Prashanth Neel : 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ 'ಸಾಲಾರ್' ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದೆ. ಸತತ ಸೋಲು ಅನುಭವಿಸುತ್ತಿರುವ ಡಾರ್ಲಿಂಗ್‌ ಪ್ರಭಾಸ್‌ಗೆ ಈ ಸಿನಿಮಾ ಬಹಳ ನಿರ್ಣಾಯಕವಾಗಿದೆ. ಹೀಗಿರುವಾಗ ಪ್ರಶಾಂತ್‌ ನೀಲ್‌ ದೇವಸ್ಥಾನದಲ್ಲಿ ಸಲಾರ್‌ ಯಶಸ್ಸಿಗೆ ದೇವರ ಮೊರೆ ಹೋಗಿರುವ ವಿಡಿಯೋ ಒಂದು ವೈರಲ್‌ ಆಗಿದ್ದು, ಅಭಿಮಾನಿಗಳಿಗೆ ಖುಷಿ ತಂದಿದೆ.


COMMERCIAL BREAK
SCROLL TO CONTINUE READING

ಹೌದು... ‘ಕೆಜಿಎಫ್’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್ ಸದ್ಯ ಪ್ಯಾನ್ ಇಂಡಿಯಾ ಹೀರೋ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಜೊತೆ ‘ಸಲಾರ್’ ಎಂಬ ಅದ್ಧೂರಿ ಆ್ಯಕ್ಷನ್ ಎಂಟರ್ ಟೈನರ್ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಸಿನಿಮಾದ ಮೇಲೆ ಈಗಾಗಲೇ ಒಂದು ರೇಂಜ್‌ ನಿರೀಕ್ಷೆಗಳಿವೆ. ಚಿತ್ರ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಮೊದಲೇ ಘೋಷಿಸಿದ್ದರು.


ಇದನ್ನೂ ಓದಿ: ಹಿಂದಿಯಲ್ಲಿ ದಾಖಲೆ ಬರೆದ ನಿಖಿಲ್ : 100 ಮಿಲಿಯನ್ ವೀಕ್ಷಣೆ ಕಂಡ 'ರೈಡರ್'


ಆದರೆ ಗ್ರಾಫಿಕ್ಸ್ ಕೆಲಸ ವಿಳಂಬವಾದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಸಲಾರ್ ಬಿಡುಗಡೆಯನ್ನು ಮುಂದೂಡುವ ಬಗ್ಗೆ ಚಿತ್ರತಂಡ ಎರಡು ಅಥವಾ ಮೂರು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. ಹೊಸ ಬಿಡುಗಡೆ ದಿನಾಂಕವನ್ನೂ ಪ್ರಕಟಿಸುವ ಸಾಧ್ಯತೆಯೂ ಇದೆ. 


ಬೆಡ್‌ರೂಮ್‌ನಲ್ಲಿ ಸೋನು ಗೌಡ ಹಾಟ್‌ ಹಾಟ್‌ ಪೋಸ್‌.. ಫೋಟೋಸ್‌ ವೈರಲ್‌


ಪ್ರಶಾಂತ್ ನೀಲ್ 'ಸಲಾರ್' ಚಿತ್ರವನ್ನು ತಮ್ಮ ಕುಟುಂಬದ ಸದಸ್ಯ ಎಂದು ಪರಿಗಣಿಸಿ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿದ್ದಕ್ಕೆ ಡಾರ್ಲಿಂಗ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರಿಂದಾಗಿ ಡಾರ್ಲಿಂಗ್‌ ಫ್ಯಾನ್ಸ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರದ ಟೀಸರ್‌ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೆ, ಅತಿ ಕಡಿಮೆ ಸಮಯದಲ್ಲಿ ಯೂಟ್ಯೂಬ್‌ನಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ಹೊಸ ದಾಖಲೆ ಸೃಷ್ಟಿಸಿತು.


ಇದರೊಂದಿಗೆ 'ಸಾಲಾರ್' ಮೇಲಿನ ನಿರೀಕ್ಷೆಗಳು ಹೆಚ್ಚಾದವು. ಡಾರ್ಲಿಂಗ್ ಅಭಿಮಾನಿಗಳು ಚಿತ್ರದ ರಿಲೀಸ್‌ ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಂಗದೂರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೂ. 250 ಕೋಟಿಗಳ ಬೃಹತ್ ಬಜೆಟ್‌ನಲ್ಲಿ ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ. ಸಲಾರ್‌ ಭಾಗ-1 ಸೀಜ್ ಫೈರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.