Keerthana: ಸಿನಿಮಾದಲ್ಲಿ ಅವಕಾಶ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು. ಅದೆಷ್ಟೋ ಮಂದಿ ಸಿನಿಮಾದ ಅವಕಾಶಕ್ಕಾಗಿ ಆತೊರೆಯುತ್ತಾರೆ. ಸಿನಿಮಾದಲ್ಲಿ ಚ್ಯಾನ್ಸ್‌ ಗಿಟ್ಟಿಸಿಕೊಳ್ಳೋಕೆ ತಪಸ್ಸುಗಳನ್ನು ಮಾಡುತ್ತಾರೆ. ಆದರೆ ಇಲ್ಲೊಬ್ಬ ನಟಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸಿ UPSC ಎಕ್ಸಾಂ ಬರೆದು IAS ಅಧಿಕಾರಿಯಾದರು. ಅಷ್ಟಕ್ಕೂ ಆ ನಟಿ ಯಾರು? ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

UPSC ಪರೀಕ್ಷೆ ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ, ಸಾವಿರಾರು ಆಕಾಂಕ್ಷಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ, ಆದರೆ ಕೆಲವರು ಮಾತ್ರ ಅದರಲ್ಲಿ ಉತ್ತೀರ್ಣರಾಗಿ, ಅಧಿಕಾರಿ ಪಟ್ಟಕ್ಕೇರುತ್ತಾರೆ. ಈ ಪರೀಕ್ಷೆಗಾಗಿ ಸಿದ್ದರಾಗಲು ಆಕಾಂಕ್ಷಿಗಳು ಹಗಲೆನ್ನದ ಇರುಳೆನ್ನದೆ. ಊಟ ನೀರು ನಿದ್ರೆ ಬಿಟ್ಟು ತಯಾರಿ ನಡೆಸುತ್ತಾರೆ. ಆದರೆ, ಇಲ್ಲೊಬ್ಬ ನಟಿ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ನಂತರ UPSC ಪರೀಕ್ಷೆ ಬರೆದು  IAS ಅಧಿಕಾರಿಯಾಗಿದ್ದಾರೆ.


ಸಿನಿಮಾ ಇಂಡಸ್ಟ್ರಿಯಲ್ಲಿ ಅಷ್ಟೆ ಅಲ್ಲದೆ ಈ ನಟಿ ತಮ್ಮ IAS ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಸಿಗುವುದು ಹಾಗೆಯೇ IAS ಪರೀಕ್ಷೆಯಲ್ಲಿ ಪಾಸ್‌ ಆಗಿ ಅಧಿಕಾರಿಯಾಗುವುದು ಎರಡೂ ಕೂಡ ಅತ್ಯಂತ ಕಠಿಣವಾದ ಟಾಸ್ಕ್‌ ಅಂತಲೇ ಹೇಳಬಹುದು. ಈಗಿನ ಕಾಲದಲ್ಲಿ ಈ ಎರಡು ವೃತ್ತಿಗಳಿಗಾಗಿ ಜನರು ಪೈಪೋಟಿ ನಡೆಸುತ್ತಾರೆ. ಈ ಫೀಲ್ಡ್‌ಗಳಿಗೆ ಎಂಟ್ರಿ ಕೊಡುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾರೆ. ಹೀಗೆ ಇಲ್ಲೊಬ್ಬರು ನಟಿ ಈ ಎರಡು ವಿಭಾಗದಲ್ಲೂ ಗೆದ್ದು ಅದೃಷ್ಟವಂತೆ ಅಂತಲೇ ಹೇಳಬಹುದು.


ಹೌದು, ನಾವು ಇಂದು ಹೇಳುತ್ತಿರುವ ನಟಿಯ ಬೇರೆ ಯಾರು ಅಲ್ಲ, ಹೊರತಾಗಿ ಕನ್ನಡದ ನಟಿ ಎಚ್‌ಎಸ್ ಕೀರ್ತನಾ ಕರ್ಪೂರದ ಗೊಂಬೆ, ಗಂಗಾ-ಯಮುನಾ, ಮುದ್ದಿನ ಅಳಿಯ, ಉಪೇಂದ್ರ, ಎ, ಕಾನೂರು ಹೆಗ್ಗಡತಿ, ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ​​ಸಿಂಹಾದ್ರಿ, ಜನನಿ, ಚಿಗುರು ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿರುವ ಕೀರ್ತನಾ ಜನಪ್ರಿಯ ಬಾಲ ಕಲಾವಿದೆ . ಪುಟಾಣಿ ಏಜೆಂಟ್‌ ಇವರು ನಟಿಸಿದ ಹೆಸರಾಂತ ಸಿನಿಮಾ. 


ನಟಿ ಎಚ್‌ಎಸ್ ಕೀರ್ತನಾ ಅವರು ಒಟ್ಟು 32 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಅಷ್ಟೆ ಅಲ್ಲದೆ ಸಿನಿಮಾಗಳಲ್ಲಿ ಇವರ ನಟನೆಗಾಗಿ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದಾರೆ. ಕೀರ್ತನಾ ಅವರು 15 ನೇ ವಯಸ್ಸಿನವರೆಗೆ ಕನ್ನಡ ಚಿತ್ರರಂಗದಲ್ಲಿ ತುಂಬಾ ಸಕ್ರಿಯರಾಗಿದ್ದರು. ನಂತರ ಅವರು ತಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಿದರು ಮತ್ತು ತನ್ನ ತಂದೆಯ ಕನಸುಗಳನ್ನು ನನಸಾಗಿಸಲು ನಿರ್ಧರಿಸಿದರು. UPSC ಗಾಗಿ ತನ್ನ ಸಿದ್ಧತೆಗಳನ್ನು ಪ್ರಾರಂಭಿಸುವ ಮೊದಲು, ಅವರು 2011 ರಲ್ಲಿ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆಗೆ ಹಾಜರಾಗಿದ್ದರು ಮತ್ತು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದರು.


KAS ಅಧಿಕಾರಿಯಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ನಟಿ ಕೀರ್ತನಾ UPSC ಅನ್ನು ಮುಂದುವರಿಸಲು ನಿರ್ಧರಿಸಿ ಅದರ ಸಿದ್ಧತೆಗಳನ್ನು ಪ್ರಾರಂಭಿಸಿದರು. ವರದಿಯ ಪ್ರಕಾರ, ಮಾಜಿ ನಟಿ AIR 167 ಶ್ರೇಣಿಯೊಂದಿಗೆ 5 ಪ್ರಯತ್ನಗಳ ನಂತರ ಪರೀಕ್ಷೆಯಲ್ಲಿ ಉತ್ತಿರ್ಣರಾದರು. ಅವರ ಮೊದಲ ಪೋಸ್ಟಿಂಗ್ ಆಗಿ, ಅವರು ಕರ್ನಾಟಕದ ಮಂಡ್ಯ ಜಿಲ್ಲೆಯ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.