Kiccha Sudeep bodyguard birthday : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸರಳತೆಗೆ ಹೆಸರುವಾಸಿ. ತಮ್ಮ ಅಭಿಮಾನಿಗಳಿಂದ ಹಿಡಿದು ಸ್ಯಾಂಡಲ್‌ವುಡ್‌ ತಾರೆಗಳ ಕಷ್ಟಕ್ಕೂ ಬೆನ್ನೆಲುಬಾಗಿ ನಿಂತು ಸಪೋರ್ಟ್‌ ಮಾಡ್ತಾರೆ. ಇದೀಗ ತಮ್ಮ ಬಾಡಿಗಾರ್ಡ್ ಕಿಚ್ಚ ಕಿರಣ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಕುರಿತು ಕಿರಣ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ʼಕೆಂಪೇಗೌಡʼನ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಸುದೀಪ್ ತನ್ನ ಜೊತೆಯಲ್ಲಿರೋರನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ತನಗೆ ಯಾವಾಗಲೂ ರಕ್ಷಣೆ ನೀಡುವ ಅಂಗರಕ್ಷಕ ಕಿರಣ್ ಅವರನ್ನು ಕೂಡ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅದೇಷ್ಟೋ ಸರಿ ಈ ವಿಚಾರವನ್ನು ಕಿರಣ್‌ ಅವರೇ ಹೇಳಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕಿರಣ್ ಅವರಿಗೆ ವಿಶೇಷವಾಗಿ ವಿಶ್ ಮಾಡಿ ಕೇಕ್ ಕತ್ತರಿಸಿ ಕಿಚ್ಚ ಜನ್ಮದಿನ ಆಚರಿಸಿದ್ದಾರೆ.


"ಲವ್ ಬರ್ಡ್ಸ್" ಚಿತ್ರದ ಟೀಸರ್ ಗೆ ಹರಿದು ಬಂದ ಮೆಚ್ಚುಗೆಯ ಮಹಾಪೂರ


ಕಿರಣ್‌ ಬರ್ತ್‌ಡೇ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಅನೇಕರು ಜೊತೆಯಲ್ಲಿದ್ದರು. ಕಿರಣ್ ಅವರು ಸುದೀಪ್ ಜೊತೆ ಅನೇಕ ವರ್ಷಗಳಿಂದ ಜೊತೆಯಲ್ಲಿದ್ದಾರೆ. ಅಲ್ಲದೆ, ಈ ಹಿಂದೆ ಕಿಚ್ಚ ಸುದೀಪ್‌ ಅವರು, ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಬಾಡಿಗಾರ್ಡ್‌ ಕಿರಣ್‌ ಅವರಿಗೆ ದುಬಾರಿ ಬೈಕ್‌ ಗಿಪ್ಟ್‌ ನೀಡಿದ್ದರು. ಕಿಚ್ಚನ ಸರ್ಪೈಸ್ ಗಿಫ್ಟ್ ಪಡೆದ ಬಾಡಿಗಾರ್ಡ್ ಫುಲ್ ಎಕ್ಸೈಟ್ ಆಗಿದ್ದರು. ಇದೀಗ ಗ್ರ್ಯಾಂಡ್‌ ಆಗಿ ಕಿರಣ್‌ ಬರ್ತ್‌ ಡೇ ಆಚರಿಸಿದ್ದಾರೆ. 


ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ತಮ್ಮ ಕುಟುಂಬದವರಿಗೆ ಮಾತ್ರವಲ್ಲ, ತಮ್ಮ ಪರ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವಿಸುತ್ತಾರೆ. ಈ ಕಾರಣದಿಂದಲೇ ಅವರಿಗೆ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಫ್ಯಾನ್ಸ್‌ ಫಾಲೋಯಿಂಗ್‌ ಇದೆ. ಸದ್ಯ ಉಪೇಂದ್ರ ಮತ್ತು ಸುದೀಪ್‌ ಅಭಿನಯದ ಕಬ್ಜಾ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.