‘ಬಿಗ್ ಬಾಸ್’ ಅನುಪಮಾ ಪರ ಇದೆ; ಫಿಕ್ಸಿಂಗ್ ಆರೋಪ ಮಾಡಿದ ಆರ್ಯವರ್ಧನ್ ಗೆ ‘ಕಿಚ್ಚ’ನ ಕ್ಲಾಸ್!
ಆರ್ಯವರ್ಧನ್ ಗುರೂಜಿಯ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸುದೀಪ್ ವೇದಿಕೆಯ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದ್ದು, ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬೆಂಗಳೂರು: 9ನೇ ಆವೃತ್ತಿಯ ‘ಬಿಗ್ ಬಾಸ್’ ಮನೆಯಲ್ಲಿ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. 'ಸೂಪರ್ ಸಂಡೇ ವಿತ್ ಸುದೀಪ್' ಭಾನುವಾರದ ಸಂಚಿಕೆಯ ಪ್ರೋಮೋದಲ್ಲಿ ಆರ್ಯವರ್ಧನ್ ಗುರೂಜಿ ಗಂಭೀರ ಆರೋಪ ಮಾಡಿದ್ದಾರೆ. ಅನುಪಮಾ ಗೌಡ ಪರ ‘ಬಿಗ್ ಬಾಸ್’ ಇದೆ ಅಂತಾ ಹೇಳುವ ಮೂಲಕ ಆರ್ಯವರ್ಧನ್ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ.
ಆರ್ಯವರ್ಧನ್ ಗುರೂಜಿಯ ಈ ಮ್ಯಾಚ್ ಫಿಕ್ಸಿಂಗ್ ಆರೋಪ ಸುದೀಪ್‍ರನ್ನು ಕೆರಳಿ ಕೆಂಡವಾಗಿಸಿದೆ. ವೇದಿಕೆಯ ಮೇಲೆಯೇ ಆಕ್ರೋಶ ಹೊರಹಾಕಿರುವ ‘ಕಿಚ್ಚ’ ಆರ್ಯವರ್ಧನ್‍ಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುಖಾಸುಮ್ಮನೇ ಆರೋಪ ಮಾಡುವ ಮೊದಲು ಸರಿಯಾಗಿ ತಿಳಿದು ಮಾತನಾಡುವಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಆರ್ಯವರ್ಧನ್ ಗುರೂಜಿ ಆರೋಪವೇನು?
ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಎಂದಿನಂತೆ ಸ್ಪರ್ಧಿಗಳ ಜೊತೆಗೆ ಮಾತನಾಡಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿರುವ 16 ಮಂದಿಯ ಪೈಕಿ ಟಾಪ್ 2 ಯಾರು ಆಗ್ತಾರೆ ಎಂದು ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಎಲ್ಲಾ ಸ್ಪರ್ಧಿಗಳು ಒಬ್ಬೊಬ್ಬರ ಹೆಸರನ್ನು ಹೇಳುತ್ತಿದ್ದರು. ಈ ವೇಳೆ ಆರ್ಯವರ್ಧನ್ ಗುರೂಜಿ, ಅನುಪಮಾ ಹೆಸರು ಹೇಳಿ ‘ಬಿಗ್ ಬಾಸ್’ಗೂ ಅನುಪಮಾ ಅವರು ಒಳಗಡೆ ಬರಬೇಕೆಂಬ ಆಸೆ ಇತ್ತು’ ಅಂತಾ ಹೇಳಿದ್ದಾರೆ.
ನೋರಾ ಹಾಟ್ ಡಾನ್ಸ್ ನೋಡಿ ʼವಿ ವಾಂಟ್ ಮೋರ್ʼ ಎಂದ ಫ್ಯಾನ್ಸ್..!
ಆರ್ಯವರ್ಧನ್ ಮಾತಿಗೆ ಕೆರಳಿದ ಸುದೀಪ್, ‘ಹಾಗೆಲ್ಲ ಮಾತನಾಡಬೇಡಿ ಸರ್’ ಅಂತಾ ಹೇಳಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಆರ್ಯವರ್ಧನ್, ‘ಬಂಗಾರದ ಟಾಸ್ಕ್‍ನಲ್ಲಿ ಎಷ್ಟು ಬಂಗಾರ ಇದೆ ಅಂತಾ ಗೊತ್ತಿದ್ದರೂ ಅನುಪಮಾರನ್ನು ಒಳಗಡೆ ಕರೆಸುತ್ತಾರೆ ಅಂದರೆ ಏನು ಅರ್ಥ?. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ’ ಅಂತಾ ಗಂಭೀರ ಅರೋಪ ಮಾಡಿದರು. ಇದಕ್ಕೆ ಸಿಟ್ಟಿನಲ್ಲಿಯೇ ಪ್ರತಿಕ್ರಿಯಿಸುವ ಸುದೀಪ್, ಸ್ಪರ್ಧಿಗಳಲ್ಲಿ ನಿಮಗೆ ಹಾಗೆ ಅನಿಸಿತಾ ಅಂತಾ ಕೇಳಿದ್ದಾರೆ. ಈ ವೇಳೆ ಸ್ಪರ್ಧಿಗಳೆಲ್ಲಾ ಇಲ್ಲ ಅಂತಾ ಹೇಳಿದ್ದಾರೆ.
