Kiccha Sudeep, Bigg Boss Season 10: ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಇದು 10ನೇ ಸೀಸನ್. ಈ ಸೀಸನ್’ನಲ್ಲಿ ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಕೆ ಮಾಡಿ ಸ್ನೇಹಿತ್ ಮತ್ತು ಮೈಕಲ್ ಅವರನ್ನು ಸೇವ್ ಮಾಡಿದ್ದಾರೆ. ಈ ಬೆಳವಣಿಗೆ ಕೇವಲ ಸ್ಪರ್ಧೆಯ ದೃಷ್ಟಿಕೋನದಿಂದಲ್ಲ. ಬದಲಾಗಿ ಕನ್ನಡದ ಮೇಲಿನ ವಿಶೇಷ ಅಭಿಮಾನದಿಂದ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಾರದಲ್ಲಿ 3 ಬಾರಿ ಪೇರಳೆ ಜ್ಯೂಸ್ ಕುಡಿಯಿರಿ: ಈ ಕಾಯಿಲೆಗಳಿಂದ ಪಡೆಯಿರಿ ಶಾಶ್ವತ ಮುಕ್ತಿ


ವೀಕೆಂಡ್ ಬಂತೆಂದರೆ ಸ್ಪರ್ಧಿಗಳಿಗೆ ನಡುಕ, ಆದ್ರೆ ವೀಕ್ಷಕರಿಗೆ ಕಿಚ್ಚನ ಮಾತು ಕೇಳೋ ತವಕ. ಅಂದಹಾಗೆ ಈ ವಾರ ದೊಡ್ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗ್ಬೇಕಿತ್ತು. ಆದರೆ ಈ ವಾರ ಯಾರೂ ಕೂಡ ಹೊರಹೋಗಿಲ್ಲ.


ಕೊನೆಯದಾಗಿ ಈ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ನೇಹಿತ್ ಮತ್ತು ಮೈಕಲ್ ಇದ್ದರು. ಎಲ್ಲರೂ ಈ ವಾರ ಸ್ನೇಹಿತ್ ಮನೆಯಿಂದ ಹೊರ ಬರ್ತಾರೆ ಎಂದು ಅಂದುಕೊಂಡಿದ್ದರು. ಆದರೆ, ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರವನ್ನು  ಬಳಸಿಕೊಂಡು ಮೈಕಲ್ ಮತ್ತು ಸ್ನೇಹಿತ್ ಅವರನ್ನು ಮನೆಯಲ್ಲೇ ಉಳಿಸಿಕೊಂಡಿದ್ದಾರೆ.


ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದರೂ ಕಳಪೆ ದಾಖಲೆ ಬರೆದ ರಿಂಕು ಸಿಂಗ್: ಟಿ20 ಪದಾರ್ಪಣೆ ಮಾಡಿದ ಬಳಿಕ ಇದೇ ಮೊದಲು


ಕಿಚ್ಚ ಸುದೀಪ್ ಈ ವಿಶೇಷ ಅಧಿಕಾರ ಬಳಸಿರುವುದಕ್ಕೆ ಕಾರಣ ಕನ್ನಡದ ಮೇಲಿನ ಮೈಕಲ್ ಬದ್ಧತೆ. ಮೈಕಲ್ ಮತ್ತು ಸ್ನೇಹಿತ್ ಈ ವಾರ ಅದ್ಭುತವಾಗಿ ಆಟವಾಡಿದ್ದರು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿದ್ದ ಕಿಚ್ಚ, 10 ಸೀಸನ್’ಗಳ ಇತಿಹಾಸದಲ್ಲಿ ವಿಶೇಷ ಅಧಿಕಾರವನ್ನು ಮೊಟ್ಟ ಮೊದಲ ಬಾರಿಗೆ ಬಳಸಿಕೊಂಡು ಈ ಇಬ್ಬರು ಸ್ಪರ್ಧಿಗಳನ್ನು ಸೇವ್ ಮಾಡಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.