ಬೆಂಗಳೂರು: ರಾಜ್ಯ ಸರ್ಕಾರ ಥಿಯೇಟರ್‌ಗಳಲ್ಲಿ 100 ಪರ್ಸೆಂಟ್‌ ಆಕ್ಯುಪೆನ್ಸಿಗೆ ಅವಕಾಶ ನೀಡಿದ್ದೇ ತಡ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಕಳೆದ 2 ವಾರಗಳಿಂದ ಬಹುನಿರೀಕ್ಷಿತ ಚಿತ್ರಗಳು ಸಾಲು ಸಾಲಾಗಿ ತೆರೆಗೆ ಬರುತ್ತಿವೆ. ಅದರಲ್ಲೂ ಹೊಸಬರ ಚಿತ್ರಗಳು ಕೂಡ ರಿಲೀಸ್‌ಗೆ ರೆಡಿಯಾಗಿ ನಿಂತಿವೆ. ಇದೀಗ ಹೊಸಬರ ಹೊಸ ಪ್ರಯತ್ನ ‘ಕನ್ನೇರಿ’ ಕೂಡ ಬಿಡುಗಡೆಗೆ ರೆಡಿಯಾಗಿದ್ದು, ಕನ್ನಡ ಪ್ರೇಕ್ಷಕರ ಎದುರು ಮತ್ತೊಂದು ಹೊಸ ಸಿನಿಮಾ ತೆರೆ ಕಾಣಲಿದೆ.


COMMERCIAL BREAK
SCROLL TO CONTINUE READING

ಕನ್ನೇರಿ (Kanneri).. ಹೀಗೆ ಡಿಫರೆಂಟ್‌ ಟೈಟಲ್‌.. ಡಿಫರೆಂಟ್‌ ಕಥಾಹಂದರ ಹೊಂದಿರುವ ಸಿನಿಮಾ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಅಬ್ಬರಿಸಲು ಸಜ್ಜಾಗಿದೆ. ಹೊಸಬರ ಮತ್ತೊಂದು ಎಕ್ಸ್‌ಪೆರಿಮೆಂಟ್‌ಗೆ ವೇದಿಕೆ ಸಜ್ಜಾಗಿದ್ದು, ಚಿತ್ರ ಹೇಗಿರಲಿದೆ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.


ಇದನ್ನೂ ಓದಿ- ಹಾಲಿವುಡ್‌ ಅಂಗಳದಲ್ಲೂ ಕನ್ನಡಿಗರು ಮಿಂಚಿಂಗ್..? 'ಕೆಜಿಎಫ್-2'‌ ಇಂಗ್ಲಿಷ್‌ನಲ್ಲೂ ರಿಲೀಸ್..?


ರಿಲೀಸ್‌ಗೂ ಮೊದಲೇ ಹವಾ..!
‘ಮೂಕಹಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಮತ್ತೊಂದು ಚಿತ್ರ ‘ಕನ್ನೇರಿ’ ರಿಲೀಸ್ ಗೂ  ಮೊದಲೇ ಸಖತ್ ಸದ್ದು ಮಾಡುತ್ತಿದೆ. ಶೂಟಿಂಗ್ ಕಂಪ್ಲೀಟ್ ಮಾಡ್ಕೊಂಡು ಮಾರ್ಚ್ 4ಕ್ಕೆ ರಿಲೀಸ್ ಗೆ ತಯಾರಿ ನಡೆಸುತ್ತಿದೆ ಟೀಂ. ಈ ಹೊತ್ತಲ್ಲೇ ಚಿತ್ರದ ಮೇಲಿನ  ಕುತೂಹಲ ಕೂಡ ಹೆಚ್ಚಾಗುತ್ತಿದೆ.


ಮತ್ತೊಂದು ವಿಶೇಷ ಏನಂದ್ರೆ ಕನ್ನೇರಿ ಸಿನೆಮಾದ ಟ್ರೈಲರ್ (Kanneri Trailer) ರಿಲೀಸ್ ಆಗಿದೆ. ಖ್ಯಾತ ನಟಿ ತಾರಾ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ಹಾಗೂ ಟ್ರೈಲರ್‌ ಬಗ್ಗೆ ಹಿರಿಯ ನಟಿ ತಾರಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


ಇದನ್ನೂ ಓದಿ- ಇವರೇ ಸಲ್ಮಾನ್ ಖಾನ್ ನ 2300 ಕೋಟಿ ಆಸ್ತಿಯ ವಾರಾಸುದಾರ ..!


‘ಕನ್ನೇರಿ’ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ. ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಹಾಗೂ ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು ಆಧಾರವಾಗಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಬೆಂಗಳೂರು, ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಶೂಟಿಂಗ್‌ ಮಾಡಲಾಗಿದೆ. ಒಟ್ಟಾರೆ ಹೇಳೋದಾದ್ರೆ  ‘ಕನ್ನೇರಿ’ ಕನ್ನಡ ಪ್ರೇಕ್ಷಕರ ನಿರೀಕ್ಷೆಗಳನ್ನ ದುಪ್ಪಟ್ಟು ಮಾಡಿದ್ದು, ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮೂಡಿಬಂದಿದ್ರೆ ಕನ್ನಡಿಗರು ಮೆಚ್ಚುವುದು ಗ್ಯಾರಂಟಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