ಬೆಂಗಳೂರು: ಕನ್ನಡ ಸಿನಿಮಾ 'ಕೆಜಿಎಫ್-2' ಯಾವ ಮಟ್ಟಿಗೆ ಹವಾ ಎಬ್ಬಿಸಿದೆ ಎಂದರೆ, ಎಲ್ಲೆಲ್ಲೂ 'ಕೆಜಿಎಫ್-2' ಜಪ ಶುರುವಾಗಿದೆ.ಯಾರ ಬಾಯಲ್ಲಿ ಕೇಳಿದರೂ 'ಕೆಜಿಎಫ್-2'.. 'ಕೆಜಿಎಫ್-2'..ಅಂತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: ಬಾಂಡ್ ರವಿ' ಸಾಥ್ ಕೊಟ್ಟ ಪೊಗರು ಪೋರ-ಯಂಗ್ ಟೈಗರ್... ಪ್ರಮೋದ್ ಬೆನ್ನು ತಟ್ಟಿದ ಧ್ರುವ-ವಿನೋದ್


ಅದರಲ್ಲೂ ಉತ್ತರ ಭಾರತದ ಪ್ರೇಕ್ಷಕರು 'ಕೆಜಿಎಫ್-2' ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಹೊತ್ತಲ್ಲೇ 'ಕೆಜಿಎಫ್-2' ಪ್ರಚಾರ ಕಾರ್ಯ ಕೂಡ ಭರ್ಜರಿಯಾಗಿ ಸಾಗಿದೆ. ಅದು ನೆಲದ ಮೇಲೆ ಮಾತ್ರವಲ್ಲ, ನೀರಿನ ಮೇಲೂ ಅಂದರೆ ಸಮುದ್ರದ ಮೇಲೂ 'ಕೆಜಿಎಫ್-2' ಹವಾ ಬಲು ಜೋರಾಗಿದೆ.


ಅಂದಹಾಗೆ ವಾಣಿಜ್ಯ ನಗರಿ ಮುಂಬೈನಲ್ಲಿ ದೊಡ್ಡ ಮಟ್ಟದಲ್ಲಿ 'ಕೆಜಿಎಫ್-2' ರಿಲೀಸ್‌ ಆಗಲಿದೆ.ಬಾಲಿವುಡ್‌ ತವರು ಅಂತಾನೆ ಬಿರುದು ಪಡೆದಿರುವ ಕಡಲ ನಗರಿ ಮುಂಬೈನಲ್ಲಿ ಕನ್ನಡ ಸಿನಿಮಾ 'ಕೆಜಿಎಫ್-2' ಹವಾ ಬಲು ಜೋರು. ಈ ಬೆನ್ನಲ್ಲೇ ಮುಂಬೈ ಸಮುದ್ರದಲ್ಲಿ ಬೋಟ್‌ ಮೇಲೆ 'ಕೆಜಿಎಫ್-2' ಪೋಸ್ಟರ್‌ನ ಹಾಕಿ ಪ್ರಚಾರ ಮಾಡಲಾಗುತ್ತಿದೆ. ಈ ಮೂಲಕ ಮತ್ತೊಂದು ಸಾಧನೆಯನ್ನು ಮಾಡಿದೆ ಕನ್ನಡದ ಸಿನಿಮಾ 'ಕೆಜಿಎಫ್-2'.


ಇದನ್ನೂ ಓದಿ: Career: ಅಮೃತ್ ಮುನ್ನಡೆ ಯೋಜನೆಯಡಿ ಉಚಿತ ಕೋರ್ಸ್ : ಅರ್ಜಿ ಆಹ್ವಾನ


ಮಾಲ್‌ಗಳಲ್ಲಿ ಮಿಂಚಿಂಗ್‌:
ದೇಶದ ಮೂಲೆ ಮೂಲೆಯಲ್ಲೂ 'ಕೆಜಿಎಫ್-2' ಪೋಸ್ಟರ್ಸ್‌ ರಾರಾಜಿಸುತ್ತಾ, ಅಭಿಮಾನಿಗಳ ಕಣ್ಣು ತಂಪಾಗಿಸುತ್ತಿವೆ. ಅದರಲ್ಲೂ ದೇಶದ ಪ್ರತಿ ಮೂಲೆ ಮೂಲೆಯಲ್ಲೂ ಇರುವ ಮಾಲ್‌ಗಳಲ್ಲಿ 'ಕೆಜಿಎಫ್-2' ಪೋಸ್ಟರ್ಸ್‌ ಹಬ್ಬದ ವಾತಾವರಣ ಕ್ರಿಯೇಟ್‌ ಮಾಡಿವೆ. ಇದರ ಜೊತೆಗೆ ಸಮುದ್ರದ ಮೇಲೆ ಕೂಡ 'ಕೆಜಿಎಫ್-2' ಪೋಸ್ಟರ್‌ ಕ್ಯಾಂಪೇನ್‌ ಬಲು ಜೋರಾಗಿದೆ.


ಈಗಾಗಲೇ ಥಿಯೇಟರ್‌ಗಳ ವಿಚಾರದಲ್ಲಿ ರೆಕಾರ್ಡ್‌ ಮಾಡಿದ್ದು ಆಯ್ತು, ಟಿಕೆಟ್ ಪ್ರೀ ಬುಕಿಂಗ್‌ ವಿಚಾರದಲ್ಲೂ ದೊಡ್ಡ ಹವಾ ಎಬ್ಬಿಸಿದ್ದೂ ಆಯ್ತು. ಇನ್ನೇನು ಸಿನಿಮಾ ರಿಲೀಸ್‌ ಆಗೋದು ಮಾತ್ರ ಬಾಕಿ ಉಳಿದಿದೆ. ಏಪ್ರಿಲ್‌ 14ಕ್ಕೆ 'ಕೆಜಿಎಫ್-2' ಕ್ರೇಜ್‌ ಮುಗಿಲು ಮುಟ್ಟಲಿದ್ದು, ಪ್ರತಿಯೊಬ್ಬ ಅಭಿಮಾನಿಯೂ ಏಪ್ರಿಲ್‌ 14ಕ್ಕಾಗಿ ಕಾದು ಕುಳಿತಿದ್ದಾನೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.