ಬೆಂಗಳೂರು : ಹೌದು, ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವ ಕೆಜಿಎಫ್ ಟ್ರೈಲರ್ ಮೊದಲದಿನವೇ ಯುಟ್ಯೂಬ್ ನಲ್ಲಿ ತನ್ನ ಖದರ್ ತೋರಿಸಿದೆ. 


COMMERCIAL BREAK
SCROLL TO CONTINUE READING

ಬಿಡುಗಡೆಯಾದ ತನ್ನ 18 ಗಂಟೆಗಳಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಜನರು ಈ ಟ್ರೈಲರ್ ವೀಕ್ಷಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರ ಕನ್ನಡ ಚಿತ್ರದ ಮಟ್ಟಿಗೆ ಅದ್ಧೂರಿ ವೆಚ್ಚದ ಆಕ್ಷನ್ ಚಿತ್ರ ಎಂದು ಹೇಳಬಹುದು. ಹೊಂಬಾಳೆ ಫಿಲಂಸ್ ರವರ ಬ್ಯಾನರ್ ಅಡಿಯಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ.ಪ್ರಶಾಂತ್ ನೀಲ್ ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿ ಬಸರೂರ್ ಸಂಗೀತ ನೀಡಿದ್ದಾರೆ. ಸುಮಾರು 95 ಕೋಟಿ ರೂಪಾಯಿಗಳ ಅದ್ಧೂರಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರ ನಿಜಕ್ಕೂ ಟ್ರೈಲರ್ ನ ದೃಶ್ಯಗಳು ಹಾಗೂ ಯಶ್ ನ ಹೊಸ ಅವತಾರ ಪ್ರೇಕ್ಷಕರನ್ನು ಮೈನವಿರೇಳಿಸುತ್ತದೆ.


ಈ ಚಿತ್ರದ ಕಥೆಯು 70 ಮತ್ತು 80 ರ ದಶಕದ ಕಥಾಹಂದರವನ್ನು ಒಳಗೊಂಡಿದೆ. ಈ ಚಿತ್ರದ ತಾರಾಗಣದಲ್ಲಿ ಯಶ್,ಶ್ರೀನಿಧಿ ಶೆಟ್ಟಿ ,ಅಚ್ಯುತಕುಮಾರ್,ನಾಸರ್,ರಮ್ಯಕೃಷ್ಣ  ಇನ್ನು ಮುಂತಾದ ತಾರಾ ಬಳಗವಿದೆ,