ಬೆಂಗಳೂರು: ಕನ್ನಡದಲ್ಲಿ ಹೊಸಬರ ಸಾಲು ಸಾಲು ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿವೆ. ಇದೀಗ ಈ ಸಾಲಿಗೆ ಹೊಸ ಚಿತ್ರ 'ಕನ್ನೇರಿ' ಕೂಡ ಸೇರ್ಪಡೆಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ‌ ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಸಿನಿಮಾ 'ಕನ್ನೇರಿ'. ವಿಷಯ ಏನೆಂದರೆ 'ಕನ್ನೇರಿ' ಟೀಂಗೆ ವಸಿಷ್ಠ ಸಿಂಹ ಅವರು ಸಾಥ್‌ ನೀಡಿರುವುದು.


COMMERCIAL BREAK
SCROLL TO CONTINUE READING

ಈಗಾಗಲೇ ಕನ್ನೇರಿ ಸಿನಿಮಾದ ಕೆಲ ಹಾಡುಗಳು ಕೇಳುಗರ ಮನ ಮುಟ್ಟಿದ್ದು, ಸದ್ಯ 'ಕಾಣದ ಊರಿಗೆ' ಎಂಬ ಹಾಡನ್ನು ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈಗಾಗಲೇ ಹಲವು ಹಾಡುಗಳಿಗೆ ಧ್ವನಿಯಾಗಿರುವ ವಸಿಷ್ಠ ಸಿಂಹ ಕನ್ನಡಿಗರ ಮನ ಗೆದ್ದಿದ್ದು, ಹೊಸಬರ ಹೊಸ ಪ್ರಯತ್ನ 'ಕನ್ನೇರಿ'ಗೂ ಸಾಥ್‌ ನೀಡಿದ್ದಾರೆ.


ಇದನ್ನೂ ಓದಿ: ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಆತಿಥ್ಯ ಭಾರತದ ಮಡಿಲಿಗೆ


ಇಂಪಾದ ಸಂಗೀತ


ಅಂದಹಾಗೆ ಕೋಟಿಗಾನಹಳ್ಳಿ ರಾಮಯ್ಯ ಬರೆದಿರುವ ಕಾದಂಬರಿ ಆಧಾರಿತ ಚಿತ್ರಕ್ಕೆ ನಿರ್ದೇಶಕ ನೀನಾಸಂ ಮಂಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಂಜು ಚಿತ್ರಕಥೆ ಜತೆಗೆ ಕಲಾ ನಿರ್ದೇಶನ ಕೂಡ ನಿಭಾಯಿಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ಪೋಣಿಸಿರುವ ಚೆಂದದ ಸಾಲುಗಳಿಗೆ ಕದ್ರಿ ಮಣಿಕಾಂತ್ ಅಷ್ಟೇ ಇಂಪಾದ ಮ್ಯೂಸಿಕ್ ನ್ನು ನೀಡಿದ್ದು, ಕೀರ್ತನಾ ಹೊಳ್ಳ ಹಾಗೂ ಹಿಂದು ನಾಗರಾಜ್ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ಕೇಳುಗರನ್ನು ಸೆಳೆಯುತ್ತಿದೆ.


ಇದನ್ನೂ ಓದಿ: Virat Kohli : ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್ : ಟೀಂನಿಂದ ಕೊಹ್ಲಿ ಔಟ್!


'ಕನ್ನೇರಿ' ವಿಭಿನ್ನ ಕಥೆ ಹೊಂದಿದ್ದು, ಬುಡಕಟ್ಟು ಜನ ನೋವು-ನಲಿವಿನ ಕುರಿತು ತಿಳಿಸುತ್ತದೆ. ಕನ್ನೇರಿ ಸಿನಿಮಾದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ. ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ , ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ 'ಕನ್ನೇರಿ' ಚಿತ್ರಕ್ಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.