Kiccha Sudeep 47th Movie Update: ನಟ ಬಾದ್‌ಶಾ ಕಿಚ್ಚ ಸುದೀಪ್ ಸದ್ಯ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದು, ಮಹಾಬಲಿಪುರಂನಲ್ಲಿ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೀತಿದೆ. ಈಗಾಗಲೇ 70% ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದ್ದು, ಬಿಗ್ ಬಾಸ್ ನಡುವೆಯೂ ತಪ್ಪದೇ ಸುದೀಪ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದ್ದು, ಫೆಬ್ರವರಿಯಲ್ಲಿ ಚಿತ್ರ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಮ್ಯಾಕ್ಸ್  ಸಿನಿಮಾದಲ್ಲಿ ದಕ್ಷಿಣದ ಖ್ಯಾತ ನಟಿ ವರಲಕ್ಷ್ಮಿ  ನಟಿಸಲಿದ್ದಾರೆ ಎಂದು ಹೇಳಲಾಗಿದ್ದು, ಅದು ಸದ್ಯ ನಿಜವಾಗಿ, ಚೆನ್ನೈನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ವರಲಕ್ಷ್ಮಿ ಭಾಗಿಯಾಗಿದ್ದಾರೆ. ಅಧಿಕೃತವಾಗಿಯೇ ಈ ಮಾಹಿತಿಯನ್ನು ಚಿತ್ರತಂಡ ಹೇಳಿಕೊಂಡು, ‘ವೆಲ್ ಕಮ್ ಆನ್ ಬೋರ್ಡ್ ಮಹಾಲಕ್ಷ್ಮಿ’ ಎಂದು ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದೆ.ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಸುದೀಪ್ ಒಪ್ಪಿಕೊಂಡಿದ್ದರಿಂದ ಮತ್ತು ಅವರೇ ಚಿತ್ರವೊಂದನ್ನು ನಿರ್ದೇಶನ ಮಾಡಬೇಕಾಗಿರುವುದರಿಂದ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಸಿನಿಮಾದ ಶೂಟಿಂಗ್ ಮುಗಿಸಲಿದ್ದಾರಂತೆ.


ಇದನ್ನು ಓದಿ: Shiva Rajkumar: ಆಸ್ಪತ್ರೆಗೆ ದಾಖಲಾದ ನಟ ಶಿವರಾಜ್‌ ಕುಮಾರ್‌!


ಇದರ ಬೆನ್ನಲ್ಲೇ ಸುದೀಪ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡೋಕೆ ಮುಂದಾಗಿದ್ದು, ಈ ನಟನ ಮುಂದಿನ ಸಿನಿಮಾದ್ದು ಎನ್ನಲಾದ ಪೋಸ್ಟರ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಿಚ್ಚ 47 ಹೆಸರಿನಲ್ಲಿ ಕಿಚ್ಚನ ಅಭಿಮಾನಿಗಳು ಅದನ್ನು ಶೇರ್ ಮಾಡುತ್ತಿದ್ದು, ಅತೀ ಶೀಘ್ರದಲ್ಲೇ ಈ ಹೊಸ ಸಿನಿಮಾದ ಅಪ್ ಡೇಟ್ ಸಿಗಲಿದೆ ಎಂದೂ ಅವರು ಬರೆದುಕೊಂಡಿದ್ದಾರೆ.


ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕಿಚ್ಚ47 ಸಿನಿಮಾ ಅಪ್‌ಡೇಟ್ ಸಿಗುವ ಸೂಚನೆ ಸಿಕ್ಕಿದ್ದು, ಸಣ್ಣ ಟೀಸರ್ ಜೊತೆ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡುವ ಸಾಧ್ಯತೆಯಿದೆ. ಇದೇ ವಿಚಾರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದ್ದು, ಇನ್ನು ಪೋಸ್ಟರ್ ನೋಡಿದವರು ಇದು ಐತಿಹಾಸಿಕ ಸಿನಿಮಾನಾ? ಎಂದು ಹುಬ್ಬೇರಿಸಿದ್ದಾರೆ. ಅಂದಹಾಗೆ ಕಿಚ್ಚ47 ಚಿತ್ರವನ್ನು ತಮಿಳಿನ ಚೇರನ್ ನಿರ್ದೇಶನ ಮಾಡಲಿದ್ದು, ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಕಿಚ್ಚನಿಗೆ 'KGF' ಬೆಡಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