ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ತಾಯಿಯಾಗಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ನವರಾತ್ರಿ ಮೊದಲ ದಿನವೇ ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ಪೊನ್ನಣ್ಣ ದಂಪತಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಹರ್ಷಿಕಾ ಪೂಣಚ್ಚ ಸೆಪ್ಟೆಂಬರ್ 3 ರಂದು ಮಗುವಿಗೆ ಜನ್ಮ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ನವರಾತ್ರಿಯ ಮೊದಲ ದಿನ ನಟಿ ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಭುವನ್‌ ಪೊನ್ನಣ್ಣ ಮನೆಗೆ ಮಹಾಲಕ್ಷ್ಮೀ ಆಗಮಿಸಿದ್ದಾಳೆ. ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಇಬ್ಬರೂ ಕನ್ನಡ ಸಿನಿಮಾ ರಂಗದ ಖ್ಯಾತ ತಾರೆಯರು. 2023 ರ ಆಗಸ್ಟ್ 24 ರಂದು ಇವರ ಮದುವೆ ನಡೆದಿತ್ತು. ಒಂದು ವರ್ಷದ ಬಳಿಕ ಈ ದಂಪತಿ ಮಗುವನ್ನು ಸ್ವಾಗತಿಸಿದ್ದಾರೆ.


ಇದನ್ನೂ ಓದಿ: ವಿಜಯ್ ದೇವರಕೊಂಡ ತಾಯಿ ಈ ಖ್ಯಾತ ನಟಿ.. ರಶ್ಮಿಕಾ ಮಂದಣ್ಣ ಜೊತೆಯೂ ನಟಿಸಿದ್ದಾರೆ ಗೊತ್ತೇ !!


ಹರ್ಷಿಕಾ ಹಾಗೂ ಭುವನ್ ಪರಸ್ಪರ ಪ್ರೀತಿಸಿ ಮದುವೆಯಾದವರು. ಹಲವು ವರ್ಷಗಳ ಕಾಲ ಪ್ರೀತಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹರ್ಷಿಕಾ ಹಾಗೂ ಭುವನ್ ಮದುವೆ ಕೊಡವ ಶೈಲಿಯಲ್ಲಿ ನಡೆದಿತ್ತು. 


 



 


ಇದೀಗ ಹರ್ಷಿಕಾ ಹಾಗೂ ಭುವನ್ ಹೆಣ್ಣು ಮಗುವಿನ ಪೋಷಕರಾಗಿದ್ದು, ಫ್ಯಾನ್ಸ್‌ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹರ್ಷಿಕಾ ಹಾಗೂ ಭುವನ್ ಮಗಳ ಮುಖ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. 


ಇದನ್ನೂ ಓದಿ: ಮಾದರಿ ಜೋಡಿ ಎನಿಸಿಕೊಂಡಿದ್ದವರ ಬಾಳಲ್ಲಿ ಬಿರುಗಾಳಿ!? ರಿತೇಶ್ ದೇಶಮುಖ್- ಜೆನಿಲಿಯಾ "ಬ್ರೇಕಪ್‌"! 12 ವರ್ಷಗಳ ಸುಂದರ ದಾಂಪತ್ಯದಲ್ಲಾಗಿದ್ದೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.