Pinarayi Vijayan on the kerala story : ಟ್ರೈಲರ್‌ ಮೂಲಕ ನಿರೀಕ್ಷೆ ಹುಟ್ಟಿಸಿರುವ ʼದಿ ಕೇರಳ ಸ್ಟೋರಿʼ ಸಿನಿಮಾ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಿಡಿಕಾರಿದ್ದಾರೆ. ಈ ಚಿತ್ರ ಕೋಮುವಾದದ ಗುರಿ ಹೊಂದಿದೆ ಎಂದು ಹೇಳಿದ್ದಾರೆ. ಜಾತ್ಯಾತೀತತೆಯ ನಾಡಾಗಿರುವ ಕೇರಳವನ್ನು ಧಾರ್ಮಿಕ ಉಗ್ರಗಾಮಿಗಳ ತಾಣವನ್ನಾಗಿ ಮಾಡುವ ಮೂಲಕ ಸಂಘಪರಿವಾರ ಅಪಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಕೇರಳ ಮುಂಬರುವ ಚುನಾವಣೆಯನ್ನು ಗುರಿಯಾಗಿಸಿಕೊಂಡು ಸಂಘಪರಿವಾರ ಈ ರೀತಿಯ ಕೆಲಸಕ್ಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಮೊನ್ನೆ ದಿ ಕೇರಳ ಸ್ಟೋರಿ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿತ್ತು. ಎಲ್ಲೇಡೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಈ ಚಿತ್ರದ ಕುರಿತು ಕೇರಳ ಸಿಎಂ ಮಾತನಾಡಿದ್ದಾರೆ. ಚಿತ್ರದ ಟ್ರೇಲರ್ ನಲ್ಲಿ 32,000 ಮಹಿಳೆಯರು ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್ ಸದಸ್ಯರಾಗಿದ್ದಾರೆ ಎಂಬ ಸುಳ್ಳನ್ನು ತೋರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಟೀಕಿಸಿದರು. ಇದು ಬೋಗಸ್ ಕಥೆ, ಕೇರಳದಲ್ಲಿ ಧಾರ್ಮಿಕ ಸಾಮರಸ್ಯದ ವಾತಾವರಣ ಹಾಳು ಮಾಡಿ ಕೋಮುವಾದದ ವಿಷಬೀಜ ಬಿತ್ತಲು ಸಂಘಪರಿವಾರ ಯತ್ನಿಸುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ಸುಳ್ಳು ಪ್ರಚಾರದ ಮೂಲಕ ಸಮಾಜದಲ್ಲಿ ಅಶಾಂತಿ ಹರಡುವ ಕೋಮುವಾದಿ ಪ್ರಯತ್ನಗಳ ವಿರುದ್ಧ ಎಲ್ಲರೂ ಜಾಗೃತರಾಗುವಂತೆ ತಮ್ಮ ಫೇಸ್ ಬುಕ್ ಪೋಸ್ಟ್ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.


ಇದನ್ನೂ ಓದಿ:  ಈ ನಟಿಯನ್ನು ದೇವತೆಯಂತೆ ಪೂಜಿಸಲಾಗುತ್ತಿತ್ತು! ಆ ಒಂದು ಫೋಟೋಶೂಟ್ ಎಲ್ಲವನ್ನೂ ಹಾಳುಮಾಡಿತು


ʼಕೇರಳ ಸ್ಟೋರಿʼ ಟ್ರೇಲರ್ ಕಳೆದ ದಿನ ಬಿಡುಗಡೆಯಾಗಿದೆ, ಮೊದಲ ನೋಟದಲ್ಲಿ ಈ ಸಿನಿಮಾವನ್ನು ಕೋಮುವಾದ ಮತ್ತು ಕೇರಳದ ವಿರುದ್ಧ ದ್ವೇಷದ ಪ್ರಚಾರದ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ನಿರ್ಮಿಸಲಾಗಿದೆ ಎಂದು ತೋರುತ್ತದೆ. ಜಾತ್ಯತೀತತೆಯ ನಾಡಾಗಿರುವ ಕೇರಳವನ್ನು ಧಾರ್ಮಿಕ ಉಗ್ರವಾದದ ಕೇಂದ್ರವನ್ನಾಗಿಸಿ ಸಂಘಪರಿವಾರದ ಪ್ರಚಾರಕ್ಕೆ ಈ ಚಿತ್ರ ಕೈಹಾಕುತ್ತಿದೆ ಎಂಬುದು ಟ್ರೇಲರ್‌ನ ಸುಳಿವು. 


