Kantara 2 Big Update: ಸದ್ಯ ಸೌತ್ ಸಿನಿಮಾ ಪ್ರೇಕ್ಷಕರಿಗೆ ಸಂತಸದ ಸುದ್ದಿಯಿದೆ. ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರು 'ಪುಷ್ಪ' ಚಿತ್ರಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕಳೆದ ವರ್ಷ 30 ಸೆಪ್ಟೆಂಬರ್ 2022 ರಂದು ಬಿಡುಗಡೆಯಾದ 'ಕಾಂತಾರ' ಸಿನಿಮಾದ ಪ್ರಿಕ್ವೆಲ್‌ ಕಾಂತಾರ 2 ಬಗ್ಗೆ ಜನರ ನಿರೀಕ್ಷೆಗಳು ಹೆಚ್ಚಿವೆ. ಈಗ ಚಿತ್ರದ ಎರಡನೇ ಭಾಗದ ಕೆಲಸ ಶುರುವಾಗಿದೆ. ಮೊದಲ ಚಿತ್ರ 16 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದರೆ, ಎರಡನೇ ಭಾಗದ ಬಜೆಟ್ ಅನ್ನು 7 ಪಟ್ಟು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರಕ್ಕೆ ಮೌತ್ ಪಬ್ಲಿಸಿಟಿಯ ಗರಿಷ್ಠ ಲಾಭ ಸಿಕ್ಕಿದೆ. ಚಿತ್ರವು ಎಷ್ಟು ಖ್ಯಾತಿಯನ್ನು ಗಳಿಸಿತು ಎಂದರೆ ಅದು ನಂತರ ಇತರ ಭಾಷೆಗಳಿಗೆ ಡಬ್ ಆಗಿತ್ತು. ಚಿತ್ರವನ್ನು ರಿಷಬ್ ಅವರ ಹಳ್ಳಿಯಲ್ಲಿ ಚಿತ್ರಿಸಲಾಗಿದೆ ಮತ್ತು ಕೇವಲ 16 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರವನ್ನು ಸ್ವತಃ ರಿಷಬ್ ಬರೆದು ನಿರ್ದೇಶಿಸಿದ್ದಾರೆ.


ಇದನ್ನೂ ಓದಿ: ಏನಿದು ದರ್ಶನ್ 'ಏಕಾಂಗಿ' ಟ್ವೀಟ್?.."ಬೀ ಅಲೋನ್ ಟು ಬಿ ಹ್ಯಾಪಿ" ಎಂದಿದ್ದೇಕೆ ಡಿಬಾಸ್‌..? 


ಇದೀಗ ರಿಷಬ್ ಶೆಟ್ಟಿ ‘ಕಾಂತಾರ 2’ ಚಿತ್ರದ ಎರಡನೇ ಭಾಗದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಕಥೆಯ ಕೆಲಸ ಮುಗಿದಿದೆ. ಈ ಚಿತ್ರವು 'ಕಾಂತಾರ'ದ ಪ್ರಿಕ್ವೆಲ್‌ ಆಗಿದೆ. ಅಲ್ಲದೇ ಈ ಬಾರಿ ಕರಾವಳಿ ಭಾಗದ ಸಂಸ್ಕೃತಿಯನ್ನು ಚಿತ್ರದಲ್ಲಿ ಹೆಚ್ಚು ಆಪ್ತವಾಗಿ ತೋರಿಸಲಾಗುವುದು. ಈ ವರ್ಷದ ನವೆಂಬರ್‌ನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ.


'ಕಾಂತಾರ' ಕರಾವಳಿ ಭಾಗದ ಹಳ್ಳಿಯೊಂದರ ಕಥೆಯಾಗಿದ್ದು, ಅದರಲ್ಲಿನ ವಿಷಯ ಎಲ್ಲರನ್ನೂ ಆಕರ್ಷಿಸಿತ್ತು. ಹಳ್ಳಿಯಿಂದ ಬಂದ ಈ ಚಿತ್ರ ಜಾಗತಿಕವಾಗಿ ಗುರುತಿಸಿಕೊಳ್ಳಲು ಇದೇ ಕಾರಣ. ಚಿತ್ರಕ್ಕೆ ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಎಷ್ಟು ಯಶಸ್ವಿಯಾಯಿತು ಎಂದರೆ 400 ಕೋಟಿ ಬ್ಯುಸಿನೆಸ್ ಮಾಡಿದೆ.


ಚಿತ್ರದ ಅಗಾಧ ಯಶಸ್ಸಿನಿಂದಾಗಿ, ಈಗ ಅದನ್ನು ದೊಡ್ಡ ಮಟ್ಟದಲ್ಲಿ ಮಾಡಲು ಯೋಜಿಸಲಾಗಿದೆ. ಇದೀಗ ಚಿತ್ರದ ಎರಡನೇ ಭಾಗದ ಮೇಲೆ ಪ್ರೇಕ್ಷಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ಈ ಬಾರಿ ಚಿತ್ರದ ಬಜೆಟ್ 7 ಪಟ್ಟು ಹೆಚ್ಚಾಗಿದೆಯಂತೆ. ಅದೇನೆಂದರೆ, ಈ ಬಾರಿ ರಿಷಬ್ ಶೆಟ್ಟಿ ಅವರ ಸಿನಿಮಾ 125 ಕೋಟಿ ರೂಪಾಯಿಯಲ್ಲಿ ತಯಾರಾಗಲಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಕೇರಳದಲ್ಲಿ ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 10 ಚಿತ್ರಗಳಿವು..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.