Kiara Advani Pregnant: ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 7 ರಂದು ಜೈಸಲ್ಮೇರ್‌ನಲ್ಲಿ ವಿವಾಹವಾದರು. ಮದುವೆಯ ನಂತರ ಕಿಯಾರಾ ಅಡ್ವಾಣಿ ಫೋಟೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಚರ್ಚೆಗಳು ನಡೆಯುತ್ತಿವೆ. ಕಿಯಾರಾ ಮದುವೆಯ ನಂತರ ಮೊದಲ ಬಾರಿಗೆ ಜೈಸಲ್ಮೇರ್ ವಿಮಾನ ನಿಲ್ದಾಣಕ್ಕೆ ಬಂದಾಗ, ಅವರು ಕಪ್ಪು ಪ್ಯಾಂಟ್ ಮತ್ತು ಬೂದು ಶಾಲು ಧರಿಸಿದ್ದರು. ನಟಿ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎಂದು ಜನರು ನಟಿಯ ಲುಕ್ ಬಗ್ಗೆ ಊಹೆ ಮಾಡಲು ಪ್ರಾರಂಭಿಸಿದರು. ಈಗ ಕಿಯಾರಾ ಮುಂಬೈ ವಿಮಾನ ನಿಲ್ದಾಣದ ಲುಕ್‌ ಬಗ್ಗೆಯೂ ಮಾತುಕತೆ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Kailash Kher : ಈ ಖ್ಯಾತ ಗಾಯಕ 20 ನೇ ವಯಸ್ಸಿನಲ್ಲಿ ಸಾಯಬೇಕೆಂದು ಗಂಗಾ ನದಿಗೆ ಹಾರಿದ್ದರು!


ಕಿಯಾರಾ ಅಡ್ವಾಣಿ ಮದುವೆಯ ಫೋಟೋಗಳು, ಜೈಸಲ್ಮೇರ್ ವಿಮಾನ ನಿಲ್ದಾಣದ ಬಳಿಕ ಮುಂಬೈ ವಿಮಾನ ನಿಲ್ದಾಣದ ನೋಟವೂ ಟ್ರೋಲ್ ಆಗಲು ಪ್ರಾರಂಭಿಸಿದೆ. ಕಿಯಾರಾ ಈ ರೀತಿಯ ಸುಂದರವಾದ ಹಳದಿ ಸೂಟ್ ಅನ್ನು ಧರಿಸಿದ್ದರು, ಆದರೆ ಅವರು ಪದೇ ಪದೇ ತನ್ನ ಹೊಟ್ಟೆಯನ್ನು ಸ್ಕಾರ್ಫ್‌ನಿಂದ ಮುಚ್ಚಿಕೊಳ್ಳುವುದು ಕಂಡುಬಂದಿದೆ. ಇದರಿಂದ ಅವರು ಗರ್ಭಿಣಿ ಎಂದು ಅನೇಕರು ಮತ್ತೆ ಮಾತನಾಡುತ್ತಿದ್ದಾರೆ. ಆದರೆ ಅಸಲಿಗೆ ಕಿಯಾರಾ ಗರ್ಭಿಣಿ ಎಂಬುದು ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ಈ ರೀತಿ ಸೂಟು ಮತ್ತು ದುಪ್ಪಟ್ಟಾ ಧರಿಸುವುದು ಅವರ ಸ್ಟೈಲ್‌ ಆಗಿದೆ ಅಷ್ಟೆ. 


 



 


ಇದನ್ನೂ ಓದಿ : Rishab Shetty: "ನನಗೆ ಈಗಾಗಲೇ 3 ಪಕ್ಷಗಳಿಂದಲೂ.." ರಾಜಕೀಯ ಎಂಟ್ರಿ ಬಗ್ಗೆ ರಿಷಬ್ ಶೆಟ್ಟಿ ಸ್ಪಷ್ಟನೆ


ಮುಂಬೈನಲ್ಲಿ ಸಿದ್ಧಾರ್ಥ್-ಕಿಯಾರಾ ಆರತಕ್ಷತೆ!


ವರದಿಗಳ ಪ್ರಕಾರ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ವೆಡ್ಡಿಂಗ್ ಆರತಕ್ಷತೆ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಶಾರುಖ್ ಖಾನ್, ಅಜಯ್ ದೇವಗನ್, ಕಾಜೋಲ್ ಸೇರಿದಂತೆ ಎಲ್ಲಾ ಬಾಲಿವುಡ್ ತಾರೆಯರು ಸಿದ್ಧಾರ್ಥ್ ಕಿಯಾರಾ ಅವರ ಮದುವೆಯ ಆರತಕ್ಷತೆಗೆ ಬರಲಿದ್ದಾರೆ. ಅಲ್ಲದೆ, ಸಿದ್ಧಾರ್ಥ್ ಕಿಯಾರಾ ಅವರ ಮದುವೆಯ ಆರತಕ್ಷತೆಯಲ್ಲಿ ಇಡೀ ಅಂಬಾನಿ ಕುಟುಂಬ ಕೂಡ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.