 


ಕೇರಳದಲ್ಲಿ ಚುನಾವಣಾ ರಾಜಕೀಯದಲ್ಲಿ ಲಾಭ ಗಳಿಸಲು ಸಂಘಪರಿವಾರ ನಡೆಸಿದ ವಿವಿಧ ಪ್ರಯತ್ನಗಳ ಹಿನ್ನೆಲೆಯಲ್ಲಿ ಪ್ರಚಾರದ ಚಲನಚಿತ್ರಗಳು ಮತ್ತು ಮುಸ್ಲಿಮರನ್ನು ದೂರವಿಡುವುದನ್ನು ನೋಡಬೇಕು. ತನಿಖಾ ಸಂಸ್ಥೆಗಳು, ನ್ಯಾಯಾಲಯಗಳು ಮತ್ತು ಕೇಂದ್ರ ಗೃಹ ಸಚಿವಾಲಯದಿಂದಲೂ ವಜಾಗೊಂಡಿರುವ "ಲವ್ ಜಿಹಾದ್" ಆರೋಪಗಳನ್ನು ರೂಪಿಸುವುದು ಯೋಜಿತ ಕ್ರಮದ ಭಾಗವಾಗಿದೆ. ಲವ್ ಜಿಹಾದ್ ಎಂಬುದೇ ಇಲ್ಲ ಎಂದು ಆಗ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಾಗೂ ಈಗಲೂ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಸಂಸತ್ತಿನಲ್ಲಿ ಉತ್ತರಿಸಿದರು. ಆದರೂ ಚಿತ್ರದಲ್ಲಿ ಕೇರಳವನ್ನು ಜಗತ್ತಿನ ಮುಂದೆ ಅವಮಾನಿಸುವ ಹಂಬಲದಿಂದಲೇ ಈ ಸುಳ್ಳು ಆರೋಪವನ್ನು ಮುಖ್ಯ ಕಥಾ ವಸ್ತುವನ್ನಾಗಿ ಮಾಡಲಾಗಿದೆ. ಕೇರಳದಲ್ಲಿ ಧಾರ್ಮಿಕ ಸಾಮರಸ್ಯದ ವಾತಾವರಣ ಹಾಳು ಮಾಡಿ ಕೋಮುವಾದದ ವಿಷಬೀಜ ಬಿತ್ತಲು ಸಂಘಪರಿವಾರ ಯತ್ನಿಸುತ್ತಿದೆ.


ಇದನ್ನೂ ಓದಿ: ʼಪೊನ್ನಿಯಿನ್ ಸೆಲ್ವನ್ʼ ಸುಂದರಿಯರ ಅಂದದ ಕಾರುಬಾರು..! ವಿಡಿಯೋ ನೋಡಿ..


ಕೇರಳದಲ್ಲಿ ಪರಿವಾರದ ರಾಜಕೀಯ ನಡೆಯುವುದಿಲ್ಲ, ಹಾಗಾಗಿ ನಕಲಿ ಕಥೆಗಳನ್ನು ಆಧರಿಸಿ ಚಿತ್ರದ ಮೂಲಕ ವಿಭಜನೆಯ ರಾಜಕೀಯವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಸತ್ಯ ಅಥವಾ ಪುರಾವೆಗಳ ಬೆಂಬಲವಿಲ್ಲದೆ ಸಂಘಪರಿವಾರ ಇಂತಹ ಸುಳ್ಳುಗಳನ್ನು ಹರಡುತ್ತಿದೆ. ಸಿನಿಮಾದ ಟ್ರೇಲರ್‌ನಲ್ಲಿ ಕೇರಳದಲ್ಲಿ 32,000 ಮಹಿಳೆಯರು ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್‌ನ ಸದಸ್ಯರಾಗಿದ್ದಾರೆ ಎಂಬುವುದು ಒಂದು ಸುಳ್ಳು ಕಥೆ. ಮಲಯಾಳಿಗಳು ಸುಳ್ಳು ಪ್ರಚಾರದ ಮೂಲಕ ಸಮಾಜದಲ್ಲಿ ಅಶಾಂತಿ ಹರಡುವ ಕೋಮುವಾದಿ ಪ್ರಯತ್ನಗಳ ವಿರುದ್ಧ ಎಲ್ಲರೂ ಜಾಗೃತರಾಗಬೇಕು. ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇರಳ ಸಿಎಂ ತಿಳಿಸಿದ್ದಾರೆ.


ಸುದೀಪ್ತೋ ಸೇನ್ ನಿರ್ದೇಶನದ "ದಿ ಕೇರಳ ಸ್ಟೋರಿ" ಮೇ 5 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಮುಖ್ಯ ಪಾತ್ರದಲ್ಲಿ ಅದಾ ಶರ್ಮಾ ಕಾಣಿಸಿಕೊಂಡಿದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಭಾರೀ ವಿವಾದ ಸೃಷ್ಟಿಸಿತ್ತು. ಇತ್ತೀಚೆಗೆ, ಟ್ರೈಲರ್‌ ಆಗಮನದೊಂದಿಗೆ, ಕೇರಳ ಸ್ಟೋರಿ ಸಾಮಾಜಿಕ ಮತ್ತು ರಾಜಕೀಯ ವಲಯದಿಂದ ಟೀಕೆಗೆ ಒಳಗಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.