Sandalwood: ʼಹೈಡ್ ಆ್ಯಂಡ್ ಸೀಕ್’ ಸಿನಿಮಾದಲ್ಲಿ ಕಿಡ್ನಾಪ್ ಕಹಾನಿ ಇದೆ. ಈ ಸಿನಿಮಾದಲ್ಲಿ ಧನ್ಯಾ ರಾಮ್ ಕುಮಾರ್ ಮತ್ತು ಅನೂಪ್ ರೇವಣ್ಣ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಪುನೀತ್ ನಾಗರಾಜು ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

 ಕನ್ನಡದ ‘ಹೈಡ್ ಆ್ಯಂಡ್ ಸೀಕ್ ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಶೀರ್ಷಿಕೆಯ ಕಾರಣದಿಂದಲೇ ಈ ಚಿತ್ರ ಕೌತುಕ ಮೂಡಿಸಿತ್ತು. ಈಗ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘ಹೈಡ್ ಆ್ಯಂಡ್ ಸೀಕ್ ’ ಚಿತ್ರದಲ್ಲಿ ಅನೂಪ್ ರೇವಣ್ಣ ಅವರು ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಧನ್ಯಾ ರಾಮ್ ಕುಮಾರ್ ಅಭಿನಯಿಸಿದ್ದಾರೆ. 


ಮೋಷನ್ ಪೋಸ್ಟರ್ ನಲ್ಲಿ ಇವರಿಬ್ಬರ ಗೆಟಪ್ ಹೈಲೈಟ್ ಆಗಿದೆ. ಬಹಳ ದಿನಗಳಿಂದ ಈ ಚಿತ್ರಕ್ಕಾಗಿ ಸಿನಿಪ್ರಿಯರು ಕಾದಿದ್ದರು. ಕಡೆಗೂ ಈ ಸಿನಿಮಾವನ್ನು ಚಿತ್ರಮಂದಿರಕ್ಕೆ ತರಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಮಾರ್ಚ್ 15ರಂದು ‘ಹೈಡ್ ಆ್ಯಂಡ್ ಸೀಕ್ ’ ಬಿಡುಗಡೆ ಆಗಲಿದೆ


ಇದನ್ನೂ ಓದಿ-Hide And Seek: ‘ಹೈಡ್​ ಆ್ಯಂಡ್​ ಸೀಕ್​’ ಮೋಷನ್‌ ಪೋಸ್ಟರ್‌ ಔಟ್!


ಹೈಡ್ ಆ್ಯಂಡ್ ಸೀಕ್ ’ ಸಿನಿಮಾಗೆ ಪುನೀತ್ ನಾಗರಾಜು ನಿರ್ದೇಶನ ಮಾಡಿದ್ದಾರೆ. ವಸಂತ್ ಎಂ. ರಾವ್ ಕುಲಕರ್ಣಿ, ಪುನೀತ್ ನಾಗರಾಜು ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ಸುನೇರಿ ಆರ್ಟ್ ಕ್ರಿಯೇಷನ್ಸ್ ’ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗಿದೆ. ಪಿಜೋ ಪಿ. ಜಾನ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. 


ಮಧು ತುಂಬೆಕೆರೆ ಅವರು ಸಂಕಲನ ಮಾಡಿದ್ದಾರೆ. ‘ಹೈಡ್ ಆ್ಯಂಡ್ ಸೀಕ್ ’ ಚಿತ್ರಕ್ಕೆ ಸ್ಯಾಂಡಿ ಅಡ್ಡಂಕಿ ಅವರು ಸಂಗೀತ ನೀಡಿದ್ದಾರೆ. ಡಾ. ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಈ ಸಿನಿಮಾದಲ್ಲಿ ಉದ್ಯಮಿಯ ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಅವರು ಒಪ್ಪಿಕೊಂಡ ಎರಡನೇ ಸಿನಿಮಾ. 


ರಿವರ್ಸ್ ಸ್ಕ್ರೀನ್ ಪ್ಲೇ ಈ ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡದವರು ಹೇಳಿರುವುದು ಕೌತುಕ ಮೂಡಿಸಿದೆ. ಕಥೆಯಲ್ಲಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳು ಇವೆ. ಈ ಕಾರಣದಿಂದ ಅನೂಪ್ ರೇವಣ್ಣ ಮತ್ತು ಧನ್ಯಾ ರಾಮ್ ಕುಮಾರ್ ಅವರು ಈ ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಮಾರ್ಚ್ 15ರಂದು ‘ಹೈಡ್ ಆ್ಯಂಡ್ ಸೀಕ್ ’ ತೆರೆಕಾಣಲಿದೆ. ಸಿನಿಪ್ರಿಯರು ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಸಿನಿಮಾದ ಪ್ರಮೋಷನ್ ಕಾರ್ಯ ಭರದಿಂದ ಸಾಗುತ್ತಿದೆ.


ಇದನ್ನೂ ಓದಿ-Hide And Seek: ‘ಹೈಡ್​ ಆ್ಯಂಡ್​ ಸೀಕ್​’ ಮೋಷನ್‌ ಪೋಸ್ಟರ್‌ ಔಟ್!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.