“ವಿಡಿಯೋ ಮಾಡಿ ಅದನ್ನು ನಿಮ್ಮ ಜೊತೆ ಹಂಚಿಕೊಳ್ತೀನಿ”: ಡಿವೋರ್ಸ್ ಬಳಿಕ ಪೋಸ್ಟ್ ಶೇರ್ ಮಾಡಿ ಕಿರಿಕ್ ಕೀರ್ತಿ ಹೇಳಿದ್ದೇನು..?
Kirik Keerthi New Post: ಫೇಸ್ಬುಕ್ ಪೋಸ್ಟ್ ಕೂಡ ಹಾಕಿ “ಇನ್ಮೇಲೆ ಕರಿಮಣಿ ಮಾಲೀಕ ನಾನಲ್ಲ” ಎಂದು ಬರೆದುಕೊಂಡಿದ್ದರು. ಅಷ್ಟೇ ಅಲ್ಲದೆ ಈ ಮೂಲಕ ವಿಚ್ಛೇದನದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದರು
Kirik Keerthi New Post: ಬಿಗ್ ಬಾಸ್ ಕನ್ನಡ ಖ್ಯಾತಿಯ ಕಿರಿಕ್ ಕೀರ್ತಿ ತಮ್ಮ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ಅಂತ್ಯ ಹಾಡಿದ್ದಾರೆ. ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಕೂಡ ಹಾಕಿ “ಇನ್ಮೇಲೆ ಕರಿಮಣಿ ಮಾಲೀಕ ನಾನಲ್ಲ” ಎಂದು ಬರೆದುಕೊಂಡಿದ್ದರು. ಅಷ್ಟೇ ಅಲ್ಲದೆ ಈ ಮೂಲಕ ವಿಚ್ಛೇದನದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದರು.
ಇದನ್ನೂ ಓದಿ: ನನಗೆ ಇಬ್ಬರು ಮಕ್ಕಳಿದ್ದಾರೆ, ಆದರೆ ನೀವು ಇನ್ನೂ: ವಿರಾಟ್ ಬಗ್ಗೆ ಇಂಗ್ಲೆಂಡ್ ಆಟಗಾರ ಹೀಗಂದಿದ್ದೇಕೆ
“ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ. ಅಧಿಕೃತವಾಗಿ ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ” ಎಂದು ಕಿರಿಕ್ ಕೀರ್ತಿ ವಿಚ್ಛೇದನವನ್ನು ಘೋಷಿಸಿದ್ದರು.
ಇದೀಗ ಮತ್ತೊಂದು ಪೋಸ್ಟ್ ಹಾಕಿದ್ದು, “ಸಾಕಷ್ಟು ದಿನದಿಂದ ಒದ್ದಾಡಿದ್ದಕ್ಕೆ ಕೊನೆಗೂ ಪರಿಹಾರ ಕೊಡೋಕೆ ಭಗವಂತ ಡಿಸೈಡ್ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
