ಬ್ಯುಸಿ ಶೆಡ್ಯೂಲ್ ನಡುವೆ ಬ್ರೇಕ್ ತೆಗೆದುಕೊಂಡ ಕಿಚ್ಚ ಸುದೀಪ್!
ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಬಹುಭಾಷಾ ನಟ ಕಿಚ್ಚ ಸುದೀಪ್ ಶೂಟಿಂಗ್‌ನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ಬಂದಿದ್ಯಾಕೆ ಗೊತ್ತಾ..!
ಬೆಂಗಳೂರು: ಸದಾ ಬ್ಯುಸಿಯಾಗಿರುವ ಬಹುಭಾಷಾ ನಟ ಕಿಚ್ಚ ಸುದೀಪ್ ಬ್ಯುಸಿ ಶೆಡ್ಯೂಲ್ ನಡುವೆ ಬ್ರೇಕ್ ತೆಗೆದುಕೊಂಡಿದ್ದಾರೆ. ಇದೇನಪ್ಪಾ... ಸಲ್ಮಾನ್ ಜೊತೆ ದಬಾಂಗ್ -3 ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಸುದೀಪ್ ಯಾಕ್ ಇದ್ದಕ್ಕಿದ್ದ ಹಾಗೆ ಬ್ರೇಕ್ ತಕೊಂಡ್ರು ಅಂತಾ ಯೋಚಿಸ್ತಿದ್ದೀರಾ...?
ಸಾಮಾನ್ಯವಾಗಿ ಶೂಟಿಂಗ್‌ಗೆ ಅತಿ ವಿರಳವಾಗಿ ಬ್ರೇಕ್ ತೆಗೆದುಕೊಳ್ಳುವ ಸುದೀಪ್ ದಬಾಂಗ್ -3 ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಆದರೆ ಶೂಟಿಂಗ್‌ನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ಬಂದಿರುವುದು ಕೆಲವರಲ್ಲಿ ಅಚ್ಚರಿ ಮೂಡಿಸಿದೆ. ಆದರೆ, ಕಿಚ್ಚ ಸುದೀಪ್ ತಮ್ಮ ಮುದ್ದಿನ ಮಗಳು ಸಾನ್ವಿ ಹುಟ್ಟು ಹಬ್ಬದ ಆಚರಣೆಗಾಗಿ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ.
ಹೌದು, ಇಂದು ಕಿಚ್ಚ ಸುದೀಪ್ ಪುತ್ರಿ ಸಾನ್ವಿಯವರ ಜನ್ಮ ದಿನ. ಕಿಚ್ಚನಿಗೆ ಮಗಳು ಎಂದರೆ ಅಚ್ಚು-ಮೆಚ್ಚು ಎಂಬುದು ಎಲ್ಲರಿಗೂ ತಿಳಿದಿದೆ. ಸದಾ ಕುಟುಂಬಕ್ಕೆ ಸಮಯ ನೀಡುವ ಸುದೀಪ್ ಮುದ್ದಿನ ಮಗಳ ಬರ್ತ್‌ಡೇ ಮಿಸ್ ಮಾಡ್ತಾರಾ..!
ಉತ್ತಮ ನಟನಾಗಿ ಸಾಕಷ್ಟು ಹೆಸರು, ಕೀರ್ತಿ ಗಳಿಸಿರುವ ಕಿಚ್ಚ ಸುದೀಪ್, ಮಾದರಿ ತಂದೆಯಾಗಿ ಮಗಳ ಹುಟ್ಟು ಹಬ್ಬದ ಆಚರಣೆಗಾಗಿ ಶೂಟಿಂಗ್‌ನಿಂದ ಸಣ್ಣದೊಂದು ಬ್ರೇಕ್ ತೆಗೆದುಕೊಂಡಿದ್ದಾರೆ.
ಮಗಳ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಮಗಳ ಜೊತೆಗಿನ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಕಿಚ್ಚ ಸುದೀಪ್, "ನನ್ನ ಏಂಜಲ್, ನನ್ನ ಖುಷಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಾನು ಬೇಬಿ ಸದಾ ಖುಷಿಯಾಗಿರು. ಸದಾ ನಿನ್ನನ್ನು ಪ್ರೀತಿಸುತ್ತೇನೆ" ಎಂದಿದ್ದಾರೆ.
ನೂರಾರು ಕಾಲ ಸುಖವಾಗಿ ಬಾಳು, ಹ್ಯಾಪಿ ಹ್ಯಾಪಿ ಬರ್ತ್‌ಡೇ... ಸಾನ್ವಿ