Kiccha Sudeep : ಕಿಚ್ಚ ಸುದೀಪ್.. ಆ ಖಡಕ್ ಮಾತು, ನಗು, ಮಾತಿನಲ್ಲಿ ಸ್ಪಷ್ಟತೆ ಮತ್ತು ಒಂದು ಒಳ್ಳೆ ಅರ್ಥ. ಮತ್ತೇ ಮತ್ತೇ  ಕೇಳಬೇಕು ಹಾಗೂ ನೋಡಬೇಕು ಅನ್ನೋ ತರದ ಮ್ಯಾನರಿಸಮ್. ಯೆಸ್ ಕಿಚ್ಚ ಸುದೀಪ್ ಬಗ್ಗೆ ಎಷ್ಟೂ ಮಾತನಾಡಿದ್ರು ಪದಗಳು ಸಿಗೋಲ್ಲ. ಆ ಲೆವೆಲ್ಲಿಗೆ ಕಿಚ್ಚ ಅಂದ್ರೆನೇ ಒಂಥರಾ ಕಿಕ್. ಸ್ಯಾಂಡಲ್ವುಡ್ನಲ್ಲಿ ಕಿಚ್ಚನ ಹವಾ ಜೋರಿದೆ. 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಒಂದೊಳ್ಳೆ ಮನರಂಜನೆಯನ್ನ ಕಿಚ್ಚ ಕೊಟ್ಟಿದ್ದಾರೆ.ಇನ್ನು ಬಿಗ್ ಬಾಸ್ ಶೋ ಶುರುವಾದ ಮೇಲೆ ಕಿಚ್ಚನ ಪ್ರೀತಿ ಮಾಡೋರ ಸಂಖ್ಯೆ ಕೂಡ ಜಾಸ್ತಿಯಾಗಿದೆ.


COMMERCIAL BREAK
SCROLL TO CONTINUE READING

ಸುದೀಪ್ ಒಬ್ಬ ಭಾರತೀಯ ಚಲನಚಿತ್ರ. ಯಾಕಂದ್ರೆ ಇವರು  ಬಹುಮುಖ ಪ್ರತಿಭೆ.ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿ ಸೈ ಅನಿಸಿ ಕೊಂಡಿದ್ದಾರೆ.


ಇದನ್ನೂ ಓದಿ : Aarathi: ಮಂತ್ರಿ ಜೊತೆ ಮದುವೆಯಾಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟಿದ್ದರು ನಟಿ ಆರತಿ.!?


ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರನ್ನ ಪ್ರೀತಿಸೋ ಅಭಿಮಾನಿಗಳು  ಇವರನ್ನ ಕಿಚ್ಚ, ಅಭಿನಯ ಚಕ್ರವರ್ತಿ ,ಬಾದ್ ಶಾಹ್ ,ಅಭಿಮಾನಿಗಳ ಅಭಿಮಾನಿ ಅಂತಲೇ ಕರೆಯುತ್ತಾರೆ.ಕಿಚ್ಚ ಕೂಡ ತಮಗೆ ಪ್ರೀತಿ ಕೊಡೋ ಅಭಿಮಾನಿಗಳನ್ನ  ನನ್ನ ಫ್ರೆಂಡ್ಸ್ ಅಂತ ಹೇಳುತ್ತಾರೆ.ಈಗ ವಿಚಾರ ಏನು ಅಂದ್ರೆ ಕಿಚ್ಚನಿಗೆ ಕನ್ನಡ ನಾಡು,ಕನ್ನಡ ಜನ ಮತ್ತು ಕನ್ನಡ ಇಂಡಸ್ಟ್ರಿ ಅಂದ್ರೆ ಎಷ್ಟು ಪ್ರೀತಿ ಗೊತ್ತಾ..? ಯೆಸ್ ಕನ್ನಡ ನಾಡು ಮತ್ತು ನ್ನಡ ಜನ ನನ್ನ ಉಸಿರು ಅಂತಾನೇ ಹೇಳುತ್ತಾರೆ.


ಅದ್ರಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ ನಾನು ಪೂಜಿಸೋ ದೇವಸ್ಥಾನ ಅಂತ ಎಲ್ಲೇ ಹೋದರೂ ಹೇಳಿಕೊಳುತ್ತಾರೆ ಕಿಚ್ಚ ಸುದೀಪ್. ಇದು ನಮಗೆಲ್ಲರಿಗೂ ಹೆಮ್ಮೆ ಅನಿಸೋ ಸಂಗತಿ ಅಂದ್ರೆ ತಪ್ಪಿಲ್ಲ ನೋಡಿ. ಕಿಚ್ಚ ವಿಕ್ರಾಂತ್ ರೋಣ ಸಿನಿಮಾ ಆದ ಬಳಿಕ ಸ್ವಲ್ಪ ಬಿಡುವು ಮಾಡ್ಕೊಂಡಿದ್ದಾರೆ.ಉಪ್ಪಿ ಮತ್ತು ಕಿಚ್ಚ  ನಟನೆಯ ಕಬ್ಜ ರಿಲೀಸ್ ಗೆ ರೆಡಿಯಾಗಿದೆ. ಕಿಚ್ಚನ ಮುಂದಿನ ಪ್ರಾಜೆಕ್ಟ್ ಬಗ್ಗೆ ತಿಳ್ಕೊಳೋಕೆ ಫ್ಯಾನ್ಸ್ ಕೂಡ ವೇಟ್ ಮಾಡ್ತಾ ಇದ್ದಾರೆ.


ಇದನ್ನೂ ಓದಿ : Madhuri Dixit : ಈ ಕ್ರಿಕೆಟಿಗನಿಗೆ ಮನಸೋತಿದ್ದರು ಮಾಧುರಿ ದೀಕ್ಷಿತ್, ಶುರುವಾಗುತ್ತಲೇ ಅಂತ್ಯವಾದ ಪ್ರೇಮಕಹಾನಿ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.