ನವದೆಹಲಿ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ 11ನೇ ಆವೃತ್ತಿಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಶಾಲಾ ಅಡುಗೆ ಸಹಾಯಕಿ ಈಗ ಕೋಟ್ಯಾದಿಪತಿಯಾಗಿ ಹೊರಹೊಮ್ಮಿದ್ದಾಳೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರ ಮೂಲದ ಅಮರಾವತಿಯವರಾದ ಬಬಿತಾ ತಾಡೆ ಕೌನ್ ಬನೇಗಾ ಕರೋಡಪತಿಯಲ್ಲಿ ಕೋಟ್ಯಾದಿಪತಿಯಾಗಿರುವ ಕಥೆಯೇ ರೋಮಾಂಚನವಾಗಿದೆ. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಮಹಿಳೆ, ಸರಿ ಸುಮಾರು ಪ್ರತಿದಿನಕ್ಕೆ 450 ಕ್ಕೂ ಅಧಿಕ ಮಕ್ಕಳಿಗೆ ಊಟ ಸಿದ್ದಪಡಿಸುತ್ತಾಳೆ. ಇದಕ್ಕಾಗಿ ಅವರು 1500 ರೂಪಾಯಿಯಂತೆ ಪ್ರತಿ ತಿಂಗಳ ಸಂಬಳವನ್ನು ಪಡೆಯುತ್ತಾರೆ.


ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಒಂದು ಕೋಟಿ ರೂ ಮೊತ್ತದ ಪ್ರಶ್ನೆಯಾಗಿ 'ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ ಅವರ ಆಸ್ಥಾನದಲ್ಲಿ ಯಾವ ಕವಿ 1857 ರ ದಂಗೆಯ ಕುರಿತಾದ ತಮ್ಮ ವೈಯಕ್ತಿಕ ದಸ್ತಾನ್-ಎ-ಗದರ್ ನ್ನು ಬರೆದಿದ್ದಾರೆ? ಎಂದು ಕೇಳಿದಾಗ ಈ ಪ್ರಶ್ನೆಯ ಬಗ್ಗೆ ಅವರು ಅಷ್ಟೊಂದು ಖಚಿತವಾಗಿರಲಿಲ್ಲ, ಆದರೆ ಇನ್ನೊಬ್ಬರ ಸಹಾಯದಿಂದ ಅವರು ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. 


ಅಂತಿಮವಾಗಿ ಆಕೆಗೆ ಜಾಕ್ ಪಾಟ್ ಪ್ರಶ್ನೆಯಾಗಿ 'ಈ ಕೆಳಗಿನ ಯಾವ ರಾಜ್ಯಗಳಲ್ಲಿನ ಅಧಿಕ ರಾಜ್ಯಪಾಲರು ಭಾರತದ ರಾಷ್ಟ್ರಪತಿಗಳಾಗಿದ್ದಾರೆ ? ಎಂದು ಕೇಳಿದಾಗ ಆಗ ಬಬಿತಾ ಆಟವನ್ನು ಬಿಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಅಮಿತಾಬ್ ಯಾವ ಉತ್ತರ ಸರಿ ಇರಬಹುದು ಎಂದು ಕೇಳಿದಾಗ ಅವರು ಬಿಹಾರ ಎಂದು ಉತ್ತರಿಸಿದರು. ಆದರೆ ಅಚ್ಚರಿ ಎನ್ನುವಂತೆ ಆ ಉತ್ತರ ಸರಿಯಾಗಿತ್ತು.


ಒಂದು ಕೋಟಿ ರೂಪಾಯಿ ಗೆದ್ದ ನಂತರ ಅಮಿತಾಬ್ ಬಚ್ಚನ್ ಅವರು ಆ ಮಹಿಳೆಗೆ ಈ ಹಣವನ್ನು ಏನು ಮಾಡುತ್ತಿರಿ ಎಂದು ಕೇಳಿದಾಗ, ಅದಕ್ಕೆ ಅವರು ಉತ್ತರಿಸುತ್ತಾ ಸ್ವಂತ ಒಂದು ಪೋನ್ ಖರಿದಿಸುವುದಾಗಿ ಹೇಳಿ ಅಮಿತಾಬ್ ರಲ್ಲಿ ಒಂದು ಕ್ಷಣ ಅಚ್ಚರಿ ಮೂಡಿಸಿದರು.