Katrina Kaif : ಬಾಲಿವುಡ್ ನಟಿಯರಾದ ಆಲಿಯಾ ಭಟ್ ಮತ್ತು ಬಿಪಾಶಾ ಬಸು ಇತ್ತೀಚೆಗೆ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಅದರ ನಂತರ ಕತ್ರಿನಾ ಕೈಫ್ ಬಗ್ಗೆ ಸುದ್ದಿಯೊಂದು ವೇಗವಾಗಿ ಹರಿದಾಡುತ್ತಿದೆ. ವಾಸ್ತವವಾಗಿ, ಕತ್ರಿನಾ ಅವರ ಹೊಟ್ಟೆಯು ಚಾಚಿಕೊಂಡಿರುವಂತೆ ತೋರುವ ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಇದರ ನಂತರ ಜನರು ಕತ್ರಿನಾ ಗರ್ಭಿಣಿ ಎಂದು ಊಹಿಸಲು ಪ್ರಾರಂಭಿಸಿದ್ದಾರೆ. 'ಮೆರ್ರಿ ಕ್ರಿಸ್‌ಮಸ್' ಚಿತ್ರದ ಸೆಟ್‌ನಿಂದ ಕತ್ರಿನಾ ಅವರ ಈ ವಿಡಿಯೋ ಹೊರಬಂದಿದೆ. ಆದರೆ ಕತ್ರಿನಾ ನಿಜವಾಗಿಯೂ ಗರ್ಭಿಣಿಯೇ? ಕತ್ರಿನಾ - ವಿಕ್ಕಿ ಕೌಶಲ್ ಪೋಷಕರಾಗಲಿದ್ದಾರೆಯೇ? ಇದರ ಹಿಂದಿನ ಸತ್ಯ ಇಲ್ಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇವರೇ ನೋಡಿ ಬಿಗ್‌ಬಾಸ್‌ ವಿನ್ನರ್‌ : ಗುಟ್ಟು ರಟ್ಟು ಮಾಡಿತು ಕಿಚ್ಚನ ಚಪ್ಪಾಳೆ..!


ಕತ್ರಿನಾ ಕೈಫ್ ಕಳೆದ ವರ್ಷ ನವೆಂಬರ್ 2021 ರಲ್ಲಿ ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು. ಕೆಲವು ದಿನಗಳ ನಂತರ, ಅವರು ತಮ್ಮ ತಮ್ಮ ವೃತ್ತಿ ಜೀವನಕ್ಕೆ ಮರಳಿದರು. ಇಬ್ಬರೂ ‘ಮೆರ್ರಿ ಕ್ರಿಸ್‌ಮಸ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾದರು. ಶ್ರೀರಾಮ್ ರಾಘವನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಜನ ಕಾತರದಿಂದ ಕಾಯುತ್ತಿದ್ದಾರೆ. ಹಾಗಾಗಿಯೇ ವೈರಲ್ ಆಗುತ್ತಿರುವ ಕತ್ರಿನಾ ಬೇಬಿ ಬಂಪ್ ಫೋಟೋ ಈ ಚಿತ್ರದ ಶೂಟಿಂಗ್ ನ ಭಾಗವಾಗಿರುವ ಸಾಧ್ಯತೆಯೂ ಇದೆ.


 


ನಿರ್ಮಾಣದ ಜೊತೆಗೆ ನಟನೆಗೂ ಧೋನಿ ಎಂಟ್ರಿ! ದಳಪತಿ ವಿಜಯ್ ಚಿತ್ರದಲ್ಲಿ ಕೂಲ್ ಕ್ಯಾಪ್ಟನ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.