ಬೆಂಗಳೂರು : 'ವಿಕ್ರಾಂತ್ ರೋಣ' (Vikrant Rona) ಕನ್ನಡದಲ್ಲಿ ಮಾತ್ರವಲ್ಲ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈಗಾಗಲೇ ಹಾಲಿವುಡ್‌ ಅಂಗಳಕ್ಕೆ 'ವಿಕ್ರಾಂತ್ ರೋಣ' ಹೆಜ್ಜೆ ಇಟ್ಟಿರುವುದು ಗೊತ್ತಿರೋ ವಿಚಾರ. ಹಾಗೇ ವಿಶ್ವದ ಹಲವು ಭಾಷೆಗಳಲ್ಲಿ 'ವಿಕ್ರಾಂತ್ ರೋಣ' ಡಬ್ಬಿಂಗ್‌ (Vikrant Rona Dubbing)ಕೂಡ ಮುಗಿದಿದೆ. ಕೆಲ ದಿನಗಳ ಹಿಂದೆ ಇಂಗ್ಲಿಷ್‌ ಟೀಸರ್‌ ((Vikrant Rona english teaser)ಬಿಡುಗಡೆ ಮಾಡಿದ್ದ 'ವಿಕ್ರಾಂತ್ ರೋಣ' ನಿರ್ದೇಶಕರು ಇದೀಗ ಕನ್ನಡ ವರ್ಷನ್‌ನ ವಿಡಿಯೋ ತುಣುಕನ್ನೂ ರಿಲೀಸ್‌ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅಂದಹಾಗೆ ಕಿಚ್ಚ ಸುದೀಪ್‌ (Kichcha Sudeep) ಕನ್ನಡ ಪ್ರೀತಿ ಎಂತಹದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ತೆಲುಗು ಸಿನಿಮಾ 'ಈಗ' ಸಮಾರಂಭದಲ್ಲೂ ಸುದೀಪ್‌ ಕನ್ನಡದಲ್ಲಿ ಮಾತನಾಡಿದ್ದರು. ಸುದೀಪ್‌ ಎಲ್ಲಿಗೆ ಹೋದರೂ ಕನ್ನಡದಲ್ಲಿ ಮಾತನಾಡುವ ಮೂಲಕ ತಮ್ಮ ಮಾತೃಭಾಷಾ ಪ್ರೀತಿಯನ್ನ ವ್ಯಕ್ತಪಡಿಸುತ್ತಾರೆ. ಇದೇ ರೀತಿ ಇದೀಗ ತಮ್ಮ 'ವಿಕ್ರಾಂತ್ ರೋಣ' (Vikrat Rona)ಚಿತ್ರದಲ್ಲೂ  ಸುದೀಪ್‌ ಕನ್ನಡ ಪ್ರೀತಿ ಪ್ರತಿಧ್ವನಿಸಿದೆ.


ಇದನ್ನೂ ಓದಿ : Rishab Shetty: ನಟ ರಿಷಬ್ ಶೆಟ್ಟಿ ಮನೆಗೆ ಕಾಲಿಟ್ಟ ಮುದ್ದಾದ ಪುಟಾಣಿ 'ಲಕ್ಷ್ಮೀ'


 ಸುದೀಪ್‌ ಡೈಲಾಗ್..!‌
ಕನ್ನಡ ವಿಡಿಯೋದಲ್ಲಿ ಸುದೀಪ್‌ ಪೊಲೀಸ್‌ ಠಾಣೆಗೆ ಎಂಟ್ರಿ ಕೊಡುತ್ತಾರೆ, ಆಗ ಪೊಲೀಸ್‌ ಕಾನ್ಸ್‌ಟೇಬಲ್‌ಗೆ 'ಏನ್ರಿ ನಿಮ್ ಸ್ಟೇಷನ್‌ನಲ್ಲಿ ಒಂದೊಂದು ಗಡಿಯಾರ ಒಂದೊಂದು ಟೈಂ ತೋರಿಸುತ್ತೆ..?' ಅಂತಾ‌ ನಟ ಸುದೀಪ್ ಪ್ರಶ್ನೆ ಮಾಡುತ್ತಾರೆ. ಈ ವೇಳೆ ನಟ ಕಿಚ್ಚ ಸುದೀಪ್‌ ಪ್ರಶ್ನೆಗೆ ಉತ್ತರ ನೀಡುವ ಪೊಲೀಸ್‌ ಕಾನ್ಸ್‌ಟೇಬಲ್‌, 'ಸರ್‌ ಕೀ ಕೊಡೋದು ಮರೆತುಬಿಟ್ಟಿದ್ದೀವಿ ರೀ' ಅಂತಾ ಉತ್ತರ ನೀಡುತ್ತಾರೆ. ಇದಕ್ಕೆ ನಟ ಸುದೀಪ್‌ 'ನಾವ್‌ ಬಂದಿದ್ದೀವಲ್ಲ ಕೊಡ್ತೀವಿ ಬಿಡಿ ಈಗ' ಅಂತಾ ಕೌಂಟರ್‌ ಡೈಲಾಗ್‌ ಹೊಡೆಯುತ್ತಾರೆ (Vikrant Rona dialouge).


Kajol And Kareena Kapoor: ನಡುರಸ್ತೆಯಲ್ಲಿಯೇ ಮುಖಾಮುಖಿಯಾದ ಕಾಜೋಲ್-ಕರೀನಾ, ಮುಂದೇನಾಯ್ತು ತಿಳಿಯಲು WATCH VIDEO


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.