ಅರ್ಯವರ್ಧನ್ ಮಾತಿಗೆ ಕೋಪಗೊಂಡ ಸುದೀಪ್, ನಿಮ್ಮ ಮಾತಿನ ಮೇಲೆ ನಿಗಾ ಇರಲಿ ಅಂತಾ ಎಚ್ಚರಿಕೆ ನೀಡಿದರು. ಆದರೆ ಆರ್ಯವರ್ಧನ್ ಮತ್ತೆ ಪ್ರತಿಕ್ರಯಿಸಿ, ‘ಯೋಚನೆ ಮಾಡಿ ಹೇಳಬೇಕಲ್ಲ ಸರ್, ಹಾಗಾಗಿ ಹೇಳುತ್ತಿದ್ದೀನಿ’ ಅಂತಾ ತಮ್ಮ ಆರೋಪವನ್ನು ಸಮರ್ಥಿಸಿಕೊಂಡರು. ಇದಕ್ಕೆ ಮತ್ತಷ್ಟು ಕೋಪಗೊಂಡ ಸುದೀಪ್, ‘ಮ್ಯಾಚ್ ಫಿಕ್ಸಿಂಗ್ ಅಂದರೆ ಏನು? ಅಲ್ಲಿ ಕುಳಿತು ಆಡುತ್ತಿರುವವರೆಲ್ಲ ಏನು ಹಾಗಾದ್ರೆ, ಇಲ್ಲಿರುವ ಯಾರಿಗೂ ಯೋಗ್ಯತೆ ಇಲ್ವಾ? ಮೋಸ ಮಾಡಿ ಗೆಲ್ತಾ ಇದ್ದಾರಾ? ಅಂತಾ ಏರು ಧ್ವನಿಯಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಾನು ಜನರಲ್ಲಾಗಿ ಹೇಳಿದ್ದು ಸರ್’ ಅಂತಾ ಆರ್ಯವರ್ಧನ್ ಮತ್ತೆ ಮಧ್ಯೆ ಮಾತಾಡಿದರು. ‘ನಿಮ್ಮ ವ್ಯಕ್ತಿತ್ವದ ಮೇಲೆ ಮಾತನಾಡಿದರೆ ಇಷ್ಟು ಉದ್ದ ಮಾತನಾಡುತ್ತೀರಾ? ಈ ವೇದಿಕೆಯ ಮರ್ಯಾದೆ ತೆಗೆದರೆ ಸತ್ಯವಾಗಿ ಹೇಳ್ತೀನಿ, ನನಗೆ ನಿಮಗೆ ಇಲ್ಲೆ ಕೊನೆಯಾಗುತ್ತೆ’ ಅಂತಾ ಸುದೀಪ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಇದನ್ನೂ ಓದಿ: Nayanthara - Vignesh : ಮತ್ತೆ ಮೆಗಾ ಟ್ವಿಸ್ಟ್ ನೀಡಿದ ನಟಿ ನಯನತಾರಾ-ವಿಗ್ನೇಶ್ ದಂಪತಿ!
ಭಾನುವಾರದ SUPER SUNDAY WITH ಸುದೀಪ್ ಕಾರ್ಯಕ್ರಮದ 30 ಸೆಕೆಂಡುಗಳ ಪ್ರೋಮೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ‘ಭವಿಷ್ಯ ನುಡಿಯೋದಕ್ಕೂ ಆರೋಪ ಮಾಡೋದಕ್ಕೂ ವ್ಯತ್ಯಾಸವಿದೆ!’ ಅಂತಾ ಕ್ಯಾಪ್ಶನ್ ಬರೆಯಲಾಗಿದೆ. ಈ ಪ್ರೋಮೋ ಈಗ ವೈರಲ್ ಆಗಿದ್ದು, ವಿವಿಧ ರೀತಿಯಲ್ಲಿ ನೆಟಿಜನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.