ಬೆಂಗಳೂರು: ಸ್ಯಾಂಡಲ್‌ವುಡ್‌ ಘಮಲು ಹಾಲಿವುಡ್‌ ಅಂಗಳಕ್ಕೆ ಹರಡಲು ಕೌಂಟ್‌ಡೌನ್‌ ಶುರುವಾಗಿದ್ದು, ನಾಳೆ ‘ವಿಕ್ರಾಂತ್ ರೋಣ’ ಚಿತ್ರ ಕನ್ನಡ ಸಿನಿಮಾ ಒಂದನ್ನ ಹಾಲಿವುಡ್‌ಗೆ ಕೊಂಡೊಯ್ದ ಸಾಧನೆ ಮಾಡಲಿದೆ. ಇದರ ಜೊತೆಗೆ ‘ವಿಕ್ರಾಂತ್ ರೋಣ’ ಸಿನಿಮಾ ಭಾವನಾತ್ಮಕ ಬಂಧನಕ್ಕೂ ಸಾಕ್ಷಿಯಾಗುತ್ತಿರುವುದು, ನಟ ಕಿಚ್ಚ ಸುದೀಪ್‌ ಮೇಲಿನ ಅಭಿಮಾನಿಗಳ ಅಭಿಮಾನದ ಪ್ರತೀಕವಾಗಿದೆ.


COMMERCIAL BREAK
SCROLL TO CONTINUE READING

ಅಂದಹಾಗೆ ‘ವಿಕ್ರಾಂತ್ ರೋಣ’ ಪೋಸ್ಟರ್‌ಗಳಲ್ಲಿ ಕಿಚ್ಚ ಸುದೀಪ್‌ ಅವರು ಮಾತ್ರ ಇಲ್ಲ. ಕಿಚ್ಚ ಸುದೀಪ್‌ ಅವರ ಜೊತೆಗೆ ಕರ್ನಾಟಕ ರತ್ನ ಡಾ.ಪುನೀತ್‌ ರಾಜ್‌ಕುಮಾರ್‌ ಕೂಡ ಕಂಗೊಳಿಸುತ್ತಿದ್ದಾರೆ. ಕಿಚ್ಚ ಸುದೀಪ್‌ ಹಾಗೂ ಅಪ್ಪು ಅವರ ಸ್ನೇಹಕ್ಕೆ ಸಾಕ್ಷಿಯಾಗಿ ಉಳಿದಿಕೊಂಡಿದ್ದ ಫೋಟೋ ಇದೀಗ ಇಡೀ ಜಗತ್ತಿನಾದ್ಯಂತ ಪೋಸ್ಟರ್‌ ರೂಪ ಪಡೆದಿದೆ. ಹೀಗೆ ಅಪ್ಪು ಅಭಿಮಾನಿಗಳು ಕೂಡ ಕಿಚ್ಚ ಸುದೀಪ್‌ ಸಿನಿಮಾ ‘ವಿಕ್ರಾಂತ್ ರೋಣ’ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಅಪ್ಪು ಅಭಿಮಾನಿಗಳಿಗೆ ಸ್ಪೆಷಲ್‌ ಥ್ಯಾಂಕ್ಸ್‌ ಹೇಳಿದ್ದಾರೆ ನಟ ಕಿಚ್ಚ ಸುದೀಪ್‌ ಅವರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.