ಹಾಲಿವುಡ್ ಅಂಗಳದಲ್ಲೂ ಕನ್ನಡಿಗರು ಮಿಂಚಿಂಗ್..? `ಕೆಜಿಎಫ್-2` ಇಂಗ್ಲಿಷ್‌ನಲ್ಲೂ ರಿಲೀಸ್..?
ಮಹತ್ವದ ಸುದ್ದಿ ಕೆಜಿಎಫ್ ಅಡ್ಡಾದಿಂದ ಈಗ ಹೊರಬಿದ್ದಿದ್ದು, ಕನ್ನಡಿಗರು ಮತ್ತಷ್ಟು ಖುಷಿಪಡುವ ಸಂಗತಿ ಸಿಕ್ಕಿದೆ.
ನವದೆಹಲಿ : 'ಕೆಜಿಎಫ್'.. ಈ ಪದ ಜಗತ್ತಿನಾದ್ಯಂತ ರಾರಾಜಿಸುತ್ತಿದೆ. ಕನ್ನಡದ ಸಿನಿಮಾಗೆ ಪ್ರಪಂಚ ಕಾಯುತ್ತಿರುವುದೇ ಹೆಮ್ಮೆಯ ಸಂಗತಿ. ಹೀಗಿರುವಾಗಲೇ ಇನ್ನೊಂದು ಮಹತ್ವದ ಸುದ್ದಿ ಕೆಜಿಎಫ್ (KGF)ಅಡ್ಡಾದಿಂದ ಈಗ ಹೊರಬಿದ್ದಿದ್ದು, ಕನ್ನಡಿಗರು ಮತ್ತಷ್ಟು ಖುಷಿಪಡುವ ಸಂಗತಿ ಸಿಕ್ಕಿದೆ. ಅಷ್ಟಕ್ಕೂ ಏನದು ಅಪ್‌ಡೇಟ್..? ಕೆಜಿಎಫ್ ಕ್ರಿಯೇಟ್ ಮಾಡ್ತಿರೋ ಮತ್ತೊಂದು ದಾಖಲೆ ಏನು..?
ಕೆಜಿಎಫ್.. ಕೆಜಿಎಫ್.. ಕೆಜಿಎಫ್.. ಎಲ್ಲಿ ನೋಡಿದರೂ ಕೆಜಿಎಫ್ ದೇ ಹವಾ ಮತ್ತು ಕೆಜಿಎಫ್ ಚಿತ್ರದ ಬಗ್ಗೆಯೇ ಮಾತುಕತೆ. ಯಾಕಂದ್ರೆ ಕೆಜಿಎಫ್ ಪಾರ್ಟ್ 2 (KGF Part 2) ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿ ಬಿಟ್ಟಿದೆ. ಹೀಗಾಗಿ ಫ್ಯಾನ್ಸ್ ಕಾತರ ಮತ್ತಷ್ಟು ಹೆಚ್ಚಾಗಿದ್ದು, ಯಾವಾಗ ಸಿನಿಮಾ ಕಣ್ತುಂಬಿಕೊಳ್ಳುತ್ತೇವೊ ಎಂಬ ಕುತೂಹಲ ಅಭಿಮಾನಿಗಳಲ್ಲಿ ಸೃಷ್ಟಿಯಾಗಿದೆ.
ಇದನ್ನೂ ಓದಿ : ಇವರೇ ಸಲ್ಮಾನ್ ಖಾನ್ ನ 2300 ಕೋಟಿ ಆಸ್ತಿಯ ವಾರಾಸುದಾರ ..!
ಒಂದೊಂದೇ ದಾಖಲೆಗಳನ್ನ ಪುಡಿ ಪುಡಿ ಮಾಡಿದ ಕೀರ್ತಿ 'ಕೆಜಿಎಫ್' ಚಿತ್ರಕ್ಕೆ ಸಲ್ಲುತ್ತದೆ (KGF records). ಈಗಾಗಲೇ ಬಾಲಿವುಡ್ ಹಾಗೂ ಹಾಲಿವುಡ್ ಚಿತ್ರಗಳ ಹಲವು ದಾಖಲೆಗಳನ್ನು ಧೂಳ್ ಮಾಡಿದೆ ಕನ್ನಡದ 'ಕೆಜಿಎಫ್-2' ಸಿನಿಮಾ. ಈ ಹೊತ್ತಲ್ಲೇ ಮತ್ತೊಂದು ಬಿಗ್ ಅಪ್‌ಡೇಟ್ ಸಿಕ್ಕಿದ್ದು, ಹಾಲಿವುಡ್‌ನಲ್ಲೂ (Hollywood) ನಮ್ಮ ಕನ್ನಡ ಸಿನಿಮಾ ಹವಾ ಎಬ್ಬಿಸೋದು ಗ್ಯಾರಂಟಿ ಎನ್ನಲಾಗುತ್ತಿದೆ.
