ಮುಂಬೈ:  ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ 2 ಚಿತ್ರ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಈಗ ಅಧೀರಾ ಪಾತ್ರದ ಮೂಲಕ ಕೆಜಿಎಫ್ ಚಿತ್ರದಲ್ಲಿ ಅಬ್ಬರಿಸಿದ ಸಂಜಯ್ ದತ್ ಬಗ್ಗೆ ಪತ್ನಿ ಮಾನ್ಯತಾ ದತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಪ್ಪಿ ತಪ್ಪಿಯೂ ನೀವು ಕೆಜಿಎಫ್ 2 ಚಿತ್ರ ನೋಡುವಾಗ ಹೀಗೆ ಮಾಡದಿರಿ !


"ಚಿತ್ರವು ಇಂದೊಂದು ರೀತಿ ನಮಗೆ ವಿಶೇಷ ಪ್ರಯಾಣವಾಗಿದೆ.ಬೇಜವಾಬ್ದಾರಿ, ಬದ್ಧತೆಯಿಲ್ಲದ ಮತ್ತು ಕೆಟ್ಟ ಹುಡುಗ ಎಂದು ಆಗಾಗ್ಗೆ ಹಣೆಪಟ್ಟಿ ಕಟ್ಟುವವರೆಲ್ಲರೂ ಅವರ ಸಂಕಲ್ಪ, ಸಮರ್ಪಣೆ ಮತ್ತು ಬದ್ಧತೆಯನ್ನು ನೋಡಲು ಈ ಚಿತ್ರವನ್ನು ನೋಡಲೇಬೇಕು. ಸಂಜು ಈ ಚಿತ್ರವನ್ನು ತಮ್ಮ ಜೀವನದ ಅತ್ಯಂತ ದುರ್ಬಲ ಘಟ್ಟದ ಬದುಕಿನಲ್ಲಿ ಚಿತ್ರೀಕರಿಸಿದ್ದಾರೆ.ಅವರು ಯಾವುದೇ ದೂರುಗಳಿಲ್ಲದೆ, ಆ ಎಲ್ಲಾ ಶ್ರಮದಾಯಕ ದೃಶ್ಯಗಳನ್ನು ಅದೇ ಉತ್ಸಾಹದಿಂದ ಚಿತ್ರೀಕರಿಸಿದ್ದಾರೆ. ನನಗೆ ಅವರೇ ಚಿತ್ರದ ಹೀರೋ., ಶಕ್ತಿಯುತ, ಉತ್ಸಾಹಭರಿತ ಮತ್ತು ಕೊನೆಯವರೆಗೂ ಹೋರಾಟಗಾರ! ಕೆಜಿಎಫ್2 ಅಧೀರ ಪಾಲಾಗಿದೆ! ಎಂದು ಮಾನ್ಯತಾ ದತ್ ತನ್ನ ಪತಿಯ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.


ಇದನ್ನೂ ಓದಿ: #BeastDisaster: ಬೀಸ್ಟ್ ಸಿನಿಮಾ ನೋಡಿ ಡಿಸಾಸ್ಟರ್ ಎಂದ ಫ್ಯಾನ್ಸ್!


ಏತನ್ಮಧ್ಯೆ, ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆ ದೊರೆತಿದೆ.ಯಶ್, ರವೀನಾ ಟಂಡನ್, ಸಂಜಯ್ ದತ್ ಮತ್ತು ಇತರರು ನಟಿಸಿರುವ ಈ ಚಿತ್ರವು ಮೊದಲ ದಿನವೇ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.ಈ ಸಿನಿಮಾ ಈಗ 1000 ಕೋಟಿ ಗಳಿಸಿದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರ ಚಿತ್ರ ಆರ್‌ಆರ್‌ಆರ್‌ನ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳೊಂದಿಗೆ ಹೆಚ್ಚಿನ ಪೈಪೋಟಿ ನೀಡಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.