“ಅಬ್ಬಬ್ಬಾ… ಕಳೆದ 4-5 ತಿಂಗಳಿಂದ ಕಳೆದ ಒಂದೊಂದು ದಿನಗಳು ಒಂದೊಂದು ಯುಗ ಅನಿಸಿಬಿಟ್ಟಿತ್ತು. ಅದೇನೋ ಹೇಳ್ತಾರಲ್ಲ, ಶನಿ ಹೆಗಲೇರಿದ್ದಾರೆ ಅಂತ, ಹಾಗಾಗಿತ್ತು. ಎಲ್ಲದಕ್ಕೂ ಅಡೆತಡೆ... ಎಲ್ಲವೂ ಕೈಗೆಟುಕುವುದರೊಳಗೆ ಕಿಲೋಮೀಟರ್ ದೂರ ಹೋಗೀಬಿಡ್ತಿತ್ತು. ಯಾರು ನನ್ನವರು, ಯಾರು ನನ್ನವರಲ್ಲ ಅಂತ ಅರ್ಥ ಮಾಡಿಕೊಳ್ಳೋಕೆ ತುಂಬಾ ಸಮಯ ಹಿಡೀತು. ಆದ್ರೆ ಏನನ್ನಾದ್ರೂ ಕೊಡೋಕೆ ಮುಂಚೆ ಭಗವಂತ ಸಿಕ್ಕಾಪಟ್ಟೆ ಕಿತ್ತುಕೊಳ್ತಾನಂತೆ. ಹಾಗೆ ಸಾಕಷ್ಟು ಕಿತ್ತುಕೊಂಡು ಕೊನೆಗೂ ನನಗೆ ಭಗವಂತ ಕೃಪೆ ತೋರೋಕೆ ನಿರ್ಧಾರ ಮಾಡಿದ್ದಾರೆ. ಕಣ್ಣೀರು, ಬೇಜಾರು, ನೋವುಗಳಿಗೆ ಪುಲ್ ಸ್ಟಾಪ್ ಇಟ್ಟು ಬದುಕಿಸೋ ನಿರ್ಧಾರ ಮಾಡಿದಂತಿದೆ. ಸಾಕಷ್ಟು ದಿನದಿಂದ ಒದ್ದಾಡಿದ್ದಕ್ಕೆ ಕೊನೆಗೂ ಪರಿಹಾರ ಕೊಡೋಕೆ ಭಗವಂತ ಡಿಸೈಡ್ ಮಾಡಿದ್ದಾರೆ. ಎಷ್ಟೋ ಜನರ ಜೊತೆ ಮಾತಾಡಿಲ್ಲ. ಸಾವಿರಾರು ಕಾಲ್ ಎತ್ತಿಲ್ಲ. ಮೆಸೇಜ್‌ಗಳನ್ನು ನೋಡಿ ರಿಪ್ಲೆ ಮಾಡಿಲ್ಲ. ಸಾಕಪ್ಪಾ ಸಾಕು ಅನಿಸಿಬಿಟ್ಟಿತ್ತು. ಈ ಟೈಮಲ್ಲಿ ನೊಂದುಕೊಂಡವರಿಗೆ, ಬೈದುಕೊಂಡವರಿಗೆ ಕ್ಷಮೆ ಕೇಳ್ತೀನಿ. ನನ್ನ ಲೈಫಲ್ಲೂ ನನ್ನ ದಿನಗಳು ಬರ್ತಿದೆ.. ನಾನಾಗೇ ನಿಮಗೆ ಕಾಲ್ ಮಾಡೋ ದಿನಗಳು ಬರ್ತಿದೆ. ನಿಮ್ಮೊಂದಿಗೆ ಕೂತು ನಗ್ತಾ ಮಾತಾಡೋ ಟೈಮ್ ಬರ್ತಿದೆ. ಸೋಷಿಯಲ್ ಮೀಡಿಯಾದಿಂದಲೂ ದೂರ ಇದ್ದವನು ಮತ್ತೆ ಒಂದೊಂದೇ ಖುಷಿ ಹಂಚಿಕೊಳ್ಳೋ ಕಾಲ ಬರ್ತಿದೆ. ಒಂಥರಾ ಕುಬ್ಹವಾಗಿದ್ದ ಹೃದಯದಲ್ಲಿ ಲವಲವಿಕೆ ಬರುವಂತಾಗಲಿದೆ... Everything going to be perfect soon. ವೀಡಿಯೋ ಮಾಡಿ ಅದನ್ನು ನಿಮ್ಮ ಜೊತೆ ಹಂಚಿಕೊಳ್ತೀನಿ. ನಿಟ್ಟುಸಿರು ಬಿಟ್ಟು ಸಂಭ್ರಮಿಸ್ತೀನಿ. Its just matter of time. I am sorry for all these days. ಅದೆಷ್ಟೋ ಜೀವಗಳ ಹಾರೈಕೆ, ಆಶೀರ್ವಾದ ಸದ್ಯದಲ್ಲೇ ಫಲಿಸಲಿದೆ. Yes...I am coming back. ಧನ್ಯವಾದ ನಿಮಗೆಲ್ಲಾ” ಎಂದು ಇನ್’ಸ್ಟಾಗ್ರಾಂ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ನೆದರ್ಲ್ಯಾಂಡ್ಸ್ ಶತಕ: ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