ಬೆಂಗಳೂರು: 'ಕೆಜಿಎಫ್‌' ಚಾಪ್ಟರ್‌ 2 ಕನ್ನಡದ ಸಿನಿಮಾ ಎಂಬುದೇ ಕನ್ನಡಿಗರಿಗೆ ಒಂದು ಹೆಮ್ಮೆ. ಹೀಗೆ 'ಕೆಜಿಎಫ್‌' ಚಾಪ್ಟರ್‌ 1 ದೊಡ್ಡ ಹಿಟ್‌ ಕಂಡ ಬಳಿಕ ಚಾಪ್ಟರ್‌ 2ಗಾಗಿ ಇಡೀ ಜಗತ್ತೇ ಕಾಯುತ್ತಿದೆ.ಇನ್ನೇನು 10 ದಿನಗಳಲ್ಲಿ ಕೆಜಿಎಫ್‌ ಚಾಪ್ಟರ್‌ 2 ಸಿಲ್ವರ್‌ ಸ್ಕ್ರೀನ್‌ ಮೇಲೆ ಘರ್ಜಿಸಲು ಶುರು ಮಾಡಲಿದೆ.ಆದರೆ ಈ ಹೊತ್ತಲ್ಲೇ ಕನ್ನಡಿಗರು ಖುಷಿಪಡು ವಿಚಾರವೊಂದು ಹೊರ ಬಿದ್ದಿದೆ. ಅದೇನಪ್ಪ ಅಂದ್ರೆ, 'ಕೆಜಿಎಫ್‌' ಚಾಪ್ಟರ್‌ 2 ಬಗ್ಗೆ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದ ಪ್ರೇಕ್ಷಕರೇ ಅತಿಹೆಚ್ಚು ಕ್ರೇಜ್‌ ಇಟ್ಕೊಂಡಿದ್ದಾರಂತೆ.


COMMERCIAL BREAK
SCROLL TO CONTINUE READING

'ಕೆಜಿಎಫ್‌'..‌ಈ ಹೆಸರು ಕೇಳಿದ್ರೆ ಸಾಕು ರಾಕಿ ಭಾಯ್‌ ಹವಾ ಏನು ಅಂತಾ ಗೊತ್ತಾಗುತ್ತೆ. ಯಾಕಂದ್ರೆ 'ಕೆಜಿಎಫ್‌' ಟೀಂ ಪ್ರಚಾರಕ್ಕೆ ಅಂತಾ ಎಲ್ಲಿಗೇ ಹೋದರೂ ಕೂಡ ಅಲ್ಲಿ ಯಶ್‌ ಅಭಿಮಾನಿಗಳ ದಂಡೇ ನೆರೆದುಬಿಡುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಿ ರಾಕಿ ಭಾಯ್‌ ಹವಾ ಹೇಗಿದೆ ಅಂದ್ರೆ, ಸದ್ಯ ಬಾಲಿವುಡ್‌ ಸಿನಿಮಾಗಳಿಗೂ 'ಕೆಜಿಎಫ್‌' ಚಾಪ್ಟರ್‌ 2 ಅಂದ್ರೆ ಭಯಪಡುವ ವಾತಾವರಣ ನಿರ್ಮಾಣವಾಗಿದೆ.ಅದರಲ್ಲೂ 'ಕೆಜಿಎಫ್‌' ಚಾಪ್ಟರ್‌ 2 ಟ್ರೇಲರ್‌ ವೀವ್ಸ್‌ ನೋಡಿಯೇ ಹಲವು ಸ್ಟಾರ್‌ಗಳಿಗೆ ಅಚ್ಚರಿ ಎದುರಾಗಿದೆ.


ಇದನ್ನೂ ಓದಿ: James:ಓಟಿಟಿಗೆ 'ಜೇಮ್ಸ್‌' ಎಂಟ್ರಿ.. ಯಾವ ಆಪ್‌? ಯಾವಾಗ ಪ್ರಸಾರ? ಇಲ್ಲಿದೆ ಸಂಪೂರ್ಣ ಮಾಹಿತಿ


ಬಾಕ್ಸ್‌ ಆಫಿಸ್‌ ಉಡೀಸ್..!
ಬಾಕ್ಸ್‌ ಆಫಿಸ್‌ನಲ್ಲಿ ಹೊಸ ದಾಖಲೆ ಬರೆಯಲು 'ಕೆಜಿಎಫ್‌' ಚಾಪ್ಟರ್‌ 2 (KGF-2:) ಸಜ್ಜಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಸಾಗಿವೆ. ಕನ್ನಡದ ಸಿನಿಮಾ ಸಾವಿರ ಕೋಟಿ ಕ್ಲಬ್‌ ಸೇರುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಅದರಲ್ಲೂ ಹಿಂದಿ ಸಿನಿಮಾಗಳ ಹವಾ ಇರುವ ಪ್ರದೇಶದಲ್ಲೇ 'ಕೆಜಿಎಫ್‌' ಚಾಪ್ಟರ್‌ 2 ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.


