ಗಂಗೂಲಿ ಯನ್ನು ಪ್ರೀತಿಸಿದ್ದ ಕನ್ನಡದ ಸ್ಟಾರ್ ನಟಿ.. ಮೂವರು ಖ್ಯಾತ ನಟರೊಂದಿಗೆ ಅಫೇರ್, ಆದರೂ ಒಂಟಿ ಜೀವನ..!
Kannada actress Nagma: ನಗ್ಮಾ ಅವರ ಸಂಬಂಧಗಳ ಬಗ್ಗೆ ಹಲವು ವದಂತಿಗಳಿವೆ. ಮೂವರು ಸ್ಟಾರ್ ಹೀರೋಗಳ ಜೊತೆಗೆ ಒಬ್ಬ ಕ್ರಿಕೆಟಿಗ ಈ ಪಟ್ಟಿಯಲ್ಲಿದ್ದಾರೆ.
Kannada actress Nagma: ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಒಂದು ಕಾಲದ ಸ್ಟಾರ್ ನಟಿ ಆಗಿ ಮೆರೆದಿದ್ದರು ನಗ್ಮಾ. 90ರ ದಶಕದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದ್ದರು. ನಟಿ ನಗ್ಮಾ ಮೊದಲ ಹೆಸರು ನಂದಿತಾ ಅರವಿಂದ ಮೊರಾರ್ಜಿ. ನಗ್ಮಾ ಅವರ ತಂದೆ ಹಿಂದೂ, ತಾಯಿ ಮುಸ್ಲಿಂ ಆಗಿದ್ದರು. ಮುಂಬೈನಲ್ಲಿ ಓದು ಮುಗಿಸಿದ ನಗ್ಮಾ ಸಲ್ಮಾನ್ ಖಾನ್ ಜೊತೆ ಬಾಘಿ ಚಿತ್ರದ ಮೂಲಕ ನಾಯಕಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 1990ರಲ್ಲಿ ಈ ಸಿನಿಮಾ ರಿಲೀಸ್ ಆಯಿತು. ಇದಾದ ನಂತರ ನಗ್ಮಾ ಸಿನಿರಂಗದಲ್ಲಿ ಸೂಪರ್ ಸ್ಟಾರ್ ನಾಯಕಿಯಾದರು. ಹಿಂದಿ ನಂತರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಭೋಜ್‌ಪುರಿ ಸಿನಿಮಾಗಳಲ್ಲಿ ನಗ್ಮಾ ನಟಿಸಿದರು.
ಸಿನಿಮಾಗಳ ಮೂಲಕ ಸುದ್ದಿಯಾದ ನಗ್ಮಾ, ಹಲವು ಬಾರು ವೈಯಕ್ತಿಕ ಜೀವನದಿಂದಲೂ ಮುಖ್ಯಾಂಶದಲ್ಲಿದ್ದರು. ನಗ್ಮಾ ಅವರ ಸಂಬಂಧಗಳ ಬಗ್ಗೆ ಹಲವು ವದಂತಿಗಳಿವೆ. ಮೂವರು ಸ್ಟಾರ್ ಹೀರೋಗಳ ಜೊತೆಗೆ ಒಬ್ಬ ಕ್ರಿಕೆಟಿಗ ಈ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: BBK10 Winner: ಕಾರ್ತಿಕ್ ಕೈ ಸೇರಲ್ಲ ಸಂಪೂರ್ಣ 50 ಲಕ್ಷ ರೂಪಾಯಿ.. ವಿನ್ನರ್‌ಗೆ ಸಿಗುವ ಮೊತ್ತ ಇಷ್ಟೇ.!
90ರ ದಶಕದಲ್ಲಿ ನಗ್ಮಾ ಯುವಕರ ಕನಸಿನ ರಾಣಿ. ಆ ಸಮಯದಲ್ಲಿ ಅವರು ಸಲ್ಮಾನ್ ಖಾನ್, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್, ರಜನಿಕಾಂತ್, ಅಮಿತಾಬ್ ಬಚ್ಚನ್, ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್‌ಕುಮಾರ್ ಅವರಂತಹ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ. ಸಿನಿಮಾ ವಿಚಾರದಲ್ಲಿ ಮಾತ್ರವಲ್ಲ.. ರಾಜಕೀಯದಲ್ಲೂ ನಗ್ಮಾ ತಮ್ಮ ಶಕ್ತಿ ತೋರಿಸಿದ್ದಾರೆ. ಆಕೆ ನಾಲ್ವರು ವಿವಾಹಿತ ಪುರುಷರೊಂದಿಗೆ ಸಂಬಂಧ ಹೊಂದಿದ್ದರು ಎಂಬ ಸುದ್ದಿ ಆ ಸಮಯದಲ್ಲಿ ಸಂಚಲನ ಮೂಡಿಸಿತ್ತು. ಇದರಲ್ಲಿ ಮೂವರು ಹೀರೋಗಳು.. ಒಬ್ಬ ಕ್ರಿಕೆಟಿಗ ಇದ್ದಾರೆ ಎಂಬುದು ಎಲ್ಲರನ್ನೂ ನಿಬ್ಬೆರಗಾಗಿಸಿತ್ತು.
