ಬೆಂಗಳೂರು: ಕೆಜಿಎಫ್ ಚಾಪ್ಟರ್ 2, ಇಡೀ ಜಗತ್ತು ಒಮ್ಮೆಲೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಹೆಮ್ಮೆಯ ಇಂಡಿಯಾದ ಬ್ಲಾಕ್ ಬಸ್ಟರ್  ಸಿನಿಮಾ. ಕಥೆ, ತಾಂತ್ರಿಕತೆ ,ಶ್ರೀಮಂತಿಕೆ ಮತ್ತು ಕಲಾವಿದರ ಆಯ್ಕೆಯಲ್ಲಿ ಚಾಪ್ಟರ್ 1ನ್ನೇ ಮೀರಿಸುವಂತೆ ತೆರೆಗೆ ಅಪ್ಪಳಿಸಿದ ಈ ಚಿತ್ರ ಬಿಡುಗಡೆಗೊಂಡ ಎಲ್ಲಾ ಭಾಷೆಗಳಲ್ಲೂ ಯಶಸ್ವಿಯಾಗಿದ್ದು ಈಗ ಇತಿಹಾಸ. ಇದೀಗ ಈ ಸಿನಿಮಾ ಕನ್ನಡ ಕಿರುತೆರೆಗೆ ಸಿರಿತನವನ್ನು ಪರಿಚಯಿಸಿದ ಕನ್ನಡಿಗರ ನೆಚ್ಚಿನ ನಂಬರ್ 1 ಮನರಂಜನಾ ವಾಹಿನಿ  ಜೀ ಕನ್ನಡದಲ್ಲಿ ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.


COMMERCIAL BREAK
SCROLL TO CONTINUE READING

ಸ್ಯಾಂಡಲ್ ವುಡ್ ಜೊತೆಗೆ ಅತ್ಯುತ್ತಮ ನಂಟು ಹೊಂದಿರುವ ಜೀ ಕನ್ನಡ ವಾಹಿನಿ ತಮ್ಮ ವಿವಿಧ ಕಾರ್ಯಕ್ರಮಗಳ ಮೂಲಕ ಉದ್ಯಮಕ್ಕೆ ಶ್ರೇಷ್ಟ ಕಲಾವಿದರನ್ನು ಕೊಡುಗೆಯಾಗಿ ನೀಡಿರುವ ಹೆಗ್ಗಳಿಕೆ ಹೊಂದಿದೆ.ಕೆಜಿಎಫ್ 2 ಚಿತ್ರದಲ್ಲೂ ಹಲವಾರು ಜೀ ಕುಟುಂಬದ ಕಲಾವಿದರು ನಟಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.


ಇದನ್ನೂ ಓದಿ : Yuzvendra Chahal-Dhanashree : ಧನಶ್ರೀ, ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಕು..!


ಗೆಲುವಿನ ಸರದಾರ ರಾಕಿಂಗ್ ಸ್ಟಾರ್ ಯಶ್ , ಶ್ರೀನಿಧಿ ಶೆಟ್ಟಿ , ಸಂಜಯ್ ದತ್ ,ರವೀನಾ ಟಂಡನ್ , ಮಾಳವಿಕಾ ,ವಸಿಷ್ಠ ಸಿಂಹ ,ಪ್ರಕಾಶ್ ರಾಜ್  ಹೀಗೆ ದೇಶ ಕಂಡ ಅದ್ಭುತ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು ಪ್ರಶಾಂತ್ ನೀಲ್ ಅವರ ಅತ್ಯದ್ಭುತ ನಿರ್ದೇಶನವಿದೆ. ಚಂದನವನದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್  ಇದಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಭುವನ್ ಗೌಡ ಛಾಯಾಗ್ರಹಣದ ಜವಾಬ್ಧಾರಿ ಹೊತ್ತಿದ್ದರೇ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.


ಚಾಪ್ಟರ್ 1 ನಿಂದಲೇ ಕನ್ನಡ ಚಿತ್ರರಂಗದ ದಿಕ್ಕು ಬದಲಿಸುವ ಸೂಚನೆ ನೀಡಿದ್ದ ಕೆಜಿಎಫ್ ಇದೀಗ ಚಾಪ್ಟರ್ 2 ನಿಂದ ಅದನ್ನು ನಿಜವಾಗಿಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಯಶಸ್ಸಿನ ಸವಾರಿ ಮಾಡಲು ಶುರುಮಾಡಿ 1000 ಕೋಟಿಗೂ ಹೆಚ್ಚು ಆದಾಯ ಗಳಿಸಿ ದಾಖಲೆ ಸೃಷ್ಟಿಸಿದ್ದಷ್ಟೇ ಅಲ್ಲದೇ ಶತದಿನೋತ್ಸವವನ್ನು ಆಚರಿಸಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ.


ಇದನ್ನೂ ಓದಿ : IND vs ZIM ಪಂದ್ಯದ Playing 11 ನಿಂದ ಶಾರ್ದುಲ್ ಠಾಕೂರ್ ಔಟ್!


ಹಬ್ಬಗಳ ಮಾಸ ಶ್ರಾವಣದಲ್ಲಿ ಕಿರು ಪರದೆಯ ಮೇಲೆ ಕೆಜಿಎಫ್ 2 ಅಬ್ಬರ ಆರಂಭವಾಗುತ್ತಿದ್ದು ಈಗಾಗಲೇ ಬಿಡುಗಡೆಯಾಗಿರುವ ವಿಶಿಷ್ಟ ಶೈಲಿಯ ಪ್ರೋಮೋಗಳು ವೀಕ್ಷಕರು ಈ ಸಿನಿಮಾ ಹಬ್ಬವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ. ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಕೆಜಿಎಫ್ ಚಾಪ್ಟರ್ 2 ಅನ್ನು ಮನೆಮಂದಿಯೆಲ್ಲಾ ಕೂತು ನೋಡಿ ಈ ಸಿನಿಮೋತ್ಸವವನ್ನು ಆಚರಿಸಿ , ಆನಂದಿಸಿ. ಜೀ ಕನ್ನಡದ ಇತರೆ ಕಾರ್ಯಕ್ರಮಗಳಿಗೆ ನೀಡುವ ಪ್ರೋತ್ಸಾಹವನ್ನು ಮುಂದುವರೆಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.