Katrina Kaif Vicky Kaushal: ಸೆಲೆಬ್ರಿಟಿಗಳ ಮದುವೆ, ಪ್ರೆಗ್ನೆನ್ಸಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ರೂಮರ್ ಗಳು ಹರಿದಾಡುತ್ತಿವೆ. ಇತ್ತೀಚೆಗೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಗರ್ಭಿಣಿ ಎಂಬ ಸುದ್ದಿ ಶುರುವಾಗಿದೆ. ವಿಕ್ಕಿ ಕೌಶಲ್ ಅವರನ್ನು ಕತ್ರಿನಾ ಕೈಫ್ ಮದುವೆಯಾಗಿರುವುದು ಗೊತ್ತೇ ಇದೆ. ಈ ಜೋಡಿ ಪ್ರೀತಿಸಿ ಮದುವೆಯಾದರು. ಇದೀಗ ಕತ್ರಿನಾ ಕೈಫ್ ಗರ್ಭಿಣಿ ಎಂಬ ಸುದ್ದಿ ವೈರಲ್‌ ಆಗಿದೆ. ಈ ಬಗ್ಗೆ ಕತ್ರಿನಾ ಆಗಲಿ, ವಿಕ್ಕಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕತ್ರಿನಾಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  


COMMERCIAL BREAK
SCROLL TO CONTINUE READING

ಕತ್ರಿನಾ ಮತ್ತು ವಿಕ್ಕಿ ಸದ್ಯ ಲಂಡನ್‌ನಲ್ಲಿದ್ದಾರೆ. ಇವರಿಬ್ಬರು ಲಂಡನ್ ರಸ್ತೆಯಲ್ಲಿ ನಡೆದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕೆಲವರು ಕತ್ರಿನಾ ಮತ್ತು ವಿಕ್ಕಿ ಒಟ್ಟಿಗೆ ಸುತ್ತಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 


 


ಸೋಷಿಯಲ್ ಮೀಡಿಯಾದಲ್ಲಿ NTR ಫಾಲೋ ಮಾಡುವ ಏಕೈಕ ವ್ಯಕ್ತಿ ಯಾರು ಗೊತ್ತಾ?


ಈ ವಿಡಿಯೋಗೆ ಅಭಿಮಾನಿಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ‘ಕತ್ರೀನಾ ಕೈಫ್ ಗರ್ಭಿಣಿ’ ಎಂದರು. ಆದರೆ ಮತ್ತೆ ಕೆಲವರು ಅದು ಕತ್ರಿನಾ ಅಲ್ಲ ಎಂದು ಹೇಳುತ್ತಿದ್ದಾರೆ.


ಇತ್ತೀಚೆಗೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಅದಕ್ಕೊಂದು ಕಾರಣವಿದೆ. 'ಮೆರ್ರಿ ಕ್ರಿಸ್‌ಮಸ್' ನಂತರ ಕತ್ರಿನಾ ಕೈಫ್ ಯಾವುದೇ ಹೊಸ ಸಿನಿಮಾವನ್ನು ಘೋಷಿಸಿಲ್ಲ. ಕತ್ರಿನಾ ಗರ್ಭಿಣಿಯಾಗಿದ್ದು, ಅದಕ್ಕಾಗಿಯೇ ಅವರು ಚಿತ್ರಗಳಿಗೆ ಗ್ಯಾಪ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೇ ಇರಲಿ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ಬರುವ ಸಾಧ್ಯತೆ ಇದೆ.


ಇದನ್ನೂ ಓದಿ: ಮತ್ತೆ ಮುಂದುವರೆದ ನಟ ದರ್ಶನ್ ವಿಜಯ ಲಕ್ಷ್ಮಿ ಮತ್ತು ನಟಿ ಪವಿತ್ರಾ ಗೌಡ ವಾರ್ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.