ನವದೆಹಲಿ: ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ತಮ್ಮನ್ನು ಆಂಟಿ ಎಂದು ಕರೆದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ನಟ ಅರ್ಬಾಜ್ ಖಾನ್, ನಟಿ ಸೋನಾಕ್ಷಿ ಸಿನ್ಹಾ ಮತ್ತು ನಿರ್ದೇಶಕ ಕರಣ್ ಜೋಹರ್ ಜೊತೆ ಕರೀನಾ ಕಪೂರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅರ್ಬಾಜ್ ಖಾನ್ ತಮ್ಮ ಮೊಬೈಲಿನಲ್ಲಿ ಕರೀನಾ ಫೋಟೋಗೆ ‘ಆಂಟಿ’ ಎಂದು ಕಮೆಂಟ್ ಹಾಕಿದ್ದನ್ನು ತೋರಿಸಿದರು. ಅದರಲ್ಲಿ "ನೀವು ಈಗ ಆಂಟಿಯಾಗಿದ್ದೀರಿ, ಹುಡುಗಿಯರ ರೀತಿಯಲ್ಲಿ ಬಟ್ಟೆ ಹಾಕಿಕೊಂಡು ಮಕ್ಕಳ ರೀತಿ ಆಡೋದನ್ನು ನಿಲ್ಲಿಸಿ" ಎಂದು ಕಮೆಂಟ್ ಮಾಡಲಾಗಿತ್ತು.


ಇದನ್ನು ಕಂಡು ಒಂದು ಕ್ಷಣ ಮುಗುಳ್ನಕ್ಕ ಕರೀನಾ, "ಸೆಲೆಬ್ರಿಟಿಗಳಿಗೆ ಯಾವುದೇ ಭಾವನೆಗಳು, ಎಮೋಷನ್ಸ್ ಗಳು ಇರುವುದಿಲ್ಲ ಅಂತ ಜನ ತಿಳಿದುಕೊಂಡಿದ್ದಾರೆ. ನಾವು ಎಲ್ಲವನ್ನೂ ಸುಮ್ಮನೆ ಸ್ವೀಕರಿಸಬೇಕಷ್ಟೇ" ಎಂದಿದ್ದಾರೆ. 



ಅಷ್ಟಕ್ಕೂ, ಕರೀನಾ ಕಪೂರ್ ಅವರ ಫೋಟೋಗಳು, ಅವರ ವಿಚಾರಗಳು ಟ್ರೋಲ್ ಆದದ್ದು ಇದೇ ಮೊದಲೇನಲ್ಲ. ಸದ್ಯಕ್ಕೆ ಕರಣ್ ಜೋಹರ್ ನಿರ್ಮಾಣದ 'ಗುಡ್‌ನ್ಯೂಸ್' ಎಂಬ ಸಿನಿಮಾದಲ್ಲಿ ಕರೀನಾ ಅಭಿನಯಿಸುತ್ತಿದ್ದಾರೆ.