ಬೆಂಗಳೂರು : ಕಾಪಿರೈಟ್‌ ವಿವಾದ ಬೆನ್ನಲ್ಲೆ ಕಾಂತಾರ ಚಿತ್ರತಂಡ ನ್ಯಾಯಾಲಯದ ಆದೇಶದ ಮೇರೆಗೆ ಯೂಟ್ಯೂಬ್‌ ಮತ್ತು ಮ್ಯೂಸಿಕ್‌ ಆಪ್‌ಗಳಿಂದ ವರಾಹ ರೂಪಂ ಹಾಡನ್ನು ಡಿಲೀಟ್‌ ಮಾಡಿದೆ. ತೈಕ್ಕುಡಂ ಬ್ರಿಡ್ಜ್‌ ತಮ್ಮ ʼನವರಸಂʼ ಹಾಡಿನ ಟ್ಯೂನ್‌ನನ್ನು ಕಾಂತಾರ ಚಿತ್ರತಂಡ ʼವರಾಹ ರೂಪಂʼಗೆ ಬಳಕೆ ಮಾಡಿದೆ ಎಂದು ನ್ಯಾಯಾಲಯದ ಮೇಟ್ಟಿಲೇರಿದ್ದರು.


COMMERCIAL BREAK
SCROLL TO CONTINUE READING

ತೈಕ್ಕುಡಂ ಬ್ರಿಡ್ಜ್‌ ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯ ʼವರಾಹ ರೂಪಂʼ ಹಾಡನ್ನು ಪ್ರಸಾರ ಮಾಡದಂತೆ ಆದೇಶ ಹೊರಡಿಸಿತ್ತು. ಸದ್ಯ ಕೋರ್ಟ್ ಆದೇಶದಂತೆ ಯೂಟ್ಯೂಬ್‌ ಚಾನೆಲ್‌ ಸೇರಿ ಎಲ್ಲಾ ಮ್ಯೂಸಿಕ್‌ ಆಪ್‌ಗಳಿಂದ ವರಾಹ ರೂಪಂ ಹಾಡನ್ನು ಕಾಂತಾರ ಚಿತ್ರತಂಡ ತೆಗೆದು ಹಾಕಿದೆ.


ಇದನ್ನೂ ಓದಿ: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಬಿಪಾಶಾ ಬಸು


ಹೊಂಬಾಳೆ ಫಿಲ್ಮ್ಸ್ ಕಾಂತಾರ ಸಿನಿಮಾವನ್ನು ನಿರ್ಮಾಣ ಮಾಡಿದೆ. ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಸಪ್ತಮಿಗೌಡ, ಅಚ್ಯುತ್‌ಕುಮಾರ್‌, ಕಿಶೋರ್‌ ಸೇರಿದಂತೆ ಅಪಾರ ಕಲಾವಿದರು ಸಿನಿಮಾದಲ್ಲಿದ್ದಾರೆ. ಅಂಜನೀಶ್‌ ಸಂಗೀತ ಚಿತ್ರಕ್ಕಿದೆ. ಸಿನಿಮಾ ಬಿಡುಗಡೆಯಾದ ದಿನದಿಂದಲೇ ಬರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಕರ್ನಾಟಕವಷ್ಟೇ ಅಲ್ಲದೆ, ಭಾರತೀಯ ಸಿನಿರಂಗದ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.