ಇಂಗ್ಲಿಷ್‌ನಲ್ಲೂ ರಿಲೀಸ್..?
ಅಂದಹಾಗೆ 'ಕೆಜಿಎಫ್-2' (KGF 2) ಈಗಾಗಲೇ ಕನ್ನಡವೂ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಇದರ ಜೊತೆಗೆ 'ಕೆಜಿಎಫ್-2' ಚಿತ್ರವನ್ನ ಇಂಗ್ಲಿಷ್ ಭಾಷೆಯಲ್ಲೂ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಐದು ಭಾಷೆಗಳಲ್ಲಿ ಚಿತ್ರ ಸಿದ್ಧವಾಗಿದ್ದು, ಇಂಗ್ಲಿಷ್‌ನಲ್ಲೂ ರಿಲೀಸ್ ಆಗುವ ಮೂಲಕ ಹಾಲಿವುಡ್ ಅಂಗಳದಲ್ಲೂ ಹವಾ ಎಬ್ಬಿಸಲು ರಾಕಿ ಭಾಯ್ (Rocking star Yash) ಸಜ್ಜಾಗಿದ್ದಾರೆ. ಪ್ರಶಾಂತ್ ನೀಲ್ ಕೂಡ ಚಿತ್ರದ ಬಿಡುಗಡೆ ಸಕಲ ಸಿದ್ಧತೆ ನಡೆಸಿದ್ದಾರೆ.
ಹೆಮ್ಮೆಯ ಸಂಗತಿ :
'ಕೆಜಿಎಫ್-2' ಇಂಗ್ಲಿಷ್‌ನಲ್ಲೂ ತೆರೆ ಕಂಡರೆ ಅದು ದಕ್ಷಿಣ ಭಾರತದ ಸಿನಿಮಾಗಳು ಅದರಲ್ಲೂ ನಮ್ಮ ಕನ್ನಡ ಭಾಷೆಗೆ ಹೆಮ್ಮೆಯ ಸಂಗತಿ. ಕನ್ನಡ ಸಿನಿಮಾ ಹಾಲಿವುಡ್ ಸಿನಿಮಾಗಳಿಗೂ ಸ್ಪರ್ಧೆ ನೀಡುವ ಮಟ್ಟಿಗೆ ಬೆಳೆದು ನಿಲ್ಲುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಹೀಗಾಗಿ 'ಕೆಜಿಎಫ್-2' ಇಂಗ್ಲಿಷ್ ಅವತರಿಣಿಕೆಗೆ ಕೂಡ ಕನ್ನಡಿಗರು ಕಾಯುವಂತಾಗಿದೆ. ಹಾಲಿವುಡ್ ಪರದೆ ಮೇಲೆ ಕನ್ನಡದ ನಿರ್ದೇಶಕ ಹಾಗೂ ಕನ್ನಡದ ಹೀರೋ ಮಿಂಚುವುದನ್ನು ನೋಡಲು ಕೌಂಟ್‌ಡೌನ್ ಶುರುವಾಗಿದೆ.
ಇದನ್ನೂ ಓದಿ : ಹಿಜಾಬ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರ ವಿರುದ್ಧ ಟ್ವೀಟ್.. ನಟ ಚೇತನ್ ಅರೆಸ್ಟ್
'ಕೆಜಿಎಫ್-2' ಇಂಗ್ಲಿಷ್ ಭಾಷೆಯಲ್ಲೂ ರಿಲೀಸ್ ಆದ್ರೆ ವಿದೇಶಿಗರಿಗೂ ಸುಲಭ. ಏಕೆಂದರೆ ಈಗಾಗಲೇ ಜಗತ್ತಿನ ಮೂಲೆ ಮೂಲೆಯಲ್ಲೂ ಕೆಜಿಎಫ್-2 ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿ ಬಳಗವಿದೆ. 'ಕೆಜಿಎಫ್-1' ನೋಡಿ, ಕಳನಾಯಕ ಗರುಡಾನ ಅಂತ್ಯವನ್ನ ಕಂಡವರಿಗೆ, 'ಕೆಜಿಎಫ್-2' ನೋಡುವ ಆಸೆ ದಿನೇದಿನೆ ಹೆಚ್ಚಾಗುತ್ತಿದೆ. ಹೀಗಾಗಿ ಇಂಗ್ಲಿಷ್ ಭಾಷೆಯಲ್ಲಿ ಚಿತ್ರ ರಿಲೀಸ್ ಆದರೆ ವಿದೇಶಗಳಲ್ಲೂ 'ಕೆಜಿಎಫ್-2' ಹೌಸ್‌ಫುಲ್ ಪ್ರದರ್ಶನ ಕಾಣುವುದು ಗ್ಯಾರಂಟಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.