Saif Ali Khan Kareena Kapoor Marriage: ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಬಾಲಿವುಡ್‌ನ ಹಾಟ್ ಜೋಡಿಗಳಲ್ಲಿ ಒಬ್ಬರು. Tashan ಚಿತ್ರದ ಸೆಟ್‌ಗಳಲ್ಲಿ ಅವರಿಬ್ಬರ ಸಂಬಂಧ ಶುರುವಾಯಿತು. ನಂತರ ಇಬ್ಬರೂ ಸಂಬಂಧ ಗಾಢವಾಯಿತು. ಲಿವ್-ಇನ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು. ಕೆಲವು ವರ್ಷಗಳ ನಂತರ ಇಬ್ಬರೂ ಮದುವೆಯಾಗಿ ಅವರ ಮನೆಯಲ್ಲಿ ನೆಲೆಸಿದರು. 2012 ರಲ್ಲಿ ಅವರು ಮದುವೆಯಾದರು. ಸೈಫ್ ಅವರನ್ನು ಮದುವೆಯಾದ ನಂತರ ಕರೀನಾ ಮುಸ್ಲಿಂ ಧರ್ಮವನ್ನು ಸ್ವೀಕರಿಸಿದ್ದಾರಾ? ಕರೀನಾ ಅವರನ್ನು ಮದುವೆಯಾಗುವ ಮುನ್ನ ಸೈಫ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ʻರಾಜಮಾರ್ತಾಂಡʼ ಚಿತ್ರಕ್ಕೆ ಡಿಟಿಎಸ್.. ಚಿರಂಜೀವಿ ಸರ್ಜಾ ಅಭಿನಯದ ಈ ಸಿನಿಮಾ ಏಪ್ರಿಲ್ ನಲ್ಲಿ ಬಿಡುಗಡೆ..! 


ಕರೀನಾ ತನ್ನ ಧರ್ಮವನ್ನು ಬದಲಾಯಿಸಬೇಕೆಂದು ನಾನು ಎಂದಿಗೂ ಬಯಸುವುದಿಲ್ಲ ಎಂದು ಸೈಫ್ ಅಲಿ ಖಾನ್  ಹೇಳಿದ್ದರು. ಧರ್ಮದ ದೊಡ್ಡ ಸಮಸ್ಯೆ ಎಂದರೆ ಜನರು ಅದರಲ್ಲಿ ಮತಾಂತರವನ್ನು ಬಯಸುತ್ತಾರೆ. ನನಗೆ ಅದರಲ್ಲಿ ನಂಬಿಕೆಯೇ ಇಲ್ಲ ಎಂದಿದ್ದರು. ಇದಾದ ನಂತರ, ಕರೀನಾಳನ್ನು ಮದುವೆಯಾದಾಗ ಸೈಫ್ ಹೆಚ್ಚಿನ ಸಂದರ್ಶನಗಳಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಕರೀನಾ ತನ್ನ ಧರ್ಮವನ್ನು ಬದಲಾಯಿಸಿದ್ದಾರೆ ಎಂದು ಅನೇಕ ಜನರು ನಂಬುತ್ತಾರೆ. ಆದರೆ ಕರೀನಾ ಮತಾಂತರಗೊಂಡಿಲ್ಲ. ಇವೆಲ್ಲವೂ ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ನಮ್ಮ ಜೀವನದ ಭಾಗವಲ್ಲ. ಇಂತಹ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಮೊದಲು ಸಾವಿರ ಬಾರಿ ಯೋಚಿಸಬೇಕು. ಕರೀನಾ ಅವರ ಕೊಡುಗೆಯ ಬಗ್ಗೆ ಚಿತ್ರರಂಗ ಮತ್ತು ಸಮಾಜ ಹೆಮ್ಮೆ ಪಡಬೇಕು ಎಂದು ಸೈಫ್‌ ಹೇಳಿದ್ದರು.


ಲವ್ ಜಿಹಾದ್ ಹೆಸರಿನಲ್ಲಿ ಕರೀನಾ ಕಪೂರ್‌ ಅವರನ್ನು ಗುರಿಯಾಗಿಸುವುದು ತಪ್ಪು ಮತ್ತು ಜನರು ಅವಳ ಬಗ್ಗೆ ಹೆಮ್ಮೆ ಪಡಬೇಕು ಎಂದು ಸೈಫ್ ಸದಾ ಪ್ರತಿಪಾದಿಸಿದ್ದಾರೆ. ಸೈಫ್ ನನ್ನು ಮದುವೆಯಾದ ನಂತರ ಕರೀನಾ ಮುಸ್ಲಿಂ ಧರ್ಮವನ್ನು ಸ್ವೀಕರಿಸಲಿಲ್ಲ. ಅವರು ಹಿಂದೂ ಧರ್ಮದಲ್ಲೇ ಮುಂದುವರೆದಿದ್ದಾರೆ ಎಂದು ಸೈಫ್ ಹೇಳಿಕೆಯಿಂದ ಸ್ಪಷ್ಟವಾಗಿದೆ. ಮದುವೆಯ ನಂತರ, ಸೈಫ್ ಮತ್ತು ಕರೀನಾ ಇಬ್ಬರು ಗಂಡುಮಕ್ಕಳ ಪೋಷಕರಾಗಿದ್ದಾರೆ. ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.  


ಇದನ್ನೂ ಓದಿ : ಫೋಟೋ ಶೂಟ್ ವೇಳೆ ತಾಪ್ಸಿಯ ಖಾಸಗಿ ಅಂಗ ಬಹಿರಂಗ..! ಫೋಟೋ ವೈರಲ್‌


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.