Kapil Sharma Sunil Grover Reunite : ಸುಮಾರು ಆರು ವರ್ಷಗಳ ನಂತರ ಹಾಸ್ಯನಟರಾದ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಕೊನೆಗೂ ಒಂದಾಗಿದ್ದಾರೆ. ಕಪಿಲ್‌ ಶರ್ಮಾ ಶೋದಲ್ಲಿ ಇಬ್ಬರನ್ನು ವೇದಿಕೆಯ ಮೇಲೆ ನೋಡಿ ಬಹಳ ದಿನವಾಗಿದ್ದ ಪ್ರೇಕ್ಷಕರಿಗೆ ಕೊನೆಗೂ ಈ ಸ್ನೇಹಿತರು ತಮ್ಮ ಕೋಪವನ್ನು ಬದಿಗಿಟ್ಟು, ಒಂದಾಗಿ ಮತ್ತೇ ನಗಿಸಲು ವೇದಿಕೆಯ ಮೇಲೆ ಬರಲಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಕಪಿಲ್‌ ಮತ್ತು ಸುನೀಲ್‌ ಅಂತಿಮವಾಗಿ ತಮ್ಮ ಹಠವನ್ನು ಬಿಟ್ಟು, ನೆಟ್‌ಫ್ಲಿಕ್ಸ್ ಶೋನ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮತ್ತೇ ಒಂದೇ ವೇದಿಕೆಯ ಮೇಲೆ ಪ್ರೇಕ್ಷಕರಿಗೆ ನಗೆ ಔತಣ ನೀಡಲು ರೆಡಿಯಾಗಿದ್ದಾರೆ. ಈ ಕುರಿತು ಸುದ್ದಿ ತಿಳಿದ ಇಬ್ಬರ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.


 

 

 

 



 

 

 

 

 

 

 

 

 

 

 

A post shared by Netflix India (@netflix_in)


ಇದನ್ನೂ ಓದಿ: ನಟ ಸೂರ್ಯ ಒಬ್ಬ ಸ್ವಾರ್ಥಿ..! ಸಂಚಲನ ಸೃಷ್ಟಿಸುತ್ತಿದೆ ʼಅನಿಮಲ್‌ʼ ಸಿನಿಮಾದ ನಟನ ಹೇಳಿಕೆ


ಇನ್ನು ಪ್ರೋಮೊದಲ್ಲಿ, ಕಪಿಲ್ ಮತ್ತು ಸುನೀಲ್ 'ನಾನು ನೆಟ್‌ಫ್ಲಿಕ್ಸ್‌ನಲ್ಲಿ ಬರುತ್ತಿದ್ದೇನೆ' ಎಂದು ಹೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಆಗ ಇಬ್ಬರೂ ಒಟ್ಟಿಗೆ ಹೋಗೋಣ ಎನ್ನುತ್ತಾರೆ. 'ನಾವು 190 ದೇಶಗಳಲ್ಲಿ ಇರಲಿದ್ದೇವೆ' ಎಂದು ಕಪಿಲ್ ಹೇಳಿದಾಗ, ಸುನಿಲ್, "ಆಸ್ಟ್ರೇಲಿಯಾಕ್ಕೆ ಹೋಗುವುದುಬೇಡ' ಅಂತ ವ್ಯಂಗ್ಯವಾಡುತ್ತಾರೆ. ಆಗ ಅಲ್ಲಿಯ ಜನರೂ ಸಹ ಕಾಯುತ್ತಿದ್ದಾರೆ ಎಂದು ಕಪಿಲ್ ಹೇಳುತ್ತಾರೆ. 


ಸುನೀಲ್‌ ಡಾ. ಮಶೂರ್ ಗುಲಾಟಿ ಪಾತ್ರದಲ್ಲಿ ಕಪಿಲ್‌ ಶರ್ಮಾ ಶೋನ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದರು. ಆದ್ರೆ ಕಪಿಲ್‌ ಮತ್ತು ಸುನೀಲ್‌ ನಡುವೆ ಏನಾಯ್ತು. ಇಬ್ಬರು ಮಾತನಾಡುವುದನ್ನು ಏಕೆ ಬಿಟ್ಟರು ಎಂಬುವುದು ಇಂದಿಗೂ ತಿಳಿದಿಲ್ಲ. 2018 ರಲ್ಲಿ ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ಮುಗಿಸಿ ಹಿಂತಿರುಗಿದ ನಂತರ ಇಬ್ಬರು ದೂರವಾಗಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.