ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ ಕಾರು ಅಪಘಾತ: ಫುಲ್ ಜಖಂ ಆದ ಕಾರು, ಎದೆ ಭಾಗಕ್ಕೆ ಭಾರಿ ಪೆಟ್ಟು
Actor Kiran Raj: ಕನ್ನಡತಿ ಸೀರಿಯಲ್ ಮೂಲಕ ಇಡೀ ಕರುನಾಡಿನ ಮನೆ ಹಾಗೂ ಮನವನ್ನು ತಲುಪಿದ್ದ ಸ್ಯಾಂಡಲ್ವುಡ್ನ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಒಬ್ಬರಾದ ಕಿರಣ್ ರಾಜ್ ಕಾರು ಅಪಘಾತಕ್ಕೀಡಾಗಿದೆ.
Kannadathi Serial Actor Kiran Raj Car Accident: "ಕನ್ನಡತಿ" ಧಾರವಾಹಿಯ ಮೂಲಕ ಮನೆಮಾತಾಗಿದ್ದ ಖ್ಯಾತ ನಟ ಕಿರಣ್ ರಾಜ್ ಕಾರು ಅಪಘಾತಕ್ಕೀಡಾಗಿದ್ದು (Actor Kiran Raj Car Accident), ಕಾರು ಫುಲ್ ಜಖಂ ಆದ ಪರಿಣಾಮ ನಟನ ಎದೆಯ ಭಾಗಕ್ಕೆ ಭಾರಿ ಪೆಟ್ಟು ಬಿದ್ದಿದೆ. ಕೆಂಗೇರಿ ಹತ್ತಿರದ ಬೆಂಗಳೂರು ಆಸ್ಪತ್ರೆಯಲ್ಲಿ ಕಿರಣ್ ರಾಜ್ ಅವರನ್ನು ದಾಖಲಿಸಲಾಗಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ರಾನಿ ಚಿತ್ರದ ನಾಯಕ ಕಿರಣ್ ರಾಜ್ (Actor Kiran Raj) ಪ್ರಯಾಣಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದ್ದರಿಂದ ಕಾರು ಫುಲ್ ಜಖಂಗೊಂಡಿದ್ದು ನಟನ ಎದೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದೆ. ಇನ್ನೂ ಕಿರಣ್ ರಾಜ್ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ಹಾಕಿದ್ದರಿಂದ ಬಚಾವ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಹಿಟ್ ಆಯ್ತು "ರಾನಿ" ಹಾಡು.. "ಕೋಲೆ ಕೋಲೆ" ಎನ್ನುತ್ತಾ ಬಂದರು ಕಿರಣ್ ರಾಜ್
ಕಿರುತೆರೆ ಬಳಿಕ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಟ್ಟಿದ್ದ "ಕಿರಣ್ ರಾಜ್":
ಕನ್ನಡತಿ ಸೀರಿಯಲ್ (Kannadati Serial) ನಲ್ಲಿ 'ಹರ್ಷ' ಪಾತ್ರದ ಮೂಲಕ ಖ್ಯಾತಿಗಳಿಸಿದ್ದ ನಟ ಕಿರಣ್ ರಾಜ್ ಬಳಿಕ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಟ್ಟಿದ್ದರು. ಕಿರಣ್ ರಾಜ್ "ರಾನಿ" ಚಿತ್ರದಲ್ಲಿ ನಟಿಸಿದ್ದು ಈ ಸಿನಿಮಾ ನಾಳೆ ರಿಲೀಸ್ ಆಗಲಿದೆ. ಇದೀಗ ಸಿನಿಮಾ ರಿಲೀಸ್ ಖುಷಿಯಲ್ಲಿದ್ದ ಕಿರಣ್ ರಾಜ್ ಅಭಿಮಾನಿಗಳು ವಿಷಯ ತಿಳಿದು ಆತಂಕಕ್ಕೊಳಗಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್ ಮಾಡುತ್ತಿರುವ ಕಿರಣ್ ರಾಜ್ ಅಭಿಮಾನಿಗಳು ಬೇಗ ಗುಣಮುಖರಾಗಿ ಬನ್ನಿ ಸರ್ ಎಂದು ಹಾರೈಸುತ್ತಿದ್ದಾರೆ.
ಇದನ್ನೂ ಓದಿ- ವಿಷ್ಣುವರ್ಧನ್ ಸ್ಮಾರಕದಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿದ ಕಿರಣ್ ರಾಜ್ ಅಭಿನಯದ “ರಾನಿ" ಚಿತ್ರ
ಟ್ರೇಲರ್ ಮೂಲಕವೇ ಹವಾ ಸೃಷ್ಟಿಸಿರುವ "ರಾನಿ":
ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್, ಇದೀಗ "ರಾನಿ" ಚಿತ್ರದ ಮೂಲ ಹಿರಿತೆರೆಯಲ್ಲೂ ಹೆಸರು ಮಾಡಲು ಹೊರಟಿದ್ದಾರೆ. ರಾನಿ ಚಿತ್ರ (Ronny Film) ಈಗಾಗಲೇ ಟ್ರೇಲರ್ ಮೂಲಕ ಭಾರೀ ಸದ್ದು ಮಾಡಿದ್ದು, ಗ್ಯಾಂಗ್ಸ್ಟರ್ ಡಾನ್ ಪಾತ್ರದಲ್ಲಿ ಕಿರಣ್ ರಾಜ್ ಅವರ ಜಬರ್ದಸ್ತ್ ಆ್ಯಕ್ಷನ್ ಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.