುಪತಿ ಕಾಣಿಸಿಕೊಳ್ಳುತ್ತಾರೆ. ಅದೇ ಕಾರ್ಯಕ್ರಮಕ್ಕೆ ಬಂದಿದ್ದ ಸಂಜೆವಾಣಿ ಪತ್ರಿಕೆ ಪರ್ತಕರ್ತರು ಈ ಬಗ್ಗೆ ಸುದ್ದಿ ಮಾಡುತ್ತಾರೆ. ಇಬ್ಬರು ಮದುವೆಯಾಗಿದ್ದಾರೆ ಎಂದು ಪ್ರಕಟಣೆ ಹೊರಡಿಸುತ್ತಾರೆ. ಪತ್ರಕರ್ತನ ವಿರುದ್ಧ ಎಂ.ರಘುಪತಿ ಕೆಂಡಾಮಂಡಲರಾಗುತ್ತಾರೆ, ಆದರೆ ವಿಚಾರ ಸತ್ಯವಾದ ಕಾರಣ ಏನೂ ಮಾಡಲು ಆಗುವುದಿಲ್ಲ. 


ಇದನ್ನೂ ಓದಿ : Ranu Mandal : ಲತಾ ಮಂಗೇಶ್ಕರ್‌ ಬಗ್ಗೆ ರಾನು ಮಂಡಲ್ ಸೊಕ್ಕಿನ ಮಾತು, ಕೆಂಡಾಮಂಡಲರಾದ ಫ್ಯಾನ್ಸ್‌


ಇದೇ ಸಮಯದಲ್ಲಿ ಅನೇಕರು ಪುಟ್ಟಣ್ಣ ಕಣಗಾಲ್‌ ಸಾವಿಗೆ ಆರತಿಯೇ ಕಾರಣ ಎಂಬ ಚುಚ್ಚು ಮಾತುಗಳನ್ನಾಡುತ್ತಾರೆ. ಈ ನಿಂದನೆಯನ್ನು ಆರತಿಗೆ ಸಹಿಸಿಕೊಳ್ಳಲು ಆಗಲ್ಲ. ಆರತಿ ಪತಿ ರಘುಪತಿ ಎಂಬ ವದಂತಿಗಳು ಜೋರಾಗುತ್ತವೆ. ತನ್ನ ಮಗಳನ್ನು ಸಹ ನೋಡಿಕೊಳ್ಳಲಾಗದ ಸ್ಥಿತಿಗೆ ಆರತಿ ತಲುಪುತ್ತಾರೆ. ಈ ವೇಳೆಯೇ ಎಂ.ರಘುಪತಿ ಮತ್ತು ಆರತಿ ನಡುವೆ ವೈಮನಸ್ಸು ಶುರುವಾಗುತ್ತದೆ. ಆರತಿ ಸಿನಿರಂಗದಿಂದಲೂ ದೂರ ಸರಿಯುತ್ತಾರೆ. ಕೊನೆಗೆ ಎಂ ರಘುಪತಿ ಕೂಡ ದೂರವಾಗುತ್ತಾರೆ. ಪುಟ್ಟಣ್ಣ ಕಣಗಾಲ್‌ರಂತೆ ಆರತಿ ದೂರವಾದ ಬಳಿಕ ಎಂ ರಘುಪತಿ ಖಿನ್ನತೆಗೆ ಒಳಗಾಗುತ್ತಾರೆ. ರಾಜಕೀಯದಿಂದಲೂ ದೂರವಾಗುತ್ತಾರೆ. 


ಈ ಎಲ್ಲ ಘಟನೆಗಳು ಬಳಿಕ ನಟಿ ಆರತಿ ಹಾರ್ಡ್​ವೇರ್​ ಇಂಜಿನಿಯರ್​ ಆಗಿದ್ದ ಚಂದ್ರಶೇಖರ್​ ಗೌಡ ದೇಸಾಯಿ ಅವರ ಕೈ ಹಿಡಿಯುತ್ತಾರೆ. 1987ರಲ್ಲಿ ಆರತಿ ಅವರು ತಮ್ಮ ಪತಿ ಚಂದ್ರಶೇಖರ್‌ ಮತ್ತು ಮಗಳ ಜೊತೆ ವಿದೇಶಕ್ಕೆ ಶಿಫ್ಟ್​ ಆದರು. ಅಲ್ಲಿಂದಲೇ ಅನೇಕ ಸಾಮಾಜಿಕ ಕೆಲಗಳನ್ನು ಆರತಿ ಮಾಡಿದರು. ತಾವು ದುಡಿದ ಹಣವನ್ನೆಲ್ಲ ದಾನ ಮಾಡಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.