Abhishek Bachchan Karisma Kapoor Break Up: ಕರಿಷ್ಮಾ ಕಪೂರ್ ಜೀವನದ ಈ ಕತೆ ಸಿನಿಮಾ ಸ್ಟೋರಿಗಿಂತ ಕಡಿಮೆಯಿಲ್ಲ. ಸಿನಿರಂಗದಲ್ಲಿ ಸಾಕಷ್ಟು ಯಶಸ್ಸು ಪಡೆದ ನಟಿ ಕರಿಷ್ಮಾ ಕಪೂರ್‌. ಆದರೆ ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಒಂದು ಕಾಲದಲ್ಲಿ ಕರಿಷ್ಮಾ ಕಪೂರ್ ಬಚ್ಚನ್ ಕುಟುಂಬದ ಸೊಸೆಯಾಗಲಿದ್ದರು. ಅಮಿತಾಬ್ ಬಚ್ಚನ್ ಅವರ 60 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕರಿಷ್ಮಾ ಮತ್ತು ಅಭಿಷೇಕ್ ಬಚ್ಚನ್ ನಿಶ್ಚಿತಾರ್ಥ ಕೂಡ ಮಾಡಿಕೊಂಡರು. 


COMMERCIAL BREAK
SCROLL TO CONTINUE READING

ಕರಿಷ್ಮಾ ಮತ್ತು ಅಭಿಷೇಕ್ ಅವರ ಮದುವೆ, ಅಂದರೆ ಕಪೂರ್ ಕುಟುಂಬ ಮತ್ತು ಬಚ್ಚನ್ ಕುಟುಂಬ ಒಂದಾಗಲಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಚಿತ್ರರಂಗ ಮಾತ್ರವಲ್ಲ, ಲಕ್ಷಾಂತರ ಅಭಿಮಾನಿಗಳು ಈ ಸುಂದರ ಕ್ಷಣಕ್ಕೆ ಕಾಯುತ್ತಿದ್ದರು. ಆದರೆ ಆ ಕನಸು ಈಡೇರಲೇ ಇಲ್ಲ. ಈ ಮದುವೆಯು ಎಂದಿಗೂ ನಡೆಯಲೇ ಇಲ್ಲ. ಅಷ್ಟಕ್ಕೂ ಕರಿಷ್ಮಾ ಮತ್ತು ಅಭಿಷೇಕ್ ಮದುವೆ ಮುರಿದು ಬೀಳಲು ಕಾರಣವೇನು ಎಂಬುದನ್ನ ಇಂದು ನಾವು ನಿಮಗೆ ಹೇಳಲಿದ್ದೇವೆ.


ಇದನ್ನೂ ಓದಿ:Ileana D'cruz : ತಾಯಿಯಾಗಲಿದ್ದಾರಾ ನಟಿ ಇಲಿಯಾನಾ ಡಿಕ್ರೂಜ್? ತಂದೆ ಯಾರು ಎಂದ ನೆಟ್ಟಿಜನ್ಸ್‌!!


ಮಾಧ್ಯಮ ವರದಿಗಳ ಪ್ರಕಾರ, ಕರಿಷ್ಮಾ ಮತ್ತು ಅಭಿಷೇಕ್ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದರು. ಮದುವೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದವು. ಎರಡು ಕುಟುಂಬಗಳ ನಡುವೆ ಕೆಲವು ಮಾತುಕತೆ ಕೂ ನಡೆದಿತ್ತು. ವಾಸ್ತವವಾಗಿ, ಕರಿಷ್ಮಾ ಅವರ ತಾಯಿ ಬಬಿತಾ ಅವರು ಬಚ್ಚನ್ ಕುಟುಂಬವು ತಮ್ಮ ಆಸ್ತಿಯಲ್ಲಿ ಒಂದು ಭಾಗವನ್ನು ಅಭಿಷೇಕ್ ಬಚ್ಚನ್‌ಗೆ ನೀಡಬೇಕೆಂದು ಬಯಸಿದ್ದರು. ಇದರಿಂದ ಅವರ ಮಗಳು ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಎದುರಿಸುವುದಿಲ್ಲ ಎಂಬುದು ಅವರ ಕಾಳಜಿಯಾಗಿತ್ತು. ಆದರೆ, ಬಬಿತಾ ಅವರ ಬೇಡಿಕೆಯನ್ನು ಒಪ್ಪಿಕೊಳ್ಳಲು ಬಚ್ಚನ್ ಕುಟುಂಬ ಸಿದ್ಧರಿರಲಿಲ್ಲ. 


ಇದೇ ವೇಳೆ ಅಭಿಷೇಕ್ ತಾಯಿ ಜಯಾ ಬಚ್ಚನ್ ಕೂಡ ಮದುವೆಗೆ ಮುನ್ನ ಒಂದು ಷರತ್ತು ಹಾಕಿದ್ದರು. ಮದುವೆಯ ನಂತರ ಕರಿಷ್ಮಾ ಸಿನಿಮಾದಲ್ಲಿ ನಟಿಸಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಈ ವಿಷಯ ಕರಿಷ್ಮಾಗೆ ಒಪ್ಪಿಗೆಯಾಗಿರಲಿಲ್ಲ ಎನ್ನಲಾಗಿದೆ. ವರದಿಗಳ ಪ್ರಕಾರ, ಈ ಎರಡು ಷರತ್ತುಗಳಿಂದ ಕರಿಷ್ಮಾ ಮತ್ತು ಅಭಿಷೇಕ್ ಮದುವೆ ನಡೆಯಲಿಲ್ಲ ಎನ್ನಲಾಗುತ್ತದೆ.


2003 ರಲ್ಲಿ ಕರಿಷ್ಮಾ ದೆಹಲಿಯ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಮದುವೆಯ ನಂತರ, ಕರಿಷ್ಮಾ ಮತ್ತು ಸಂಜಯ್ ನಡುವೆ ಸಂಬಂಧ ಹಳಿಸಿತು. 2016 ರಲ್ಲಿ ಇಬ್ಬರೂ ವಿಚ್ಛೇದನ ಪಡೆದು, ಬೇರ್ಪಟ್ಟರು. ಅದೇ ಸಮಯದಲ್ಲಿ, ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರನ್ನು ವಿವಾಹವಾದರು. 


ಇದನ್ನೂ ಓದಿ:ಏಪ್ರಿಲ್ 21 ರಂದು ತೆರೆಗೆ ಬರಲಿದೆ "ಬಿಸಿಲು ಕುದುರೆ"


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.