Keerthy Suresh On casting couch : ಕೀರ್ತಿ ಸುರೇಶ್ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್‌, ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್, ಕಾಸ್ಟಿಂಗ್ ಕೌಚ್ ಚಿತ್ರರಂಗದಲ್ಲಿ ಸದಾ ಚಾಲ್ತಿಯಲ್ಲಿರುವ ಸತ್ಯ ಎಂದು ಹೇಳಿದ್ದಾರೆ.  


COMMERCIAL BREAK
SCROLL TO CONTINUE READING

ಸಿನಿಮಾದಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿರುವ ಅನೇಕರು ಲೈಂಗಿಕ ಕಿರುಕುಳದ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ. ಆದರೆ ಇಲ್ಲಿಯವರೆಗೆ ನನ್ನೊಂದಿಗೆ ಅಂತಹದ್ದೇನೂ ನಡೆದಿಲ್ಲ. ನಾನು ಹೇಗಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು. ಇಲ್ಲಿಯವರೆಗೂ ಯಾರೂ ನನ್ನ ಬಳಿ ಈ ರೀತಿ ನಡೆದುಕೊಂಡಿಲ್ಲ. ಭವಿಷ್ಯದಲ್ಲಿ ಅಂತಹದ್ದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.  


ಇದನ್ನೂ ಓದಿ : ಫಸ್ಟ್ ಲವ್ ಎಂದಿಗೂ ಮರೆಯಲ್ಲ ಎಂದ ಆಲಿಯಾ ಭಟ್‌.. ಇವರೇ ಮೊದಲ ಪ್ರಿಯಕರ! 


ಯಾರಾದರೂ ಲೈಂಗಿಕ ಕಿರುಕುಳ ಅಥವಾ ನಿಂದನೆ ಮಾಡಲು ಪ್ರಯತ್ನಿಸಿದರೆ, ಆ ಚಲನಚಿತ್ರವನ್ನು ತಿರಸ್ಕರಿಸುತ್ತೇನೆ ಎಂದಿದ್ದಾರೆ. ಅಲ್ಲದೇ ನಟನಾ ವೃತ್ತಿಯಿಂದ ಶಾಶ್ವತವಾಗಿ ದೂರ ಸರಿಯುತ್ತೇನೆ ಎಂದು ಹೇಳಿದ್ದಾರೆ. 


ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಕಾಲೇಜಿಗೆ ಹೋಗುವ ಸಮಯದಲ್ಲಿ ರಸ್ತೆಯ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಕಾಲೇಜಿನಲ್ಲಿ ಓದುತ್ತಿದ್ದಾಗ ರಸ್ತೆಯಲ್ಲಿ ತನ್ನ ಸ್ನೇಹಿತೆಯೊಂದಿಗೆ ಹೋಗುವಾಗ ನಡೆದ ಕೆಟ್ಟ ಘಟನೆ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ‌ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಕುಡುಕ ತನ್ನ ಮೇಲೆ ಒರಗಿ ಮೈ ಮೇಲೆ ಕೈ ಹಾಕಿದ ಎನ್ನಲಾಗಿದೆ. ಆಗ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಹೆದರಿ ಬಿಟ್ಟೆ. ನಂತರ ಧೈರ್ಯದಿಂದ ಆತನ ಕೆನ್ನೆಗೆ ಹೊಡೆದೆ ಎಂದು ಕೀರ್ತಿ ಸುರೇಶ್ ತಿಳಿಸಿದ್ದಾರೆ ಎನ್ನಲಾಗಿದೆ. ‌ 


ಇದನ್ನೂ ಓದಿ : 20 ವರ್ಷಕ್ಕೆ ಸಿನಿಮಾಗೆ ಎಂಟ್ರಿ 30 ವರ್ಷಕ್ಕೆ ವೃತ್ತೀಜೀವನ ಅಂತ್ಯ! ಆದ್ರೂ 3300 ಕೋಟಿ ಒಡೆಯ ಈ ನಟ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.