ಸ್ಯಾಂಡಲ್‌ವುಡ್‌ ಸಿನಿಮಾಗಳ ಗತ್ತು ಏನೆಂದು ಜಗತ್ತಿಗೇ ಗೊತ್ತು. ಅದರಲ್ಲೂ ಕನ್ನಡ ಸಿನಿಮಾ ರಂಗದ ಪಾಲಿಗೆ ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ' ಸಖತ್‌ ಸ್ಪೆಷಲ್.‌ ಯಾಕಂದ್ರೆ ಕನ್ನಡಿಗರ ಸಿನಿಮಾ ಒಂದು ಇದೇ ಮೊದಲ ಬಾರಿಗೆ ಹಾಲಿವುಡ್‌ನಲ್ಲೂ ತೆರೆಕಂಡು ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಲ್ಲೂ ಅಬ್ಬರ ತೋರುತ್ತಿರುವ ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ' ಭರ್ಜರಿ ಕಲೆಕ್ಷನ್‌ ಕೂಡ ಮಾಡಿದೆ.


COMMERCIAL BREAK
SCROLL TO CONTINUE READING

ಈವರೆಗೂ ದೊರೆತಿರುವ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ' ಸುಮಾರು ₹50 ಕೋಟಿ ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ. ಈ ಮೂಲಕ 'ವಿಕ್ರಾಂತ್‌ ರೋಣ' ಪರಭಾಷೆ ಚಿತ್ರಗಳಿಗೂ ಟಾಂಗ್‌ ಕೊಟ್ಟಿದ್ದು ಜೊತೆಗೆ ಹಾಲಿವುಡ್‌ನಲ್ಲೂ ಮಿಂಚು ಹರಿಸುತ್ತಿದೆ. ಪ್ಯಾನ್‌ ವರ್ಲ್ಡ್‌ ಸಿನಿಮಾ ಆಗಿ ಹೊರಹೊಮ್ಮಿದ್ದ 'ವಿಕ್ರಾಂತ್‌ ರೋಣ' 3ಡಿ ಹಾಗೂ 2ಡಿ ವರ್ಷನ್‌ನಲ್ಲಿ ಜಗತ್ತಿನಾದ್ಯಂತ ಸುಮಾರು 3 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್‌ ಆಗಿತ್ತು.


ವೀಕೆಂಡ್‌ನಲ್ಲಿ ಹವಾ..!
ಅಷ್ಟಕ್ಕೂ 'ವಿಕ್ರಾಂತ್‌ ರೋಣ' ಜುಲೈ 28ರ ಗುರುವಾರ ರಿಲೀಸ್‌ ಆಗಿದೆ. ಹೀಗೆ ಮೊದಲ ದಿನವೇ ಸುಮಾರು ₹50 ಕೋಟಿ ಕಲೆಕ್ಷನ್‌ ಮಾಡಿದೆ ಎಂದಾದರೆ, ಈ ದಿನ ಹೊರತುಪಡಿಸಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಬಾಕ್ಸ್‌ಆಫಿಸ್ ಕಲೆಕ್ಷನ್‌ ಮತ್ತಷ್ಟು ಹೆಚ್ಚಲಿದೆ. ಈ ಮೂಲಕ 4 ದಿನದಲ್ಲಿ ₹200 ಕೋಟಿ ಕ್ಲಬ್‌ ಸೇರುವ ಎಲ್ಲಾ ನಿರೀಕ್ಷೆ ದಟ್ಟವಾಗಿದೆ. ಈ ಮೂಲಕ ಕನ್ನಡಿಗರ ಮತ್ತೊಂದು ಸಿನಿಮಾ ಹೊಸ ಇತಿಹಾಸ ನಿರ್ಮಿಸಲಿದೆ.17 ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆ ಗಡಿಪಾರು!


ಪ್ರಿಯಾ ಸುದೀಪ್‌ ಹೇಳಿದ್ದೇನು..?
ಬೆಂಗಳೂರಿನ ಹೃದಯ ಭಾಗದ ಥಿಯೇಟರ್‌ನಲ್ಲಿ 'ವಿಕ್ರಾಂತ್‌ ರೋಣ' ಚಿತ್ರದ ಫಸ್ಟ್‌ ಶೋ ನೋಡಿದ ಪ್ರಿಯಾ ಸುದೀಪ್‌ ಅವರು, ತಾವು ಅಭಿಮಾನಿಯಾಗಿ ಸಿನಿಮಾ ನೋಡಲು ಬಂದಿರುವೆ. ಜಗತ್ತಿನಾದ್ಯಂತ 'ವಿಕ್ರಾಂತ್‌ ರೋಣ' ಹೊಸ ಇತಿಹಾಸ ಸೃಷ್ಟಿಸೋದು ಪಕ್ಕಾ ಎಂದರು. ಇನ್ನೂ ಸಿನಿಮಾದ ಪ್ರತಿಯೊಂದು ದೃಶ್ಯವನ್ನೂ ಭಾವನಾತ್ಮಕವಾಗಿ ಕಣ್ತುಂಬಿಕೊಂಡರು ಪ್ರಿಯಾ ಸುದೀಪ್.‌


ಅಂದಹಾಗೆ 'ವಿಕ್ರಾಂತ್‌ ರೋಣ' ಬಿಡುಗಡೆ ಹಿನ್ನೆಲೆ ನಿನ್ನೆಯಿಂದಲೇ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕಿಚ್ಚ ಸುದೀಪ್‌ ಫ್ಯಾನ್ಸ್ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. 3ಡಿ ಹಾಗೂ 2ಡಿ ವರ್ಶನ್‌ನಲ್ಲಿ 'ವಿಕ್ರಾಂತ್‌ ರೋಣ' ರಿಲೀಸ್‌ ಆಗಿದ್ದು, ಕಿಚ್ಚ ಸುದೀಪ್‌ ಹಾಗೂ ಅಪ್ಪು ಅವರು ಇರುವ ಕಟೌಟ್ಸ್‌ ಎಲ್ಲೆಲ್ಲೂ ಫುಲ್ ಮಿಂಚುತ್ತಿವೆ. ಜೊತೆಗೆ ಹೊರ ದೇಶಗಳಲ್ಲಿ ಕನ್ನಡಿಗರು 'ವಿಕ್ರಾಂತ್‌ ರೋಣ' ಸಿನಿಮಾಗೆ ಸಾಥ್‌ ನೀಡುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.