Kiccha Sudeep : ಮತ್ತೊಮ್ಮೆ ಕಲಾವಿದರ ಕುಟುಂಬಕ್ಕೆ ಸಹಾಯಾಸ್ತ ನೀಡಿದ ಕಿಚ್ಚ ಸುದೀಪ್..!
ನಟಿ ಸೋನು ಪಾಟೀಲ್ ಅವರ ತಾಯಿಯ ಚಿಕಿತ್ಸೆಗೆ ಸುದೀಪ್ ಸಹಾಯಾಸ್ತ
ಬೆಂಗಳೂರು : ಕಷ್ಟದಲ್ಲಿರುವ ಜನರಿಗಾಗಿ ಮಿಡಿಯುವ ನಟ ಕಿಚ್ಚ ಸುದೀಪ್ ಇದೀಗ ಕಲಾವಿದೆಯ ಕುಟುಂಬಕ್ಕೆ ನೆರವಾಗಿದ್ದಾರೆ. ಬಿಗ್ಬಾಸ್ ಸೀಜನ್ 6ರ ಸ್ಪರ್ಧಿ ನಟಿ ಸೋನು ಪಾಟೀಲ್ ಅವರ ತಾಯಿಯ ಚಿಕಿತ್ಸೆಗೆ ಸುದೀಪ್ ಸಹಾಯಾಸ್ತ ಚಾಚಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದ ಸೋನು ಪಾಟೀಲ್(Sonu Patil) ಅವರ ತಾಯಿ ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದು ಲಕ್ಷಾಂತರ ಬಿಲ್ ಆಗಿದೆ. ಸದ್ಯ ಆರ್ಥಿಕ ಸಂಕಷ್ಟದಲ್ಲಿರುವ ಸೋನುಗೆ ಸುದೀಪ್ ಬೆಳಕಾಗಿದ್ದಾರೆ.
ಇದನ್ನೂ ಓದಿ :Television Association : ಲಾಕ್ ಡೌನ್ ಹಿನ್ನೆಲೆ ಸಿನಿಮಾ, ಬಿಗ್ ಬಾಸ್, ಸೀರಿಯಲ್ ಶೂಟಿಂಗ್ ಬಂದ್..!
ಸುದೀಪ್(Kiccha Sudeep) ಸರ್ ನೆರವಿನಿಂದ ನಮ್ಮ ತಾಯಿಯ ಜೀವ ಉಳಿದಿದೆ ಎಂದು ಸೋನು ಪಾಟೀಲ್ ಕೃತಜ್ಞತೆ ಸಲ್ಲಿಸಿದ್ದಾರೆ. ಸೋನು ತಾಯಿಗೆ ಕೋವಿಡ್ ಲಕ್ಷಣಗಳಿದ್ದರೂ ಪಾಸಿಟಿವ್ ಬಂದಿಲ್ಲ. ಸ್ವಲ್ಪ ಉಸಿರಾಟದ ತೊಂದರೆ ಇದೆ.
ಇದನ್ನೂ ಓದಿ :Nora Fatehi- ಕ್ಯಾಮರಾ ಮುಂದೆಯೇ ಬದಲಾದ ನೋರಾ ಫತೇಹಿ ಬಟ್ಟೆ, ವಿಡಿಯೋ ವೈರಲ್
ಸುದೀಪ್ ಅವರು ಎರಡು ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್(Sudeep Charitable Trust) ನಿಂದ ಸಹಾಯ ಮಾಡಿದ್ದಾರೆ. ಹೀಗಾಗಿ ಸುದೀಪ್ ಅವರಿಗೆ ನಾನು ಚಿರಋಣಿಯಾಗಿದ್ದೇನೆ. ನಾನು ಅನೇಕರ ಬಳಿ ಸಹಾಯ ಕೇಳಿದ್ದೆ. ಯಾರೂ ಸಹಾಯ ಮಾಡಲಿಲ್ಲ ಎಂದು ಸೋನು ಭಾವುಕರಾದರು.
ಇದನ್ನೂ ಓದಿ :Kangana Ranaut : ಬಾಲಿವುಡ್ ನಟಿ ಕಂಗನಾ ರನೌತ್ ಗೆ ಕೋವಿಡ್ ಪಾಸಿಟಿವ್..!
ಮೊದಲೇ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಶೂಟಿಂಗ್ ನಿಂತಿದೆ. ಕೆಲಸವಿಲ್ಲದೇ ನನಗೆ ಲಕ್ಷಗಟ್ಟಲೆ ಹಣ(Money) ಹೊಂದಿಸುವುದಕ್ಕೆ ಕಷ್ಟ ಆಗಿತ್ತು. ಇಂತಹ ಸಂದಿಗ್ಧ ಸಮಯದಲ್ಲಿ ಸುದೀಪ್ ಸರ್ ಆಸರೆಯಾಗಿದ್ದಾರೆ. ಈಗ ನಮ್ಮ ತಾಯಿ ಹುಷಾರಾಗಿದ್ದಾರೆ ಎಂದು ಸೋನು ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :Bollywood: ಸಿನಿ ಕಾರ್ಮಿಕರ ಸಹಾಯಕ್ಕೆ ಧಾವಿಸಿದ 'ಭಾಯಿಜಾನ್' Salman Khan, 25 ಸಾವಿರ ಕಾರ್ಮಿಕರ ಖಾತೆಗೆ ನೇರ ಹಣ ವರ್ಗಾವಣೆ
ಸೋನು ಪಾಟಿಲ್ ತಾಯಿ ಮಾದೇವಿ ಪಾಟೀಲ(53) ಮೇ 4 ರಂದು ಬಾಗಲಕೋಟೆ ಶಕುಂತಲಾ ಆಸ್ಪತ್ರೆ(Hospital)ಗೆ ದಾಖಲಾಗಿದ್ದಾರೆ. ಸೋನು ಪಾಟೀಲ ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದವರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.