ತಮನ್ನಾ ʼಕಾವಾಲಯ್ಯಾʼ ಟ್ರೆಂಡ್ ಗೆ ಟಾಂಗ್ ಕೊಟ್ಟ ಕನ್ನಡಿಗ..ವಿಡಿಯೋ ವೈರಲ್
Kavaala Song Trend : ಇಂಟರ್ನೆಟ್ ಜಮಾನಾದಲ್ಲಿ ಮನರಂಜನೆಗೆ ಕೊರತೆನೆ ಇಲ್ಲ. ಯಾವುದಾದ್ರೂ ಹೊಸ ಸಿನಿಮಾ ತೆರೆಗೆ ಬಂದ್ರೆ ಅದರ ಸಾಂಗ್, ಡೈಲಾಗ್ಗೆ ರೀಲ್ಸ್ ಮಾಡೋದು ಟ್ರೆಂಡ್ ಆಗಿದೆ. ಇದೀಗ ತಮನ್ನಾ ಕಾವಾಲಾಯ್ಯ ಟ್ರೆಂಡ್‌ಗೆ ವಿಡಿಯೋ ಕ್ರಿಯೇಟರ್ ಒಬ್ಬರು ಟಾಂಗ್ ಕೊಟ್ಟಿದ್ದಾರೆ.
Kavaala Song : ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಒಂದೊಂದು ವಿಡಿಯೋ, ಪೋಸ್ಟ್ ವೈರಲ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಬಿಡುಗಡೆಯಾದ ತಮನ್ನಾ ಕಾವಾಲಯ್ಯ ಸಾಂಗ್ ಸಖತ್ ಸೌಂಡ್ ಮಾಡ್ತೀರೋದು ಎಲ್ಲರಿಗೂ ಗೊತ್ತೆ ಇದೆ. ಜಾನಿ ಮಾಸ್ಟರ್ ಬಿಂದಾಸ್ ಕೋರಿಯೋಗ್ರಾಫಿಯಲ್ಲಿ ಮೂಡಿಬಂದ ಈ ಸಾಂಗ್ ಅಭಿಮಾನಿಗಳ ಗಮನ ಸೆಳೆದಿದೆ.
ಸದ್ಯ ಸೋಷಿಯಲ್ ಮಿಡಿಯಾದಲ್ಲೆಲ್ಲಾ ತುಂಬಿ ತುಳುಕುತ್ತಿರೋ ಈ ಸಾಂಗ್‌ಗೆ ಶಿವಣ್ಣ ಅಭಿಮಾನಿಯೊಬ್ಬರು ಟಾಂಗ್ ಕೊಟ್ಟು ಶಿವಣ್ಣನ ಘೋಸ್ಟ್ ಚಿತ್ರದ ಟೀಸರ್ ಟ್ಯೂನ್‌ನ ರೀಲ್ಸ್ ಮಾಡಿದ್ದಾರೆ. ಇನ್ನು ಈ ವಿಡಿಯೋವನ್ನು ಚಿತ್ರದ ನಿರ್ದೇಶಕ ಶ್ರೀನಿ ಕೂಡ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ-ಮದುವೆ ಸಂಭ್ರಮದ ಮಧ್ಯೆಯೇ ಈ ನಿರ್ಧಾರ ತೆಗೆದುಕೊಂಡ ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ! ಕಾರಣ ?
ವೈರಲ್ ವಿಡಿಯೋದಲ್ಲಿ ವಿಡಿಯೋ ಕ್ರಿಯೇಟರ್ ತೇಜಸ್ ಗೌಡ ಎಂಬುವವರು ಘೋಸ್ಟ್ ಸಿನಿಮಾ ರೀಲ್ಸ್ ಮಾಡಿ ಕಾವಾಲಯ್ಯ ಟ್ರೆಂಡ್‌ಗೆ ತಮಾಷೆಯಾಗಿ ಟಾಂಗ್ ಕೊಟ್ಟಿದ್ದಾರೆ. ಮೊದಲಿಗೆ ಹಡುಗಿಯರು ಟ್ರೆಂಡ್ ಪಾಲೋ ಮಾಡೋ ರೀತಿಯನ್ನು ಹೇಳಿ ಹುಡುಗಿ ವೇಷದಲ್ಲಿ ತಮನ್ನಾ ಹುಕ್ ಸ್ಟೆಪ್‌ಗೆ ಡಾನ್ಸ್ ಮಾಡಿದ್ದಾರೆ. ಮುಂದೆ ಲೆಜೆಂಡ್ಸ್ ಹೇಗೆ ಟ್ರೆಂಡ್ ಫಾಲೋ ಮಾಡುತ್ತಾರೆ ಅಂತಾ ಹೇಳಿ ತಮ್ಮದೇ ಸ್ಟೈಲ್‌ನಲ್ಲಿ ಘೋಸ್ಟ್ ಟೀಸರ್‌ನಲ್ಲಿರುವ ವಿಸ್ಕಿಪುರಿ ಸೀನ್ ರೀ ಕ್ರಿಯೇಟ್ ಮಾಡಿ ಮಜಾನೀಡಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ತಮನ್ನಾ ಬಿಂದಾಸ್ ಡ್ಯಾನ್ಸ್ ಹಾಟ್‌ಟಾಪೀಕ್ ಆಗಿದ್ದು, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಸಾಂಗ್ ಮೋಡಿ ಮಾಡಿದೆ.
ಇದನ್ನೂ ಓದಿ-ಶಾರುಖ್ ಪಠಾನ್ ಸಿನಿಮಾ ಕಲೆಕ್ಷನ್ ಬಗ್ಗೆ ಕಾಜೋಲ್ ವ್ಯಂಗ್ಯ..1000 ಕೋಟಿ ರೂ. ಗಳಿಕೆ ಮಾಡಿದ್ದು ಸುಳ್ಳಾ..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.