Kichcha Sudeep: ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಕಿಚ್ಚ ಸುದೀಪ್‌ ಶನಿವಾರ (ಆಗಸ್ಟ್‌ 31) ದಂದು ತುರ್ತು ಸುದ್ದಿಗೋಷ್ಠಿ ಕರೆದಿದ್ದರು, ಈ ಸುದ್ದಿಗೋಷ್ಠಿಯಲ್ಲಿ ಸೆಪ್ಟೆಂಬರ್‌ನಲ್ಲಿ ಬರುತ್ತಿರುವ ತಮ್ಮ ಹುಟ್ಟುಹಬ್ಬದ ಸೆಲೆಬ್ರೇಷನ್‌ ಹಾಗೂ ತಮ್ಮ ಮುಂಬರುವ ಸಿನಿಮಾದ ಕುರಿತು ಅಪ್ಡೇಟ್‌ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಸೆಪ್ಟೆಂಬರ್‌ 02 ರಂದು ಸ್ಯಾಂಡಲ್‌ವುಡ್‌ ಸ್ಟಾರ್‌ ಕಿಚ್ಚ ಸುದೀಪ್‌ ಅವರ ಜನ್ಮದಿನ. ಕಿಚ್ಚನ ಹುಟ್ಟುಹಬ್ಬದ ಆಚರಣೆಗಾಗಿ ಫ್ಯಾನ್ಸ್‌ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಪ್ರತೀ ವರ್ಷ ಸುದೀಪ್‌ ಅವರ ಹುಟ್ಟುಹಬ್ಬವನ್ನು ತಮ್ಮ ಮನೆಯಲ್ಲಿ ಆಚರಿಸಿಕೊಳ್ಳುತ್ತಿದ್ದರು, ಕಿಚ್ಚನ ಫ್ಯಾನ್ಸ್‌ ತಮ್ಮ ನೆಚ್ಚಿನ ನಟನ ಹುಟ್ಟಹಬ್ಬವನ್ನು ಆಚರಿಸಲು ಕಿಚ್ಚನ ಮನೆಯ ಮುಂದೆ ಸಾಗರದಂತೆ ಸೇರುತ್ತಿದ್ದರು. ಈ ಕುರಿತು ತಮಗೆ ತೊಂದರೆಯಾಗುತ್ತಿದೆ ಎಂದು ಅಕ್ಕ ಪಕ್ಕದ ಮನೆಯವರು ದೂರಿದ್ದರು, ಈ ಕಾರಣ ಕಿಚ್‌ ಸುದೀಪ್‌ ಈ ಭಾರಿ ತಮ್ಮ ಹುಟ್ಟುಹಬ್ಬವನ್ನು ತಮ್ಮ ಮನೆ ಮುಂದೆ ಅಲ್ಲದೆ ಬೇರೆ ಕಡೆ ಆಚರಿಸಿಕೊಳ್ಳಲು ತಯಾರಿ ನಡೆಸಿದ್ದಾರೆ.


ಹೌದು, ಶನಿವಾರ ಬೆಳಗ್ಗೆ ತುರ್ತು ಪತ್ರೀಕಾಗೋಷ್ಠಿ ಕರೆದಿರುವ ಸುದೀಪ್‌, " ಕಳೆದ ವರ್ಷ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವಾರು ಗೊಂದಲಗಳು ಉಂಟಾಗಿದ್ದವು, ನೆರೆ ಹೊರೆಯವರು ತಮಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದರು, ಇದೇ ಕಾರಣದಿಂದಾಗಿ ಈ ಭಾರಿ ಹುಟ್ಟುಹಬ್ಬದ ಆಚರಣೆಯನ್ನು ಮನೆಯ ಬಳಿ ಮಾಡಬಾರದು ಎಂದು ನಿರ್ಧರಿಸಿದ್ದೇನೆ. ಜಯನಗರದಲ್ಲಿನ ಟೆಲಿಫೋನ್‌ ಎಕ್ಸ್‌ಜೇಂಜ್‌ ಬಳಿ MES ಎಂಬ ಗ್ರೌಂಡ್‌ ಇದೆ, ಅಲ್ಲಿ ನಾನು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯ ವರೆಗೆ ಲಭ್ಯವಿರುತ್ತೇನೆ. ನೀವು ಅಲ್ಲಿಗೆ ಬಂದು ನನ್ನನ್ನು ಭೇಟಿಯಾಗಬಹುದು" ಎಂದು ಸುದೀಪ್‌ ಅವರು ತಮ್ಮ ಹುಟ್ಟುಹಬ್ಬದ ಆಚರಣೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 


"ಕಳೆದ ವರ್ಷ ಫ್ಯಾನ್ಸ್‌ ಬ್ಯಾರಿಕೇಡ್‌ ಒಡೆದು ಒಳಗೆ ಬರಲು ಪ್ರಯತ್ನಿಸಿ ಸಾಕಷ್ಟು ಗೊಂದಲಗಳನ್ನುಂಟು ಮಾಡಿತ್ತು, ಈ ಭಾರಿ ಅಂತಹ ಯಾವುದೇ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ. ಕಳೆದ ಭಾರಿ ಅನೇಕರನ್ನು ಬೇಟಿ ಮಾಡಲು ಸಾಧ್ಯವಾಗಲಿಲ್ಲ ಅದಕ್ಕೆ ನನ್ನ ಕ್ಷಮೆ ಇರಲಿ. ಆದರೆ ಈ ಭಾರಿ ಹಾಗೆ ಆಗುವುದಿಲ್ಲ, ಸಾಸಕ ಸಿಕೆ ರಾಮಮೂತ್ತಿ ಈ ಭಾರಿ ಎಲ್ಲಾ ವ್ಯವಸ್ತೆಗಳನ್ನು ಮಾಡಿಕೊಟ್ಟಿದ್ದಾರೆ. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದ, ಇನ್ನೂ ಹುಟ್ಟುಬ್ಬದ ಸೆಲೆಬ್ರೇಷನ್‌ಗೆ ಯಾರೂ ಸಹ ಕೇಕ್‌ಗಳನ್ನು ತಂದು ವೇಸ್ಟ್‌ ಮಾಡಬೇಡಿ, ಆ ಕೇಕ್‌ಗಾಗಿ ವೇಸ್ಟ್‌ ಮಾಡುವ ದುಡ್ಡನ್ನು, ಯಾರಿಗಾದರೂ ಊಟ ನೀಡಲು ಬಳಸಿ" ಎಂದು ಕೇಳಿಕೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.