ಬೆಂಗಳೂರು: ಇತ್ತೀಚೆಗೆ ತೆರೆಕಂಡು, ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವ "777 ಚಾರ್ಲಿ" ಚಿತ್ರವನ್ನು ನಿರ್ದೇಶಕ ಕಿರಣ್ ರಾಜ್ ಅವರು ಈಗ ತಮ್ಮೂರಾಗಿರುವ ಕಾಸರಗೋಡಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೋರಿಸಲು ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಈ ವಿಷಯವನ್ನು ಕಾಸರಗೋಡಿನ ಡಿಡಿಇ ಅವರಿಗೆ ಕಿರಣ್ ರಾಜ್  ಲಿಖಿತವಾಗಿ ತಿಳಿಸಿದ್ದಾರೆ.ಈಗ ನಿರ್ದೇಶಕರ ಮನವಿಗೆ ಸ್ಪಂದಿಸಿರುವ ಡಿಡಿಇ ಅವರಿಂದ ಉತ್ತಮ ಸ್ಪಂದನೆ ದೊರಕಿದೆ. 


ಇದನ್ನೂ ಓದಿ : Heavy rain Fall : ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಭಾರಿ‌ ಮಳೆ :ಹವಾಮಾನ ಇಲಾಖೆ 


ಕಾಸರಗೋಡಿನ ಮೆಹಬೂಬ್ ಚಿತ್ರಮಂದಿರದವರು ರಿಯಾಯಿತಿ ದರದಲ್ಲಿ "777ಚಾರ್ಲಿ" ಚಿತ್ರವನ್ನು ತೋರಿಸಲು ಮುಂದಾಗಿದ್ದಾರೆ. 130 ರೂಪಾಯಿ ಟಿಕೇಟ್ ದರವಿದ್ದು, ವಿದ್ಯಾರ್ಥಿಗಳಿಗೆ 80 ರೂಪಾಯಿಗೆ ಟಿಕೇಟ್ ನೀಡಲು ನಿರ್ಧರಿಸಲಾಗಿದೆ. ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆತರುವ ಅಧ್ಯಾಪಕರಿಗೆ ಉಚಿತ ಪ್ರವೇಶವಿರುತ್ತದೆ. 


ಇದನ್ನೂ ಓದಿ :ಬಿಬಿಎಂಪಿ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ಛೀಮಾರಿ


ಈ ವಿಷಯದ ಕುರಿತು ಧನಾತ್ಮಕವಾಗಿ ಸ್ಪಂದಿಸಿರುವ ಡಿಡಿಇ ಹಾಗೂ ಚಿತ್ರಮಂದಿರ ಮಾಲೀಕರಿಗೆ ನಿರ್ದೇಶಕ ಕಿರಣ್ ರಾಜ್ ಧನ್ಯವಾದ ತಿಳಿಸಿದ್ದಾರೆ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದು.


ರೋಹಿತ್  - 8050884423


ಮೋಹಿತ್ - 6238236114


ಭರತ್ ರಾಜ್ - 8073895340


ರತ್ನಾಕರ್ ಮಲಮೂಲೆ - 9446095543https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.