ವರದಿಗಳ ಪ್ರಕಾರ, ಆ ಸಮಯದಲ್ಲಿ ಅವರು ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿಯನ್ನು ಪ್ರೀತಿಸಿದ್ದರು. ಆ ವೇಳೆ ತಿರುಪತಿಯಲ್ಲಿ ರಹಸ್ಯ ವಿವಾಹ ನಡೆದಿರುವ ಬಗ್ಗೆ ವದಂತಿ ಕೂಡ ಹಬ್ಬಿತ್ತು. ಬಳಿಕ ಸೌರವ್ ಪತ್ನಿಯ ಮಧ್ಯಸ್ಥಿಕೆಯಿಂದ ಇಬ್ಬರ ನಡುವಿನ ಪ್ರೇಮ ಸಂಬಂಧ ಮುರಿದು ಬಿದ್ದಿತ್ತು.
ಇದನ್ನೂ ಓದಿ: Bigg Boss: ʼಅವರ ಮೇಲೆ ನನಗೆ...ʼ ಸಹ ಸ್ಪರ್ಧಿಯೊಂದಿಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಬಿಗ್‌ಬಾಸ್ ವಿನ್ನರ್!
ಸೌರವ್ ಗಂಗೂಲಿ ನಂತರ ನಟ ಶರತ್ ಕುಮಾರ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ ಎಂದುವದಂತಿಗಳಿವೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ನಗ್ಮಾ ಹವಾ ಕಡಿಮೆಯಾದ ನಂತರ, ಅವರು ಭೋಜ್‌ಪುರಿ ಕಡೆಗೆ ಮುಖ ಮಾಡಿದರು. ಅಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಸಮಯದಲ್ಲಿ ಖ್ಯಾತ ಭೋಜ್‌ಪುರಿ ಸೂಪರ್‌ಸ್ಟಾರ್ ರವಿಕಿಶನ್ ಜೊತೆಯೂ ಸಂಬಂಧ ಹೊಂದಿದ್ದರು ಎನ್ನಲಾಗುತ್ತದೆ. ಆ ವೇಳೆ ರವಿಕಿಶನ್ ಪತ್ನಿ ಪ್ರೀತಿ ಅವರೊಂದಿಗೆ ಜಗಳವಾಡಿದ್ದರು. ಅದಾದ ನಂತರ ನಗ್ಮಾ ಜತೆಗಿನ ರವಿಕಿಶನ್ ಅಫೇರ್ ಅಂತ್ಯಗೊಂಡಿತ್ತು.
ರವಿಕಿಶನ್ ಜೊತೆಗಿನ ಬ್ರೇಕ್ ಅಪ್ ನಂತರ ನಗ್ಮಾ ಮತ್ತೊಬ್ಬ ಭೋಜ್‌ಪುರಿ ಸ್ಟಾರ್ ಹೀರೋ ಮನೋಜ್ ತಿವಾರಿ ಜೊತೆ ಅಫೇರ್ ಹೊಂದಿದ್ದರು ಎಂಬ ವದಂತಿ ಶುರುವಾಯಿತು. ಆ ಸಮಯದಲ್ಲಿ ರವಿಕಿಶನ್ ಮತ್ತು ಮನೋಜ್ ತಿವಾರಿ ನಡುವೆ ಭೋಜ್‌ಪುರಿಯಲ್ಲಿ ದೊಡ್ಡ ಪೈಪೋಟಿ ಇತ್ತು. ಆದರೆ ಈ ಸುದ್ದಿ ಬಂದಾಗ ಸೌರವ್ ಗಂಗೂಲಿ, ಶರತ್ ಕುಮಾರ್, ರವಿಕಿಶನ್ ಮತ್ತು ಮನೋಜ್ ತಿವಾರಿ ಎಲ್ಲರೂ ಮದುವೆಯಾಗಿದ್ದರು ಎಂಬುದು ಗಮನಾರ್ಹ. ರವಿಕಿಶನ್ ಮತ್ತು ಮನೋಜ್ ತಿವಾರಿ ಈಗ ಬಿಜೆಪಿಯ ಲೋಕಸಭೆ ಸದಸ್ಯರಾಗಿದ್ದಾರೆ. ನಗ್ಮಾ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಿ, ರಾಜಕೀಯ ಪ್ರವೇಶಿಸಿದ್ದರು. ಉತ್ತರ ಪ್ರದೇಶದಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು.
ಕನ್ನಡದ ಸಿನಿಮಾಗಳಲ್ಲಿ ಸಹ ನಟಿ ನಗ್ಮಾ ಅಭಿನಯಿಸಿದ್ದಾರೆ. ಶಿವರಾಜ್‌ಕುಮಾರ್ ಜೊತೆ ಕುರುಬನ ರಾಣಿ ಸಿನಿಮಾದಲ್ಲಿ ನಟಿಸುವ ಮೂಲಕ ನಗ್ಮಾ ಕನ್ನಡಕ್ಕೆ ಎಂಟ್ರಿಕೊಟ್ಟರು. ಬಳಿಕ ರವಿಚಂದ್ರನ್ ಅವರ ರವಿಮಾಮ ಚಿತ್ರದಲ್ಲಿ ನಟಿಸಿದರು. ಸಾಹಸ ಸಿಂಹ ವಿಷ್ಣುವರ್ಧನ್ ಜೊತೆ ಹೃದಯವಂತ ಸಿನಿಮಾದಲ್ಲಿಯೂ ನಗ್ಮಾ ನಟಿಸಿದ್ದಾರೆ. 2008ರಲ್ಲಿ ತೆರೆ ಕಂಡ 'ಥೇಲಾ ನಂ 501' ಭೋಜ್‌ಪುರಿ ಸಿನಿಮಾ ನಂತರ ಯಾವ ಸಿನಿಮಾಗಳಲ್ಲೂ ನಗ್ಮಾ ನಟಿಸಲಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.