Katrina Kaif Pregnant: ಬಾಲಿವುಡ್ ನಟಿ ಕತ್ರಿನಾ ಕೈಫ್ ಗರ್ಭಿಣಿ ಎಂಬ ವರದಿಗಳು ಹರಿದಾಡುತ್ತಿವೆ. ಸದ್ಯದಲ್ಲೇ ವಿಕ್ಕಿ ಕೌಶಲ್ ಮನೆಗೆ ಪುಟ್ಟ ಅತಿಥಿ ಬರಲಿದ್ದಾರೆ ಎಂದು ಹೇಳಲಾಗ್ತಿದೆ. ಕತ್ರಿನಾ ಕೈಫ್‌ ಇತ್ತೀಚೆಗೆ ದುಪ್ಪಟ್ಟಾದಿಂದ ಹೊಟ್ಟೆಯನ್ನು ಮರೆಮಾಚಿಕೊಂಡ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಈ ಫೋಟೋ ನೋಡಿದ ತಕ್ಷಣ ಅಭಿಮಾನಿಗಳು ಕತ್ರಿನಾ ಮತ್ತು ವಿಕ್ಕಿ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂದು ಹೇಳಲು ಆರಂಭಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದೀಪಿಕಾ - ರಣವೀರ್ ಮಗು ಜನಿಸುತ್ತಲೇ ಎಷ್ಟು ಕೋಟಿಯ ಆಸ್ತಿಗೆ ಒಡೆಯನಾಗುವುದು ಗೊತ್ತೇ!? 


ವರದಿಗಳ ಪ್ರಕಾರ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಪೋಷಕರಾಗಲಿದ್ದಾರೆ ಎಂದು ಹೇಳಲಾಗ್ತಿದೆ. ಜಾಮ್‌ನಗರದಲ್ಲಿ ನಡೆದ ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದ ನಂತರ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಫೋಟೋಗೆ ಪೋಸ್‌ ನೀಡಿದರು. ಈ ವೇಳೆ ಕತ್ರಿನಾ ತನ್ನ ಹೊಟ್ಟೆಯನ್ನು ದುಪಟ್ಟಾದಿಂದ ಮರೆಮಾಚಿದ್ದರು. ಇದನ್ನು ನೋಡಿದ ನೆಟ್ಟಿಗರು ದೀಪಿಕಾ ಪಡುಕೋಣೆ ಬಳಿಕ ಕತ್ರಿನಾ ಕೈಫ್‌ ಸಹ ಸಿಹಿ ಸುದ್ದಿ ನೀಡಲಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಕತ್ರಿನಾ ಸಹ ಗರ್ಭಿಣಿ ಎಂದು ಊಹಿಸುತ್ತಿದ್ದಾರೆ.  


ವೈರಲ್ ಆಗುತ್ತಿರುವ ದಂಪತಿಗಳ ಈ ಫೋಟೋದಲ್ಲಿ, ಕತ್ರಿನಾ ಬೇಬಿ ಪಿಂಕ್ ಕಲರ್ ಸೂಟ್ ಧರಿಸಿದ್ದರು. ನಟ ವಿಕ್ಕಿ ಕೌಶಲ್ ಅವರ ಕೈ ಹಿಡಿದು ಫೋಟೋಗೆ ಪೋಸ್‌ ನೀಡಿದ್ದಾರೆ. ಕತ್ರಿನಾ ಕೈಫ್‌ ಪ್ರಗ್ನೆಂಟ್‌ ಎಂಬ ಸುದ್ದಿ ವದಂತಿಯಂತೆ ಹಬ್ಬುತ್ತಿದೆ. ಆದರೆ ವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. 


ಇದನ್ನೂ ಓದಿ: ಜಪಾನ್ ನಲ್ಲಿ ನ್ಯಾಷನಲ್ ಕ್ರಶ್ : ಫೋಟೋಸ್ ಇಲ್ಲಿವೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.