ಇದನ್ನೂ ಓದಿ: ಡಿಕೆಶಿ-ಸಿದ್ದರಾಮಯ್ಯ ಒಗ್ಗಟಾಗಿ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲೇ ಬೇಕು: ರಾಹುಲ್ ಗಾಂಧಿ


ಬಾಲಿವುಡ್‌ಗೆ ಭಯ..!
ಈಗಾಗಲೇ ಅಮೀರ್‌ ಖಾನ್‌ ನಟನೆಯ ಸಿನಿಮಾವನ್ನ 'ಕೆಜಿಎಫ್‌' ಚಾಪ್ಟರ್‌ 2 ಕಾರಣಕ್ಕೆ ಮುಂದೂಡಲಾಗಿದೆ. ಹಾಗೇ ಹಲವು ಬಿಗ್‌ ಬಜೆಟ್‌ನ ಸಿನಿಮಾಗಳು 'ಕೆಜಿಎಫ್‌' ಚಾಪ್ಟರ್‌ 2 (KGF Chapter 2) ಎದುರು ಬರಲು ಹಿಂದೇಟು ಹಾಕಿ, ತಮ್ಮ ರಿಲೀಸ್‌ ಡೇಟ್‌ ಮುಂದಕ್ಕೆ ಹಾಕಿಕೊಂಡಿವೆ.ಇದರ ಜೊತೆಗೆ ಬಾಲಿವುಡ್‌ ಸಿನಿ ಪ್ರೇಮಿಗಳಿಗೂ 'ಕೆಜಿಎಫ್‌' ಚಾಪ್ಟರ್‌ 2 ಹೊರತು ಬೇರೆ ಸಿನಿಮಾ ನೋಡುವ ಆಸೆ ಇದ್ದಂತೆ ಕಾಣುತ್ತಿಲ್ಲ. ಗರುಡಾ ಹತ್ಯೆ ನಂತರ ರಾಕಿಭಾಯ್‌ ಏನಾದ ಅನ್ನೋದನ್ನ ತಿಳಿಯಲು ತುದಿಗಾಲಲ್ಲಿ ನಿಂತಿದೆ ಇಡೀ ಜಗತ್ತು.


ನಿರೀಕ್ಷೆಗಳ ಪರ್ವತ..!
ಇನ್ನು 'ಕೆಜಿಎಫ್‌' ಚಾಪ್ಟರ್‌ 2 ರಿಲೀಸ್‌ ಡೇಟ್‌ ಹತ್ತಿರವಾಗುತ್ತಿದ್ದಂತೆ ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ ಚಿತ್ರತಂಡ. ಅದರಲ್ಲೂ ಪ್ರಚಾರದಲ್ಲಿ ಯಾವುದೇ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜತ್ತಿನಾದ್ಯಂತ ಸಾವಿರಾರು ಮಾಲ್‌ಗಳ ಎದುರು 'ಕೆಜಿಎಫ್‌' ಚಿತ್ರದ ಪೋಸ್ಟರ್‌ ರಾರಾಜಿಸುತ್ತಿವೆ. ಈ ಮೂಲಕ ಅಭಿಮಾನಿಗಳ ನಿರಿಕ್ಷೆಯ ಶಿಖರ ಮುಗಿಲು ಮುಟ್ಟಿದೆ. ಯಾವಾಗ ಸಿನಿಮಾ ನೋಡ್ತೀವಿ ಅಂತಾ ಫ್ಯಾನ್ಸ್‌ ಕಾಯ್ತಿದ್ದಾರೆ.


ಇದನ್ನೂ ಓದಿ: Kabza:'ಕಬ್ಜ' ಕೈ ಬಿಟ್ರಾ ಕಿಚ್ಚ ಸುದೀಪ್? ಸಿನಿಮಾ ಬಗ್ಗೆ ಹರಿದಾಡ್ತಿರುವ ಈ ಸುದ್ದಿ ನಿಜಾನಾ?


ಒಟ್ಟಾರೆ ಹೇಳೋದಾದ್ರೆ 'ಕೆಜಿಎಫ್‌' ಚಾಪ್ಟರ್‌ 2 ಸಿನಿಮಾ ಬೇರೆ ಲೆವೆಲ್‌ಗೆ ರೀಚ್‌ ಆಗಲಿದೆ. ಅದರಲ್ಲೂ ಕನ್ನಡ ಸಿನಿಮಾ ಇಷ್ಟು ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿರುವುದು ಕನ್ನಡಿಗರ ಖುಷಿಯನ್ನ ದುಪ್ಪಟ್ಟು ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ 'ಕೆಜಿಎಫ್‌' ಚಾಪ್ಟರ್‌ 2 ಥಿಯೇಟ್‌ಗಳಲ್ಲಿ ಹಾಗೂ ಸಿಲ್ವರ್‌ ಸ್ಕ್ರೀನ್‌ನಲ್ಲಿ ದೊಡ್ಡ ಜ್ವಾಲೆ ಹಬ್ಬಿಸಲಿದ್ದು, ಹಿಂದೆ ಎಂದೂ ಕಾಣದ ಮತ್ತು ಮುಂದೆ ಎಂದೂ ಕಾಣಲು ಸಾಧ್ಯವಾಗದ ಕ್ರೇಜ್‌ ಹಬ್ಬಲಿದೆ.