ಬೆಂಗಳೂರು: ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಸದ್ದು ಮಾಡಿದೆ. ಹೌದು, ಬಾಕ್ಸ್ ಆಫೀಸ್ ನಲ್ಲಿ ಶಾರೂಖ್ ಖಾನ್ ಅಭಿನಯದ 'Zero' ಸಿನಿಮಾವನ್ನು 'ಕೆಜಿಎಫ್' ಹಿಂದಿಕ್ಕಿದೆ. ಮೊದಲ ದಿನ 20 ಮಿಲಿಯನ್ ಗಳಿಸಿದ ಝೀರೋ, ಎರಡನೇ ದಿನದಂದು ಕುಸಿತಕಂಡಿದೆ.


COMMERCIAL BREAK
SCROLL TO CONTINUE READING

ಕನ್ನಡದ ಚಿತ್ರವೊಂದು ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ಇದೇ ಮೊದಲು. ಹಿಂದಿ ಅವತರಣಿಕೆಯ ಕೆಜಿಎಫ್ ಚಿತ್ರ ಸುಮಾರು 1500 ಸ್ಕ್ರೀನ್ ಗಳಲ್ಲಿ ತೆರೆ ಕಂಡಿದ್ದು ಕಲೆಕ್ಷನ್ ನಲ್ಲೂ ದಾಖಲೆ ಬರೆದಿದೆ. 


ಶಾರೂಖ್ ಖಾನ್ ಅಭಿನಯದ 'Zero' ಚಿತ್ರ ದೇಶ-ವಿದೇಶಗಳಲ್ಲಿ ಒಟ್ಟು 5965 ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡಲಾಗಿದೆ. ವರದಿ ಪ್ರಕಾರ, ಈ ಚಿತ್ರ ಆಸ್ಟ್ರೇಲಿಯಾದಲ್ಲಿ 36 ಮತ್ತು ನ್ಯೂಜಿಲೆಂಡ್ ನಲ್ಲಿ 26 ಪರದೆ ಮೇಲೆ ತೆರೆಕಂಡಿತು. ಈ ಚಿತ್ರ ಆಸ್ಟ್ರೇಲಿಯಾದಲ್ಲಿ 25.91 ಕೋಟಿ ರೂ. ಮತ್ತು ನ್ಯೂಜಿಲೆಂಡ್ನಲ್ಲಿ 20.13 ಕೋಟಿ ರೂ. ಗಳಿಸಿದೆ. ಅದೇ ಸಮಯದಲ್ಲಿ, ಭಾರತದಲ್ಲಿ ಎರಡು ದಿನಗಳಲ್ಲಿ ಈ ಚಲನಚಿತ್ರವು 38.36 ಕೋಟಿ ರೂಪಾಯಿಗಳನ್ನು ಗಳಿಸಿದೆ.



ಐದೂ ಭಾಷೆಗಳಲ್ಲಿ ಗೆಲುವಿನ ನಗೆ ಬೀರಿರುವ ‘ಕೆಜಿಎಫ್​’ ಚಿತ್ರ ಬಾಲಿವುಡ್‌ನಲ್ಲೂ ಧೂಳೆಬ್ಬಿಸಿದೆ. ಭರ್ಜರಿ ಓಪನಿಂಗ್​ ಪಡೆದುಕೊಂಡಿದ್ದ ಈ ಸಿನಿಮಾ ಮೊದಲ ದಿನವೇ 25 ಕೋಟಿ ರೂ. ಗಳಿಕೆ ಮಾಡಿತ್ತು. ಎರಡನೇ ದಿನವೂ ತನ್ನ ಅಬ್ಬರ ಮುಂದುವರೆಸಿದ್ದ ಚಿತ್ರ ನಿರಾಯಾಸವಾಗಿ 50 ಕೋಟಿ ರೂ. ಕಮಾಯಿ​ ಮಾಡಿದೆ.