ಅಭಿನಯ ಚಕ್ರವರ್ತಿಗೆ ಸರ್ಪ್ರೈಸ್ ನೀಡಿದ ಕರುನಾಡ ಚಕ್ರವರ್ತಿ..!
ಕನ್ನಡಿಗರ ಪಾಲಿನ ಪ್ರೀತಿಯ ನಟ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅವರ ಸ್ನೇಹ ತುಂಬಾ ಗಟ್ಟಿಯಾಗಿದೆ. 'ವಿಕ್ರಾಂತ್ ರೋಣ' ರಿಲೀಸ್ ಸಂದರ್ಭದಲ್ಲಿ ಕಿಚ್ಚ ಸುದೀಪ್‌ಗೆ ಸಾಥ್ ನೀಡಿದ್ದ ನಟ ಶಿವಣ್ಣ, ಇದೀಗ ಮತ್ತೊಂದು ಗಿಫ್ಟ್ ಕೊಟ್ಟಿದ್ದಾರೆ. ಸೆಪ್ಟೆಂಬರ್ 2ಕ್ಕೆ ಅಭಿನಯ ಚಕ್ರವರ್ತಿ ಬರ್ತ್ ಡೇ ಇದ್ದು, ಈ ಶುಭ ಸಂದರ್ಭದಲ್ಲಿ 'ಸಿಡಿಪಿ' ಸರ್ಪ್ರೈಸ್ ಕೊಟ್ಟಿದ್ದಾರೆ ನಟ ಶಿವಣ್ಣ.
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕಾಗಿ 'ಸಿಡಿಪಿ' ರಿಲೀಸ್ ಮಾಡಿದ್ದಾರೆ ನಟ ಶಿವಣ್ಣ. ಈ ಕುರಿತು ಬೆಳಗ್ಗೆಯಿಂದಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲೂ ಈ ವಿಚಾರ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಇದೀಗ 'ಸಿಡಿಪಿ' ರಿಲೀಸ್ ಮಾಡಿರುವ ನಟ ಶಿವಣ್ಣ ಸುದೀಪ್ ಅವರಿಗೆ ಶುಭ ಹಾರೈಸಿದ್ದಾರೆ. ಈ ಮೂಲಕ ಸುದೀಪ್ ಹುಟ್ಟುಹಬ್ಬಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು ಶುಕ್ರವಾರ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಲಿದೆ.
ಇದನ್ನೂ ಓದಿ: 'ಲೈಗರ್' ಸಿನಿಮಾ ಮಾಡಿದ್ದನ್ನೇ ಮರೆತು ಹೋದ್ರಾ ಮೈಕ್ ಟೈಸನ್..?
ಶಿವಣ್ಣ ಸಾಥ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 'ವಿಕ್ರಾಂತ್ ರೋಣ' ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಈಗಾಗಲೇ ಬಾಕ್ಸ್ ಆಫಿಸ್‌ನಲ್ಲಿ ₹210 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರ ₹250 ಕೋಟಿ ಕ್ಲಬ್ ಸೇರಲು ದಾಪುಗಾಲು ಇಡುತ್ತಿದೆ. ಈ ಹೊತ್ತಲ್ಲೇ ಅಭಿಮಾನಿಗಳಿಗೆ ಡಬಲ್ ಧಮಾಖ ಸಿಕ್ಕಿದೆ. ಸೆಪ್ಟಂಬರ್ 2ರಂದು ಅದ್ಧೂರಿಯಾಗಿ ಕಿಚ್ಚ ಸುದೀಪ್ ಅವರ ಬರ್ತ್ ಡೇ ಆಚರಿಸಲು ಅಭಿಮಾನಿ ಬಳಗ ಸಜ್ಜಾಗಿದ್ದು, ಸಂಭ್ರಮಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಸಾಥ್ ನೀಡಿದ್ದಾರೆ.ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು!
ZEE5 ಸರ್ಪ್ರೈಸ್
'ವಿಕ್ರಾಂತ್ ರೋಣ' ರಿಲೀಸ್ ಆಗಿ 1 ತಿಂಗಳು ಕಂಪ್ಲೀಟ್ ಆಗಿದೆ. ಈ ಹೊತ್ತಲ್ಲೇ ಕೋಟಿ ಕೋಟಿ ಕನ್ನಡಿಗರಿಗೆ ಸಿಹಿಸುದ್ದಿ ಸಿಕ್ಕಿದೆ. ಸೆ.2ರ ಶುಕ್ರವಾರ ಕಿಚ್ಚ ಸುದೀಪ್ 49ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಶುಭ ಸಂದರ್ಭದಲ್ಲಿ ZEE5 ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದೆ. ಸೆಪ್ಟೆಂಬರ್ 2ರಿಂದಲೇ ZEE5ನಲ್ಲಿ ‘ವಿಕ್ರಾಂತ್ ರೋಣ’ ಸ್ಟ್ರೀಮಿಂಗ್ ಆಗಲಿದೆ. ಸಾವಿರಾರು ಬಿಗ್ ಸ್ಕ್ರೀನ್‌ನಲ್ಲಿ 3D ‘ವಿಕ್ರಾಂತ್ ರೋಣ’ ಕಣ್ತುಂಬಿಕೊಂಡಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಗ್ರೇಟ್ ನ್ಯೂಸ್ ಸಿಕ್ಕಿದೆ. ಇದೇ ಪ್ರೋಮೋದಲ್ಲಿ 'ZEE5' ಸಂಸ್ಥೆ 'ವಿಕ್ರಾಂತ್ ರೋಣ' ಗಳಿಸಿರುವ ಒಟ್ಟು ಮೊತ್ತ ಎಷ್ಟೆಂಬ ವಿಚಾರನ್ನು ಸ್ಪಷ್ಟಪಡಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.