ಬೆಂಗಳೂರು: ಕೆಜಿಎಫ್ ಚಾಫ್ಟರ್ -2 ಬಿಡುಗಡೆಗೆ ಕೇವಲ 1 ದಿನ ಮಾತ್ರ ಬಾಕಿ ಇದೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ‘ರಾಕಿ ಭಾಯ್’ ಅಬ್ಬರ ಶುರುವಾಗಲಿದೆ. ಕನ್ನಡದ ಸಿನಿಮಾ ದೇಶ-ವಿದೇಶದಲ್ಲಿಯೂ ಸಖತ್ ಸೌಂಡ್ ಮಾಡುತ್ತಿದೆ. ಎಲ್ಲೆಡೆ ಕೆಜಿಎಫ್- 2 ಜ್ವರ ವ್ಯಾಪಿಸಿದ್ದು, ಕೋಟ್ಯಂತರ ಅಭಿಮಾನಿಗಳು ಸಿನಿಮಾವನ್ನು ವೀಕ್ಷಿಸಲು ತುದಿಗಾಲ ಮೇಲೆ ನಿಂತು ಕಾತುರದಿಂದ ಕಾಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಕನ್ನಡವೂ ಸೇರಿದಂತೆ 5 ಭಾಷೆಗಳಲ್ಲಿ ಕೆಜಿಎಫ್-2 ಸಿನಿಮಾ ಬರೋಬ್ಬರಿ 7500ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ರಿಲೀಸ್‍ಗೂ ಮುನ್ನವೇ ಗಳಿಕೆಯಲ್ಲಿ ಸಿನಿಮಾ ದಾಖಲೆ ಮಾಡಿದೆ. ಬಾಕ್ಸ್‍ ಆಫೀಸ್‍ ಧೂಳಿಪಟ ಮಾಡಿರುವ ಕೆಜಿಎಫ್-2 ಸಿನಿಮಾ ಹವಾ ಮತ್ತು ಕ್ರೇಜ್ ಹೆಚ್ಚಾಗಿದೆ.   ಕನ್ನಡಿಗರು ಹೆಮ್ಮೆಪಟ್ಟುಕೊಂಡು ಸಂಭ್ರಮಿಸುತ್ತಿರುವ ಮಧ್ಯೆಯೇ ಕೆಜಿಎಫ್-2 ಸಿನಿಮಾ ಬಿಗುಡಗೆ ಕಂಟಕ ಎದುರಾಗಿದೆ.  


ಇದನ್ನೂ ಓದಿ: KGF 2 ಹವಾ: 20 ಕೋಟಿ ದಾಟಿದ ಮುಂಗಡ ಬುಕ್ಕಿಂಗ್‌ ಮೊತ್ತ!


ಹೌದು, ಕೆಜಿಎಫ್ -2 ಸಿನಿಮಾ ಬಿಡುಗಡೆಗೆ ತಡೆ ಕೋರಿ ಕಲ್ಯಾಣ ಕರ್ನಾಟಕ ವೇದಿಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಕಲ್ಯಾಣ ಕರ್ನಾಟಕ ವೇದಿಕೆ ಸಂಸ್ಥಾಪಕ ದುಮ್ಮೇನಹಳ್ಳಿ ಅಶೋಕ್ ಕುಮಾರ್, ಅಖಂಡ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ‍್ಯಕ್ಷ ಜೆ.ಸುರೇಶ್ ಗೌಡ ಮತ್ತು ರೈತ ಮತ್ತು ಕಾರ್ಮಿಕರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿ ಗೌಡ ಅವರು ಸಿನಿಮಾ ಬಿಡುಗಡೆ ಮಾಡದಂತೆ ಸಿಟಿ ಸಿವಿಲ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಕೆಜಿಎಫ್-2 ಸಿನಿಮಾದ ನಿರ್ಮಾಪಕರು, ನಿರ್ದೇಶಕ, ನಟ ಹಾಗೂ ವಿತರಕರ ವಿರುದ್ಧ ದೂರಲಾಗಿದೆ. ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಸಿನಿಮಾ ಬಿಡುಗಡೆ ಆಗದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.


Anupama Gowda: ಅನುಪಮಾ ಕೂದಲಿಗೆ ಕತ್ತರಿ ಹಾಕಿದ್ಯಾಕೆ ಗೊತ್ತಾ..?


ದೇಶ-ವಿದೇಶಗಳಲ್ಲಿ ಕೆಜಿಎಫ್-2 ಸಿನಿಮಾ ವೀಕ್ಷಿಸಿಲು ಕೋಟ್ಯಂತರ ಸಿನಿ ಪ್ರೇಮಿಗಳು ಕಾತುರರಾಗಿ ಕಾಯುತ್ತಿರುವ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿರುವುದು ಸಿನಿಮಾ ಬಿಡುಗಡೆ ವಿಚಾರವಾಗಿ ಕುತೂಹಲ ಮೂಡಿಸಿದೆ. ಒಂದು ಅಂದಾಜಿನ ಪ್ರಕಾರ ಕೆಜಿಎಫ್ -2 ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ 1000 ಕೋಟಿ ರೂ.ಗೆ ಹೆಚ್ಚು ಗಳಿಕೆ ಮಾಡಲಿದೆ ಎಂದು ಹೇಳಲಾಗಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.