'ಕೆಜಿಎಫ್-2' ಅನ್ನೋ ಹೆಸರಲ್ಲೇ ಸಂಚಲನ ಇದೆ. 'ಕೆಜಿಎಫ್-2' ಹೆಸರಲ್ಲೇ ಹೈವೋಲ್ಟೇಜ್‌ ಕರೆಂಟ್‌ ಇದೆ. 'ಕೆಜಿಎಫ್-2' ಅಂದ್ರೆನೆ ಹಾಗೆ, ಕನ್ನಡ ಸಿನಿ ರಂಗವನ್ನು ಇಡೀ ಜಗತ್ತೇ ಒಮ್ಮೆ ತಿರುಗಿ ನೋಡುವಂತೆ ಮಾಡಿರುವ ಈ ಸಿನಿಮಾ ಜಾಗತಿಕ ಸಿನಿಮಾ ಮಾರುಕಟ್ಟೆಯನ್ನೇ ನಡುಗಿಸಿದೆ. 'ಕೆಜಿಎಫ್-2' ಸೆನ್ಸಾರ್‌ ಪ್ರದರ್ಶನದಲ್ಲಿ ಸಿನಿಮಾ ಕಣ್ತುಂಬಿಕೊಂಡಿರುವ  ಓವರ್‌ಸೀಸ್ ಸೆನ್ಸಾರ್‌ ಮಂಡಳಿ ಮೆಂಬರ್ ಒಬ್ಬರು, 'ಕೆಜಿಎಫ್-2'ಗೆ ನೀಡಿರುವ ರಿಯಾಕ್ಷನ್‌ ಅಭಿಮಾನಿಗಳನ್ನು ಮತ್ತಷ್ಟು ರೋಮಾಂಚನಗೊಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Yash : ಯಶ್‌ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ ಕೊಟ್ಟ ತಾಯಿ ಪುಷ್ಪ


'ಕೆಜಿಎಫ್-2' ಬರೀ ನಿರೀಕ್ಷಿತ ಸಿನಿಮಾ ಅಲ್ಲ, ಅದು ಬಹು ನಿರೀಕ್ಷಿತ ಸಿನಿಮಾ. ಸುಮಾರು 4 ವರ್ಷದಿಂದ ಅಭಿಮಾನಿಗಳು ಉಸಿರು ಬಿಗಿ ಹಿಡಿದು 'ಕೆಜಿಎಫ್-2' ನೋಡಲು ಕಾದು ಕುಳಿತಿದ್ದರು. ಯಾವಾಗ 'ಕೆಜಿಎಫ್-2' ರಿಲೀಸ್‌ ಆಗುತ್ತೆ, ರಾಕಿ ಭಾಯ್‌ ಕಥೆ ಏನಾಗುತ್ತೆ ಅಂತಾ ಕಾಯುತ್ತಿದ್ದರು. ಈ ಎಲ್ಲಾ ಪ್ರಶ್ನೆಗಳಿಗೆ ಏಪ್ರಿಲ್‌ 14ರಂದು ಉತ್ತರ ಸಿಗಲಿದೆ. ಅದಕ್ಕೂ ಮೊದಲು ಸೆನ್ಸಾರ್‌ ಯುದ್ಧ ಗೆದ್ದಿರುವ 'ಕೆಜಿಎಫ್-2' ಯಾರೂ ಊಹಿಸದಿರುವ ರಿವ್ಯೂವ್‌ ಹಾಗೂ ರೇಟಿಂಗ್ ಪಡೆದಿದೆ.‌ ಈ ಮೂಲಕ ಕನ್ನಡ ಸಿನಿಮಾ 'ಕೆಜಿಎಫ್-2' ಮತ್ತೊಂದು ಇತಿಹಾಸ ಬರೆದಿದೆ.ಉಮೈರ್ ಸಾಂಧು. 'ಕೆಜಿಎಫ್-2' ವೀಕ್ಷಿಸಿ ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ  ಉಮೈರ್ ಸಾಂಧು, 'ಕೆಜಿಎಫ್-2' ಸಿನಿಮಾಗೆ 5ಕ್ಕೆ 5 ರೇಟಿಂಗ್‌ ನೀಡಿದ್ದಾರೆ. ಅಲ್ಲದೆ ಈ ಸಿನಿಮಾ ಭಾರತ ಚಿತ್ರರಂಗದ ಕಿರೀಟ ಎಂದು ಬರೆದುಕೊಂಡಿದ್ದಾರೆ. ಇದು ಜಗತ್ತಿನಾದ್ಯಂತ ಸಂಚಲ ಸೃಷ್ಟಿಸುವ ಜೊತೆಗೆ, 'ಕೆಜಿಎಫ್-2' ಕೇಜ್‌ ಮತ್ತಷ್ಟು ಹೆಚ್ಚಾಗಿದೆ. ಯಾವಾಗ ಸಿನಿಮಾ ಕಣ್ತುಂಬಿಕೊಳ್ಳುತ್ತೀವಿ ಅಂತಾ 'ಕೆಜಿಎಫ್-2' ಅಭಿಮಾನಿ ಬಳಗ ಕಾಯುತ್ತಿದೆ.


ಇದನ್ನೂ ಓದಿ: ಕಾಂಗ್ರೆಸ್ ವಿರೋಧಿ ಬಿಜೆಪಿ ಅಲ್ಲ, ಆರ್ ಎಸ್ ಎಸ್..! -ಬಿ.ಕೆ. ಹರಿಪ್ರಸಾದ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.